PHOTOS

Siddharth-Kiara reception: ಸಿದ್ಧಾರ್ಥ್-ಕಿಯಾರಾ ಆರತಕ್ಷತೆಯಲ್ಲಿ ಆಲಿಯಾ: ಮಾಜಿ ಗೆಳತಿ ಬರುತ್ತಿದ್ದಂತೆ ಸಿದ್ ಮಾಡಿದ್ದೇನು?

Siddharth-Kiara reception Photos: ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ತಮ್ಮ ವಿವಾಹದ ಆರತಕ್ಷತೆಯನ್ನು ಮುಂಬೈನಲ್ಲಿ ಆಯೋಜಿ...

Advertisement
1/7
ಸಿದ್ಧಾರ್ಥ್-ಕಿಯಾರಾ
ಸಿದ್ಧಾರ್ಥ್-ಕಿಯಾರಾ

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆಬ್ರವರಿ 7, 2023 ರಂದು ವಿವಾಹವಾದರು. ಇಂದು ಅವರ ವಿವಾಹದ ಆರತಕ್ಷತೆಯನ್ನು ಮುಂಬೈನಲ್ಲಿ ಆಯೋಜಿಸಲಾಗಿದೆ. ಸಿದ್ಧಾರ್ಥ್ ಮತ್ತು ಕಿಯಾರಾ ಅವರ ರಿಸೆಪ್ಷನ್ ಲುಕ್ ಅನ್ನು ನೀವು ಇಲ್ಲಿ ನೋಡಬಹುದು.

2/7
ಸಿದ್ಧಾರ್ಥ್-ಕಿಯಾರಾ
ಸಿದ್ಧಾರ್ಥ್-ಕಿಯಾರಾ

ಸಿಂಗಂ ನಟ ಅಜಯ್ ದೇವಗನ್ ಮತ್ತು ಅವರ ಪತ್ನಿ, ನಟಿ ಕಾಜೋಲ್ ಕೂಡ ಸಿದ್ಧಾರ್ಥ್ ಮತ್ತು ಕಿಯಾರಾ ಅವರ ಮದುವೆಯ ಆರತಕ್ಷತೆಗೆ ಆಗಮಿಸಿದ್ದಾರೆ. ಅಜಯ್ ಬೂದು ಬಣ್ಣದ ಸೂಟ್‌ನಲ್ಲಿ ಧರಿಸಿದ್ದರೆ, ಕಾಜೋಲ್ ನೆಟ್ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ.

3/7
ಸಿದ್ಧಾರ್ಥ್-ಕಿಯಾರಾ
ಸಿದ್ಧಾರ್ಥ್-ಕಿಯಾರಾ

ಸಿದ್ಧಾರ್ಥ್ ಮಲ್ಹೋತ್ರಾ ಅವರ ಮಾಜಿ ಗೆಳತಿ ಮತ್ತು ನಟಿ ಆಲಿಯಾ ಭಟ್ ಕೂಡ ಸಿದ್ಧಾರ್ಥ್ ಕಿಯಾರಾ ಅವರ ಮದುವೆಯ ಆರತಕ್ಷತೆಗೆ ಆಗಮಿಸಿದ್ದಾರೆರೆ. ಆಲಿಯಾ ಮೊದಲಿಗೆ ನಿರ್ದೇಶಕ ಅಯಾನ್ ಮುಖರ್ಜಿ ಅವರೊಂದಿಗೆ ಪೋಸ್ ನೀಡಿದ್ದು, ಎರಡನೇ ಫೋಟೋದಲ್ಲಿ ತನ್ನ ಅತ್ತೆ ನೀತು ಕಪೂರ್ ಜೊತೆ ನಿಂತಿದ್ದಾರೆ. ಆಲಿಯಾ ಆಗಮಿಸುತ್ತಿದ್ದಂತೆ ಸಿದ್ ಹಾಗೂ ಕಿಯಾರ ಅವರನ್ನು ಬರಮಾಡಿಕೊಂಡಿದ್ದಾರೆ. ಈ ಹಿಂದೆ ಆಲಿಯಾ ಭಟ್ ನನ್ನ ನೆಚ್ಚಿನ ನಟಿ ಎಂದು ಕಿಯಾರಾ ಸಂದರ್ಶನವೊಂದರಲ್ಲಿ ಹೇಳಿದ್ದರು.

4/7
ಸಿದ್ಧಾರ್ಥ್-ಕಿಯಾರಾ
ಸಿದ್ಧಾರ್ಥ್-ಕಿಯಾರಾ

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರ ವಿವಾಹದ ಆರತಕ್ಷತೆಗೆ ಶೇರ್ಷಾ ಚಿತ್ರದ ಸಹನಟ ನಿಕೇತನ್ ಧೀರ್ ಮತ್ತು ಅವರ ಪತ್ನಿ ಕ್ರತಿಕಾ ಸೆಂಗಾರ್ ಕೂಡ ಆಗಮಿಸಿದ್ದಾರೆ.

5/7
ಸಿದ್ಧಾರ್ಥ್-ಕಿಯಾರಾ
ಸಿದ್ಧಾರ್ಥ್-ಕಿಯಾರಾ

ನಟಿ ವಿದ್ಯಾ ಬಾಲನ್ ಮತ್ತು ಅವರ ಪತಿ, ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಕೂಡ ಸಿದ್-ಕಿಯಾರಾ ಅವರ ರಿಸೆಪ್ಷನ್ ಪಾರ್ಟಿಗೆ ಆಗಮಿಸಿದ್ದಾರೆ. ಈ ಜೋಡಿಯು ಬಟ್ಟೆಗಳ ವಿಷಯದಲ್ಲಿಯೂ ಸಹ ಬಣ್ಣ-ಸಂಯೋಜಿತವಾಗಿದೆ.

6/7
ಸಿದ್ಧಾರ್ಥ್-ಕಿಯಾರಾ
ಸಿದ್ಧಾರ್ಥ್-ಕಿಯಾರಾ

ನಿರ್ದೇಶಕ-ನಿರ್ಮಾಪಕ ಕರಣ್ ಜೋಹರ್ ಮತ್ತು ನಟಿ ಕರೀನಾ ಕಪೂರ್ ಖಾನ್ ಸಿದ್ಧಾರ್ಥ್-ಕಿಯಾರಾ ಅವರ ಆರತಕ್ಷತೆಯಲ್ಲಿ ಭಾಗಿಯಾಗಿದ್ದಾರೆ.

7/7
ಸಿದ್ಧಾರ್ಥ್-ಕಿಯಾರಾ
ಸಿದ್ಧಾರ್ಥ್-ಕಿಯಾರಾ

ಅಂಬಾನಿ ಕುಟುಂಬದ ಹಿರಿಯ ಮಗ ಆಕಾಶ್ ಅಂಬಾನಿ ಮತ್ತು ಅವರ ಪತ್ನಿ ಶ್ಲೋಕಾ ಮೆಹ್ತಾ ಕೂಡ ಸಿದ್ಧಾರ್ಥ್ ಮತ್ತು ಕಿಯಾರಾಗೆ ವಿಶ್ ಮಾಡಲು ಆಗಮಿಸಿದ್ದಾರೆ.





Read More