PHOTOS

ರೋಹಿತ್ ಶರ್ಮಾ ಬಳಿಕ ಇವರಾಗಲಿದ್ದಾರೆ ಟೀಂ ಇಂಡಿಯಾದ ODI ಓಪನರ್ !

ುತ್ತಿರುವ ಪ್ರಶ್ನೆ ಎಂದರೆ ರೋಹಿತ್ ಶರ್ಮಾ ನಿವೃತ್ತಿಯ ನಂತರ ಏಕದಿನ ಮಾದರಿಯಲ್ಲಿ ಅವರ ಸ್ಥಾನವನ್ನು  ತುಂಬ...

Advertisement
1/5
ಶುಭಮನ್ ಗಿಲ್ :
ಶುಭಮನ್ ಗಿಲ್ :

2023 ರಲ್ಲಿ ODI ನಲ್ಲಿ ಶುಭಮನ್ ಗಿಲ್ ಅವರ ಪ್ರದರ್ಶನವು ಅತ್ಯುತ್ತಮವಾಗಿದೆ. ಈ ವರ್ಷ ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್. ಅಷ್ಟೇ ಅಲ್ಲ, ಈ ವರ್ಷ 1500+ ರನ್ ಗಳಿಸಿದ ಏಕೈಕ ಬ್ಯಾಟ್ಸ್‌ಮನ್. ಹೀಗಿರುವಾಗ ಅವರು ಟೀಂ ಇಂಡಿಯಾ ಓಪನರ್ ಆಗುವುದು  ನಿಶ್ಚಿತ. ಸದ್ಯ ಇರುವ ಪ್ರಶ್ನೆ ಮತ್ತೊಬ್ಬ ಆಟಗಾರ ಯಾರು ಎನ್ನುವುದು. 

2/5
ಇಶಾನ್ ಕಿಶನ್ :
ಇಶಾನ್ ಕಿಶನ್ :

ಭವಿಷ್ಯದಲ್ಲಿ ಟೀಮ್ ಇಂಡಿಯಾದ ಓಪನರ್ ಆಗುವ ಸಾಮರ್ಥ್ಯ ಇರುವ ಮತ್ತೊಬ್ಬ ಆಟಗಾರ ಇಶಾನ್ ಕಿಶನ್.  ಇವರು ಈ ಮಾದರಿಯಲ್ಲಿ ಅತಿ ವೇಗದ ದ್ವಿಶತಕ ಗಳಿಸಿರುವ ರೆಕಾರ್ಡ್ ಕೂಡಾ ಹೊಂದಿದ್ದಾರೆ. 

3/5
ರಿತುರಾಜ್ ಗಾಯಕ್ವಾಡ್
ರಿತುರಾಜ್ ಗಾಯಕ್ವಾಡ್

ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾಗೆ ರುತುರಾಜ್ ಗಾಯಕ್ವಾಡ್  ಓಪನರ್ ಆಗಿದ್ದಾರೆ. ಅವರು ಉತ್ತಮ ಪ್ರದರ್ಶನವನ್ನು ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಭಾರತದ ಖಾಯಂ ಆರಂಭಿಕ ಆಟಗಾರನಾಗಿ ಕಾಣಿಸಿಕೊಳ್ಳಬಹುದು.   

4/5
ಸಾಯಿ ಸುದರ್ಶನ್
 ಸಾಯಿ ಸುದರ್ಶನ್

22 ವರ್ಷದ ಯುವ ಎಡಗೈ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಮೂಲಕ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಮೊದಲ ಪಂದ್ಯದಲ್ಲಿಯೇ ಅಜೇಯ ಅರ್ಧಶತಕ ಗಳಿಸಿದ್ದರು. ಸರಣಿಯ ಎರಡನೇ ಪಂದ್ಯದಲ್ಲಿಯೂ ಅರ್ಧಶತಕ ಬಾರಿಸಿದ್ದಾರೆ. 

5/5
ಸರಣಿಯ ಮೂರನೇ ಪಂದ್ಯ ಬಾಕಿಯಿದೆ
ಸರಣಿಯ ಮೂರನೇ ಪಂದ್ಯ ಬಾಕಿಯಿದೆ

ಭಾರತ ತಂಡದ ಮೂರನೇ ಮತ್ತು ಕೊನೆಯ ಪಂದ್ಯ ಡಿಸೆಂಬರ್ 21 ರಂದು  ಅಂದರೆ ಇಂದು ನಡೆಯಲಿದೆ. ಈ ಸರಣಿಯು 1-1ಕ್ಕೆ ಸಮನಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಎಲ್ ರಾಹುಲ್ ನಾಯಕತ್ವದಲ್ಲಿ ಭಾರತ ಕೊನೆಯ ಪಂದ್ಯವನ್ನು ಗೆದ್ದು ಇತಿಹಾಸ ನಿರ್ಮಿಸಬಹುದು. 





Read More