PHOTOS

ಒಂದು ವರ್ಷದ ಬಳಿಕ ಸ್ವರಾಶಿಗೆ ಬುಧನ ಪ್ರವೇಶ, 'ಭದ್ರ ರಾಜಯೋಗ'ದಿಂದ ಈ ರಾಶಿಗಳ ಜನರ ಮೇಲೆ ಹಣದ ಸುರಿಮಳೆ!

ಕ ಜೋತಿಷ್ಯ ಶಾಸ್ತ್ರದ ಪ್ರಕಾರ ಒಂದು ವರ್ಷದ ಅವಧಿಯ ಬಳಿಕ ಬುದ್ಧಿ-ವ್ಯಾಪಾರ ಕಾರಕನಾಗಿರುವ ಬುಧ ತನ್ನ ಸ್ವಂತ ರಾಶಿಯಾಗಿರುವ ಕನ್ಯಾ ರಾಶಿಗೆ ಪ್ರವೇಶಿಸುತ್ತಿದ್ದಾನೆ....

Advertisement
1/5

ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಒಂದು ವರ್ಷದ ಅವಧಿಯ ಬಳಿಕ ಬುದ್ಧಿ-ವ್ಯಾಪಾರ ಕಾರಕನಾಗಿರುವ ಬುಧ ತನ್ನ ಸ್ವಂತ ರಾಶಿಯಾಗಿರುವ ಕನ್ಯಾ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಇದರಿಂದ 'ಭದ್ರ ರಾಜಯೋಗ ನಿರ್ಮಾಣಗೊಳ್ಳುತ್ತಿದ್ದು, ಕೆಲ ರಾಶಿಗಳ ಜನರ ಪಾಲಿಗೆ ಇದು ಅತ್ಯಂತ ಶುಭಫಲಗಳನ್ನು ನೀಡಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನೂ ತಿಳಿದುಕೊಳ್ಳೋಣ,   

2/5

ಮಿಥುನ ರಾಶಿ: ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ಬುಧನ ಈ ಭ್ರಮಣೆ ಆರಂಭವಾಗಲಿದೆ. ಹೀಗಾಗಿ, ಭದ್ರ ರಾಜಯೋಗ ನಿಮ್ಮ ಪಾಲಿಗೆ ಅತ್ಯಂತ ಲಾಭದಾಯಕ ಸಾಬೀತಾಗಲಿದೆ. ಇದರಿಂದ ನಿಮಗೆ ಎಲ್ಲಾ ರೀತಿಯ ಭೌತಿಕ ಸುಖಗಳು ಪ್ರಾಪ್ತಿಯಾಗಳಿವೆ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ವ್ಯಾಜ್ಯ ನಡೆಯುತ್ತಿದ್ದರೆ, ಅದಕ್ಕೆ ತೆರೆಬೀಳಲಿದೆ. ಇನ್ನೊಂದೆಡೆ ಆರ್ಥಿಕ ವಿಷಯಗಳಲ್ಲಿಯೂ ಕೊಡ ಲಾಭ ನಿಮ್ಮದಾಗಲಿದೆ. ಮನೆಯಲ್ಲಿ ನಡೆದುಕೊಂಡು ಬಂದ ವಿವಾಗಳಿಗೆ ತೆರೆಬೀಳಲಿದೆ. ತಾಯಿಯ ಜೊತೆಗಿನ ನಿಮ್ಮ ಸಂಬಂಧ ಸುಧಾರಣೆಯಾಗಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.   

3/5

ಸಿಂಹ ರಾಶಿ: ನಿಮ್ಮ ಗೋಚರ ಜಾತಕದ ಧನಭಾವದಲ್ಲಿ ಬುಧನ ಈ ಸಂಚಾರ ನಡೆಯುವ ಕಾರಣ ಭದ್ರ ರಾಜಯೋಗ ಸಿಂಹ ರಾಶಿಯ ಜಾತಕದವರಿಗೆ ಅತ್ಯದ್ಭುತ ಸಾಬೀತಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ಬುಧ ನಿಮ್ಮ ಆದಾಯ ಭಾವದ ಅಧಿಪತಿ ಕೂಡ ಹೌದು. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಅಪಾರ ಸುಧಾರಣೆಯಾಗಲಿದೆ. ನಿಮಗೆ ಬರಬೇಕಾದ ಹಣ ನಿಮ್ಮ ಕೈಸೇರಲಿದೆ. ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಆದಾಯದ ಹೊಸ-ಹೊಸ ಮಾಧ್ಯಮಗಳು ತೆರೆದುಕೊಂಡು ನೀವು ಸಾಕಷ್ಟು ಹಣವನ್ನು ಸಂಪಾದಿಸುವಿರಿ. ಈ ಅವಧಿಯಲ್ಲಿ ಹಣಕಾಸಿನ ಹೂಡಿಕೆ ಭವಿಷ್ಯದಲ್ಲಿ ನಿಮಗೆ ಸಾಕಷ್ಟು ಲಾಭವನ್ನು ತಂದು ಕೊಡಲಿದೆ. ಷೇರುಪೇಟೆ-ಲಾಟರಿಗಳಂತಹ ವ್ಯವಹಾರಗಳಲ್ಲಿ ಲಾಭ ನಿಮ್ಮದಾಗಲಿದೆ.  

4/5

ಮೀನ ರಾಶಿ: ನಿಮ್ಮ ಗೋಚರ ಜಾತಕದ ಸಪ್ತಮ ಭಾವದಲ್ಲಿ ಬುಧನ ಈ ಸಂಚಾರ ನಡೆಯಲಿರುವ ಕಾರಣ ಭದ್ರಾ ರಾಜಯೋಗ ನಿಮ್ಮ ಪಾಲಿಗೆ ಶುಭ ಫಲಪ್ರದ ಸಾಬೀತಾಗಲಿದೆ. ಇದರಿಂದ ನಿಮಗೆ ಸಾಕಷ್ಟು ಆರ್ಥಿಕ ಧನಪ್ರಾಪ್ತಿಯಾಗುವ ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ನಿಮಗೆ ಉತ್ತಮ ಅವಕಾಶಗಳು ಸಿಗುವ ನಿರೀಕ್ಷೆ ಇದೆ. ವಿವಾಹಿತರ ವೈವಾಹಿಕ ಜೀವನ ಉತ್ತಮವಾಗಿರಲಿದೆ. ಪಾರ್ಟ್ನರ್ಶಿಪ್ ನಲ್ಲಿ ಕೆಲಸ ಮಾಡುವವರಿಗೆ ಇದರಿಂದ ಉತ್ತಮ ಲಾಭ ಉಂಟಾಗಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾವನೆ ಬರುವ ಸಕಲ ಸಾಧ್ಯತೆಗಳಿವೆ.   

5/5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  





Read More