PHOTOS

ಇನ್ನು ಐದು ದಿನಗಳಲ್ಲಿ ಈ ರಾಶಿಯವರು ಯಾವ ಕೆಲಸ ಮಾಡಿದರೂ ಯಶಸ್ಸು, ಧನ ಲಾಭ

3 ರಂದು, ಬುಧ ಗ್ರಹವು ಧನು ರಾಶಿಯಲ್ಲಿ ಉದಯಿಸಲಿದೆ. ಧನು ರಾಶಿಯ ಮೇಲೆ ಈಗಾಗಲೇ ಗುರುವಿನ ಪ್ರಭಾವವಿದೆ. ಬುಧ ಮತ್ತು ಗುರು ಗ್ರಹಗಳ ನಡುವೆ ಸ್ನೇಹ ಸಂಬಂಧವಿದೆ. ಹೀಗಾ...

Advertisement
1/3
ಸಿಂಹ
ಸಿಂಹ

ಸಿಂಹ :ಈ ರಾಶಿಯ ಸಂಕ್ರಮಣ ಜಾತಕದಲ್ಲಿ ಬುಧ ಗ್ರಹವು ಐದನೇ ಮನೆಯಲ್ಲಿ ಉದಯಿಸಲಿದೆ. ಇದು ಮಕ್ಕಳ ಮನೆ, ಶಿಕ್ಷಣ ಮತ್ತು ಪ್ರೀತಿ ಸಂಬಂಧಗಳ ಮನೆ ಎಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಪ್ರೇಮ ಸಂಬಂಧಗಳು ಸುಧಾರಿಸುತ್ತವೆ. ಮಗುವಿನ ಕಡೆಯಿಂದ ಕೆಲವು ಒಳ್ಳೆಯ ಸುದ್ದಿಗಳು ಬರಬಹುದು. ಯಾವುದೇ ಕೆಲಸ ಮಾಡುವುದಾದರೂ ಜೀವನ ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಉದ್ಯೋಗದ ಹುಡುಕಾಟದಲ್ಲಿರುವವರ ನಿರೀಕ್ಷೆ ಪೂರ್ಣಗೊಳ್ಳಲಿದೆ. ಈ ಸಮಯದಲ್ಲಿ, ಆರ್ಥಿಕ ಪ್ರಯೋಜನಗಳನ್ನು ಪಡೆಯುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ.    

2/3
ವೃಶ್ಚಿಕ ರಾಶಿ :
ವೃಶ್ಚಿಕ ರಾಶಿ :

ವೃಶ್ಚಿಕ ರಾಶಿ : ಈ ರಾಶಿಯವರ ಜಾತಕದ ಎರಡನೇ ಮನೆಯಲ್ಲಿ ಬುಧ ಉದಯಿಸಲಿದ್ದಾರೆ. ಇದನ್ನು ಮಾತು ಮತ್ತು ಸಂಪತ್ತಿನ ಮನೆ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ, ಯಾವುದಾದರೊಂದು ರೀತಿಯಲ್ಲಿ ಆಕಸ್ಮಿಕವಾಗಿ  ಧನಲಾಭಾವಾಗುವ ಸಾಧ್ಯತೆ ಇದೆ. ನಿಮ್ಮ ಮಾತಿನ ಮೂಲಕವೇ ಜನರನ್ನು ನಿಮ್ಮತ್ತ ಸೆಳೆಯುವುದು ಸಾಧ್ಯವಾಗುತ್ತದೆ. ಆರ್ಥಿಕ ವಿಷಯಗಳಲ್ಲಿಯೂ ಪ್ರಗತಿ  ಕಂಡುಬರುತ್ತವೆ. ಬುಧಗ್ರಹದ ಉದಯದಿಂದಾಗಿ ಭಾರೀ ಧನ ಲಾಭಾವಾಗುವುದು. 

3/3
ಮೀನ ರಾಶಿ:
ಮೀನ ರಾಶಿ:

ಮೀನ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ ಗ್ರಹದ ಉದಯವು ಮೀನ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಈ ಸಮಯವು ವೃತ್ತಿ ಮತ್ತು ವ್ಯವಹಾರದ ದೃಷ್ಟಿಯಿಂದಲೂ ಪ್ರಯೋಜನಕಾರಿಯಾಗಲಿದೆ. ನಿಮ್ಮ ವ್ಯಾಪಾರವನ್ನು ವಿಸ್ತರಿಸುವ ಯೋಚನೆಯಿದ್ದರೆ, ಈ ಸಮಯ ಸೂಕ್ತವಾಗಿದೆ.  ಉದ್ಯೋಗಿಗಳ ಪಾಲಿಗೂ ಈ ಅವವಧಿ ಶುಭಾವಾಗಲಿದೆ. 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)





Read More