PHOTOS

ಸ್ಟಾರ್‌ ನಟಿಯೊಂದಿಗೆ ದಳಪತಿ ವಿಜಯ್‌ ಅಫೇರ್‌? ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಯ್ತು ದೊಡ್ಡ ಚರ್ಚೆ

ತಮಿಳು ಚಿತ್ರರಂಗದ ಟಾಪ್ ಸ್ಟಾರ್‌ಗಳಲ್ಲಿ ಒಬ್ಬರು. ತಮಿಳುನಾಡಿನಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ವಿಜಯ್‌ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.  ಕಾ...

Advertisement
1/6

ನಟ ವಿಜಯ್ ತಮಿಳು ಚಿತ್ರರಂಗದ ಟಾಪ್ ಸ್ಟಾರ್‌ಗಳಲ್ಲಿ ಒಬ್ಬರು. ತಮಿಳುನಾಡಿನಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ವಿಜಯ್‌ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.  ಕಾಲಿವುಡ್‌ ಇಂಡಸ್ಟ್ರಿಯ ಬಾಕ್ಸ್ ಆಫೀಸ್ ಕಿಂಗ್ ವಿಜಯ್.  

2/6

ಇಷ್ಟು ದಿನ ವಿಜಯ್ ರಾಜಕೀಯ‌ ಎಂಟ್ರಿ ವಿಚಾರ ಸಿಕ್ಕಾಪಟ್ಟೆ ಚರ್ಚೆಯಲ್ಲಿತ್ತು. ಆದರೆ ಇದೀಗ ಸ್ಟಾರ್‌ ನಟಿ ಜೊತೆ ವಿಜಯ್‌ ಹೆಸರು ಸೇರಿಕೊಂಡಿದೆ.   

3/6

ನಟ ವಿಜಯ್‌ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಪತ್ನಿ ಸಂಗೀತಾ, ಮಗ ಜೇಸನ್ ಸಂಜಯ್ ಮತ್ತು ಮಗಳು ದಿವ್ಯಾ ಸುಂದರ ಕುಟುಂಬ ವಿಜಯ್‌ ಅವರದ್ದು. ಆದರೆ ತ್ರಿಶಾ ವಿಜಯ್‌ ಬರ್ಥ್‌ಡೇಗೆ ಮಾಡಿರುವ ಅದೊಂದು ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುವಂತೆ ಮಾಡಿದೆ.  

4/6

ವಿಜಯ್ , ತ್ರಿಶಾ ಇಬ್ಬರು ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂಬ ವದಂತಿಗಳು ಹಲವು ವರ್ಷಗಳಿಂದ ಕೇಳಿಬರ್ತಿವೆ. ಗಿಲ್ಲಿ ಮತ್ತು ಕುರುವಿ ಚಿತ್ರದ ಸಂದರ್ಭದಲ್ಲಿ ಹಬ್ಬಿದ ಈ ಗಾಳಿಸುದ್ದಿ, ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.    

5/6

ವಿಜಯ್‌ ಜೊತೆಗಿನ ಮಿರರ್‌ ಸೆಲ್ಫಿ ಫೋಟೋವನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ತ್ರಿಶಾ ಇಂಗ್ಲಿಷ್ ಹಾಡೊಂದನ್ನೂ ಹಾಕಿ  ಪೋಸ್ಟ್ ಮಾಡಿದ್ದಾರೆ. ಇದೊಂದು ಪೋಸ್ಟ್‌ ತ್ರಿಶಾ ಮತ್ತು ವಿಜಯ್ ಕುರಿತ ಹಲವು ವದಂತಿಗಳು ಹಬ್ಬಲು ಕಾರಣವಾಗಿದೆ.    

6/6

ತ್ರಿಶಾ ಹಾಗೂ ವಿಜಯ್‌ ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು. ನೆಟ್ಟಿಗರು ಇವರ ನಡುವೆ ಏನೋ ಇದೆ ಎಂಬಂತೆ ಮತನಾಡುತ್ತಿದ್ದಾರೆ.  





Read More