PHOTOS

Actress Early Pregnancy: ಅಲಿಯಾ ಅಷ್ಟೇ ಅಲ್ಲ ಮದುವೆಯಾದ ಕೆಲವೇ ದಿನಗಳಲ್ಲಿ ಗುಡ್ ನ್ಯೂಸ್ ನೀಡಿದ ಬಾಲಿವುಡ್ ನಟಿಮಣಿಯರು

ancy: ಖ್ಯಾತ ಬಾಲಿವುಡ್ ನಟಿ ಅಲಿಯಾ ಭಟ್ ಮದುವೆಯಾದ ಕೇವಲ ಎರಡೇ ತಿಂಗಳಲ್ಲಿ ತನ್ನ ಪ್ರೇಗ್ನೆನ್ಸಿ ಕುರಿತು ಘೋ...

Advertisement
1/7

Alia Bhatt Early Pregnancy: ಖ್ಯಾತ ಬಾಲಿವುಡ್ ನಟಿ ಅಲಿಯಾ ಭಟ್ ಮದುವೆಯಾದ ಕೇವಲ ಎರಡೇ ತಿಂಗಳಲ್ಲಿ ತನ್ನ ಪ್ರೇಗ್ನೆನ್ಸಿ ಕುರಿತು ಘೋಷಣೆ ಮಾಡಿ ಎಲ್ಲರನ್ನು ನಿಬ್ಬೆರಗಾಗಿಸಿದ್ದಾಳೆ. ಆದರೆ ಅಲಿಯಾಗಿಂತಲೂ ಮುನ್ನವೇ ಹಲವು ನಟಿಯರು ಮದುವೆಯಾದ ಕೆಲವೇ ದಿನಗಳ ಬಳಿಕ ಪ್ರೆಗ್ನೆನ್ಸಿಯ ಘೋಷಣೆ ಮಾಡಿಕೊಂಡಿದ್ದಾರೆ ಮತ್ತು ವೃತ್ತಿಜೀವನವನ್ನು ಪಕ್ಕಕ್ಕಿಟ್ಟು ಮಕ್ಕಳಿಗೆ ಜನ್ಮ ನೀಡಿದ್ದಾರೆ. 

2/7

ಈ ಪಟ್ಟಿಯಲ್ಲಿ ಲೇಟೆಸ್ಟ್ ಹೆಸರು ಎಂದರೆ ಅದುವೇ ಅಲಿಯಾ ಭಟ್ ಹೆಸರು. ಅಲಿಯಾ ಭಟ್ ಮದುವೆಯಾದ ಮೂರನೇ ತಿಂಗಳಲ್ಲಿಯೇ ಕಪೂರ್ ಕುಟುಂಬಕ್ಕೆ ಗುಡ್ ನ್ಯೂಸ್ ನೀಡಿದ್ದಾಳೆ. ರಣಬೀರ್ ಜೊತೆಗೆ ತೆರಳಿ ಸೋನೊಗ್ರಫಿ ಮಾಡಿಸಿಕೊಂಡ ಒಂದು ಸುಂದರ ಚಿತ್ರವನ್ನು ಅಲಿಯಾ ತನ್ನ ಅಭಿಮಾನಿಗಳ ಜೊತೆಗೆ ಹಂಚಿಕೊಂಡು ತನ್ನ ಮನೆಗೆ ಆಗಮಿಸುತ್ತಿರುವ ಹೊಸ ಕುಟುಂಬ ಸದಸ್ಯನ ಕುರಿತು ಘೋಷಣೆ ಮಾಡಿದ್ದಾಳೆ. ಈ ಚಿತ್ರದಲ್ಲಿ ಎಲ್ಲರ ದೃಷ್ಟಿ ಅಲಿಯಾ ಪಡುತ್ತಿರುವ ಹರ್ಷದ ಮೇಲೆ ನೆಟ್ಟಿದೆ. 

3/7

ಖ್ಯಾತ ನಟಿ ದಿಯಾ ಮಿರ್ಜಾ ಕೂಡ ಮದುವೆಯಾದ ಕೆಲವೇ ದಿನಗಳಲ್ಲಿ ತನ್ನ ಪ್ರೆಗ್ನೆನ್ಸಿ ಕುರಿತು ಘೋಷಣೆ ಮಾಡಿದ್ದಳು. ಗರ್ಭಾವಸ್ಥೆಯಲ್ಲಿ ಎದುರಾದ ಹಲವು ಸಮಸ್ಯೆಗಳ ಬಳಿಕ ದಿಯಾ ಸುಂದರ ಮಗುವಿಗೆ ಜನ್ಮ ನೀಡಿದ್ದಾಳೆ. ದಿಯಾ ಮಿರ್ಜಾ ಇದೇ ವರ್ಷದ ಫೆಬ್ರವರಿ 15ರಂದು ಉದ್ಯಮಿ ವೈಭವ್ ರೇಖಿ ಜೊತೆಗೆ ವಿವಾಹವಾಗಿದ್ದಳು. ದಿಯಾ ಹಾಗೂ ವೈಭವ ಇಬ್ಬರ ಪಾಲಿಗೂ ಕೂಡ ಇದು ಎರಡನೇ ವಿವಾಹವಾಗಿದೆ. ವೈಭವ್ ಜೊತೆಗೆ ವಿವಾಹವಾದ ನಾಲ್ಕೇ ತಿಂಗಳುಗಳ ಬಳಿದ ದಿಯಾ ತನ್ನ ಪುತ್ರನಿಗೆ ಜನ್ಮ ನೀಡಿದ್ದಾಳೆ. ಗರ್ಭಿಣಿಯಾಗಿದ್ದಾಗಲೇ ದಿಯಾ ತನ್ನ ಪತಿ ವೈಭವ ಜೊತೆ ಸಪ್ತಪದಿ ತುಳಿದಿದ್ದಳು ಎನ್ನಲಾಗುತ್ತದೆ.  

4/7

ಖ್ಯಾತ ಬಾಲಿವುಡ್ ನಟಿ ನೇಹಾ ಧೂಪಿಯಾ ಹೆಸರು ಕೂಡ ಈ ಪಟ್ಟಿಯಲ್ಲಿ ಶಾಮೀಲಾಗಿದೆ. ಚಲನಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನೇಹಾ, ಮೇ 10, 2018ರಂದು ತನ್ನ ಬಾಯ್ ಫ್ರೆಂಡ್ ಅಂಗದ್ ಬೇದಿ ಜೊತೆಗೆ ಕದ್ದುಮುಚ್ಚಿ ವಿವಾಹವಾಗಿದ್ದಳು. 'ನೋ ಫಿಲ್ಟರ್ ನೇಹಾ' ಹೆಸರಿನ ಖ್ಯಾತ ಷೋನಲ್ಲಿ ಖುದ್ದು ನೇಹಾ ತಾನು ಮದುವೆಗೂ ಮುನ್ನ ಗರ್ಭಿಣಿಯಾಗುವ ಸಂಗತಿಯನ್ನು ಒಪ್ಪಿಕೊಂಡಿದ್ದಾಳೆ. ಅಂಗದ್ ಜೊತೆಗೆ ವಿವಾಹವಾದ ಕೆಲವೇ ತಿಂಗಳಲ್ಲಿ ನೇಹಾ ತನ್ನ ಮಗಳಿಗೆ ಜನ್ಮ ನೀಡಿದ್ದಾಳೆ.  

5/7

ನಟಿ ನತಾಷಾ ಸ್ತಾನ್ಕೋವಿಚ್ ಹಾಗೂ ಖ್ಯಾತ ಕ್ರಿಕೆಟ್ ಆಟಗಾರ ಹಾರ್ದಿಕ್ ಪಾಂಡ್ಯಾ ಕೂಡ ಮದುವೆಗೂ ಮುನ್ನವೇ ಪ್ರೆಗ್ನೆನ್ಸಿ ಕುರಿತು ಘೋಷಿಸಿಕೊಂಡಿದ್ದಾರೆ. ತನ್ನ ಸಂಪೂರ್ಣ ಪ್ರೆಗ್ನೆನ್ಸಿ ಅವಧಿಯುದ್ದಕ್ಕೂ ನತಾಷಾ ಸಾಮಾಜಿಕ ಮಾಧ್ಯಮದ ಮೇಲೆ ತನ್ನ ಪ್ರೆಗ್ನೆನ್ಸಿಗೆ ಸಂಬಂಧಿಸಿದಂತೆ ಸಾಕಷ್ಟು ಸಕ್ರೀಯಳಾಗಿದ್ದಳು ಮತ್ತು ತನ್ನ ಅಭಿಮಾನಿಗಳ ಜೊತೆ ಒಂದರ ಮೇಲೊಂದರಂತೆ ಬೇಬಿ ಬಂಪ್ ಚಿತ್ರಗಳನ್ನು ಹಂಚಿಕೊಂಡಿದ್ದಳು.

6/7

ಮಾರ್ಚ್ 15, 2011 ರಲ್ಲಿ ಕೊಂಕಣಾ ಸೆನ್ ತನ್ನ ಪುತ್ರನಿಗೆ ಜನ್ಮ ನೀಡಿದ್ದಾಳೆ. ಕೊಂಕಣಾ ಸೆಪ್ಟೆಂಬರ್ 3, 2010ರಲ್ಲಿ ಮದುವೆಯಾಗಿದ್ದಳು ಎಂಬುದು ಇಲ್ಲಿ ಉಲ್ಲೇಖನೀಯ. ಮದುವೆಯಾದ 6 ತಿಂಗಳಲ್ಲೇ ಮಗುವಿಗೆ ಜನ್ಮ ನೀಡಿದ ಕಾರಣ ಕೊಂಕಣಾ ಕೂಡ ಮದುವೆಗೂ ಮುನ್ನವೇ ಗರ್ಭಿಣಿಯಾಗಿರುವುದು ಇಲ್ಲಿ ಸ್ಪಷ್ಟವಾಗುತ್ತದೆ.

7/7

ಖ್ಯಾತ ನಟಿ ಅಮೃತಾ ಆರೋರಾ ಹೆಸರು ಕೂಡ ಈ ಪಟ್ಟಿಯಲ್ಲಿ ಶಾಮೀಲಾಗಿದೆ. ದೀರ್ಘಕಾಲದಿಂದ ಅಮೃತಾ ಅರೋರ ಶಕೀಲ್ ಲದಾಕ್ ಜೊತೆಗೆ ಡೇಟ್ ನಲ್ಲಿದ್ದಳು. ಈ ಹಿನ್ನೆಲೆ ಆಕೆ ಗರ್ಭಿಣಿಯಾಗಿದ್ದಳು ಮತ್ತು ಈ ಸಂಗತಿ ತಿಳಿಯುತ್ತಲೇ ಅಮೃತಾ 2009ರಲ್ಲಿ ಉದ್ಯಮಿ ಶಕೀಲ್ ಲದಾಕ್ ಜೊತೆಗೆ ವಿವಾಹವಾಗಿದ್ದಳು ಮತ್ತು ವಿವಾಹದ ಕೆಲವೇ ತಿಂಗಳುಗಳ ಬಳಿಕ ತಾಯಿಯಾಗಿದ್ದಳು.





Read More