PHOTOS

ಮಂತ್ರಾಲಯದ ರಾಯರ ಹುಂಡಿಗೆ ಹರಿದು ಬಂತು ಕೋಟ್ಯಂತರ ರೂ. ಕಾಣಿಕೆ!

300ಕ್ಕೂ ಹೆಚ್ಚು ಸ್ವಯಂ ಸೇವಕರಿಂದ ರಾಯರ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಬಂಗಾರ, ಬಳ್ಳಿ ಮತ...

Advertisement
1/5
ಜೂನ್ ತಿಂಗಳ ಹುಂಡಿ ಎಣಿಕೆ
ಜೂನ್ ತಿಂಗಳ ಹುಂಡಿ ಎಣಿಕೆ

ಮಂತ್ರಾಲಯ ಮಠದ ರಾಯರ ಹುಂಡಿ ಎಣಿಕೆ ಮುಕ್ತಾಯವಾಗಿದ್ದು, ರಾಯರ ದರ್ಶನಕ್ಕೆ ಆಗಮಿಸಿದ್ದ ಭಕ್ತರು ಕಾಣಿಕೆ ರೂಪದಲ್ಲಿ ಕೋಟ್ಯಂತರ ರೂ. ಸಮರ್ಪಿಸಿದ್ದಾರೆ. ಜೂನ್ ತಿಂಗಳಲ್ಲಿ ಸಂಗ್ರಹಣೆಗೊಂಡ ಹುಂಡಿ ಎಣಿಕೆ ಕಾರ್ಯದಲ್ಲಿ ಕೋಟ್ಯಂತರ ರೂ. ಕಾಣಿಕೆ ಹರಿದುಬಂದಿದೆ.

2/5
300ಕ್ಕೂ ಹೆಚ್ಚು ಸ್ವಯಂಸೇವಕರಿಂದ ಹುಂಡಿ ಎಣಿಕೆ
300ಕ್ಕೂ ಹೆಚ್ಚು ಸ್ವಯಂಸೇವಕರಿಂದ ಹುಂಡಿ ಎಣಿಕೆ

ಸುಮಾರು 300ಕ್ಕೂ ಹೆಚ್ಚು ಸ್ವಯಂ ಸೇವಕರು ಸೇರಿಕೊಂಡು ರಾಯರ ಮಠದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಸಿದ್ದಾರೆ. ರಾಯರ ಹುಂಡಿಯಲ್ಲಿ ಬಂಗಾರ, ಬಳ್ಳಿ ಮತ್ತು ವಿದೇಶಿ ನ್ಯಾಣಗಳು ಪತ್ತೆಯಾಗಿವೆ.

3/5
2.5 ಕೋಟಿ ರೂ.ಗೂ ಹೆಚ್ಚು ಕಾಣಿಕೆ ಸಂಗ್ರಹ
2.5 ಕೋಟಿ ರೂ.ಗೂ ಹೆಚ್ಚು ಕಾಣಿಕೆ ಸಂಗ್ರಹ

ಮಂತ್ರಾಲಯದ ರಾಯರ ಹುಂಡಿಯಲ್ಲಿ ಒಂದೇ ತಿಂಗಳಲ್ಲಿ 2,52,33,205 ರೂ. ಕಾಣಿಕೆ ಸಂಗ್ರಹವಾಗಿದೆ. ಈ ಪೈಕಿ ಸುಮಾರು 5,61, 355 ರೂ‌. ನ್ಯಾಣಗಳು ರಾಯರ ಹುಂಡಿಯಲ್ಲಿ ಜಮಾ ಆಗಿವೆ.

4/5
ರಾಯರ ಹುಂಡಿಯಲ್ಲಿ ಚಿನ್ನ- ಬೆಳ್ಳಿ
ರಾಯರ ಹುಂಡಿಯಲ್ಲಿ ಚಿನ್ನ- ಬೆಳ್ಳಿ

ಇನ್ನು ರಾಯರ ಹುಂಡಿಗೆ ಭಕ್ತರು ನಗದು ಜೊತೆಗೆ ಕಾಣಿಕೆ ರೂಪದಲ್ಲಿ ಚಿನ್ನ-ಬೆಳ್ಳಿಯನ್ನು ಸಮರ್ಪಿಸಿದ್ದಾರೆ.  164 ಗ್ರಾಂನಷ್ಟು ಬಂಗಾರ ಮತ್ತು ‌1098 ಗ್ರಾಂನಷ್ಟು ಬೆಳ್ಳಿ ಸಂಗ್ರಹವಾಗಿದೆ ಎಂದು ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮೀಜಿಗಳ ಮಠ ಮಾಹಿತಿ ನೀಡಿದೆ.

5/5
ಭಕ್ತರಿಂದ ರಾಯದ ದರ್ಶನ
ಭಕ್ತರಿಂದ ರಾಯದ ದರ್ಶನ

ಮಂತ್ರಾಲಯದ ರಾಯರ ಮಠಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಾಗಿದ. ಹೀಗೆ ಭೇಟಿ ನೀಡುವ ಭಕ್ತರು ರಾಯರ ಹುಂಡಿಗೆ ಲಕ್ಷಾಂತರ ರೂ. ಕಾಣಿಕೆ ಸಮರ್ಪಿಸಿದ್ದಾರೆ.





Read More