PHOTOS

ಫುಲ್ ಚಾರ್ಜ್‌ನಲ್ಲಿ 137 ಕಿಮೀ ಚಲಿಸಬಲ್ಲ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಸಿಗುತ್ತಿದೆ ಭರ್ಜರಿ ಆಫರ್

ವ್ಯಾಲೆಂಟೈನ್ ಡೇ ಪ್ರಯುಕ್ತ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಭರ...

Advertisement
1/5
ಓಕಿನಾವಾ ಎಲೆಕ್ಟ್ರಿಕ್ ಸ್ಕೂಟರ್
ಓಕಿನಾವಾ ಎಲೆಕ್ಟ್ರಿಕ್ ಸ್ಕೂಟರ್

ಓಕಿನಾವಾ ಎಲೆಕ್ಟ್ರಿಕ್ ಸ್ಕೂಟರ್:  ವ್ಯಾಲೆಂಟೈನ್ ಡೇಯಲ್ಲಿ ನೀವು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಬಗ್ಗೆ ಚಿಂತಿಸುತ್ತಿದ್ದರೆ ಜನಪ್ರಿಯ  ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಓಕಿನಾವಾ ಆಟೋಟೆಕ್ ತನ್ನ ಗ್ರಾಹಕರಿಗೆ ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಭರ್ಜರಿ ಕೊಡುಗೆಗಳನ್ನು ನೀಡುತ್ತಿದೆ. 

2/5
ಆಯ್ದ ಶ್ರೇಣಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ವಿಶೇಷ ಕೊಡುಗೆ
ಆಯ್ದ ಶ್ರೇಣಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ವಿಶೇಷ ಕೊಡುಗೆ

ವಿಶೇಷ ಕೊಡುಗೆ : ಓಕಿನಾವಾ ಆಟೋಟೆಕ್ ತನ್ನ ಆಯ್ದ ಶ್ರೇಣಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ. ಈ ವ್ಯಾಲೆಂಟೈನ್ಸ್ ಡೇ  ಆಫರ್ ಅಡಿಯಲ್ಲಿ, ಕಂಪನಿಯ ಮೂರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು 12,500 ರೂ.ವರೆಗಿನ ಭರ್ಜರಿ ಡಿಸ್ಕೌಂಟ್ ನಲ್ಲಿ  ಖರೀದಿಸಬಹುದಾಗಿದೆ. ವಿಶೇಷವೆಂದರೆ ಈ ಡಿಸ್ಕೌಂಟ್ ಆಫರ್ ಫೆಬ್ರವರಿ 15 ರವರೆಗೆ ಮಾತ್ರ ಲಭ್ಯವಾಗಲಿದೆ.

3/5
ಓಕಿನಾವಾದ ಈ ಮಾದರಿಗಳಲ್ಲಿ ಸಿಗುತ್ತಿದೆ ಆಫರ್
ಓಕಿನಾವಾದ ಈ ಮಾದರಿಗಳಲ್ಲಿ ಸಿಗುತ್ತಿದೆ ಆಫರ್

ಓಕಿನಾವಾದ ಈ ಮಾದರಿಗಳಲ್ಲಿ ಸಿಗುತ್ತಿದೆ ಆಫರ್:  ಓಕಿನಾವಾ ವ್ಯಾಲೆಂಟೈನ್ಸ್ ಡೇ ಕೊಡುಗೆಯು iPraise+, PraisePro ಮತ್ತು Ridge+ ನಂತಹ ಹೆಚ್ಚಿನ ವೇಗದ ಮಾದರಿಗಳು ಮತ್ತು R30 ಮತ್ತು Lite ನಂತಹ ಕಡಿಮೆ-ವೇಗದ ಕೊಡುಗೆಗಳ ಮೇಲೆ ಅನ್ವಯಿಸುತ್ತದೆ ಎಂದು ಕಂಪನಿ ಮಾಹಿತಿ ನೀಡಿದೆ.

4/5
iPraise+ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ
iPraise+ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ

iPraise+ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ : ಫುಲ್ ಚಾರ್ಜ್‌ನಲ್ಲಿ 137KM ಕ್ರಮಿಸಬಲ್ಲ iPraise+ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ 145,965 ರೂಪಾಯಿಗಳು. ಆದರೆ, ವ್ಯಾಲೆಂಟೈನ್ಸ್ ಡೇ ಕೊಡುಗೆಯಲ್ಲಿ ಈ ವಾಹನವನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.  3.6 kWh ಬ್ಯಾಟರಿಯೊಂದಿಗೆ ಬರುವ ಈ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 50 ಕಿಮೀ. ಸಂಪೂರ್ಣ ಚಾರ್ಜ್ ಆಗಲು 4-5 ಗಂಟೆ ತೆಗೆದುಕೊಳ್ಳುತ್ತದೆ ಎಂದು ಕಂಪನಿ ತಿಳಿಸಿದೆ.

5/5
iPraise Pro ಎಲೆಕ್ಟ್ರಿಕ್ ಸ್ಕೂಟರ್
iPraise Pro ಎಲೆಕ್ಟ್ರಿಕ್ ಸ್ಕೂಟರ್

iPraise Pro ಎಲೆಕ್ಟ್ರಿಕ್ ಸ್ಕೂಟರ್:  iPraise Pro ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 99,645 ರೂ. ಕೊಡುಗೆಯ ನಂತರ ಅದನ್ನು ಇನ್ನೂ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. 2.08 kWh ಬ್ಯಾಟರಿಯೊಂದಿಗೆ ಬರುವ ಈ ಸ್ಕೂಟರ್  ಸಂಪೂರ್ಣ ಚಾರ್ಜ್ ಆಗಲು 2-3 ಗಂಟೆ ತೆಗೆದುಕೊಳ್ಳುತ್ತದೆ. ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 50 ಕಿಮೀ. ಪುಲ್ ಚಾರ್ಜ್‌ನಲ್ಲಿ 81KM ಚಲಿಸಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ. 





Read More