Home> NRI
Advertisement

US Presidential Elections 2024: ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಪ್ರಕಟಿಸಿದ ಭಾರತೀಯ ಮೂಲದ ನಿಕ್ಕಿ ಹ್ಯಾಲಿ

US Presidential Elections 2024: ನಿಕ್ಕಿ ಹ್ಯಾಲಿ ಈ ರೇಸ್‌ನಲ್ಲಿ ಭಾಗವಹಿಸಲು ತನ್ನ ಹೆಸರನ್ನು ಘೋಷಿಸಿದ್ದಾರೆ. ಮತ್ತೊಂದೆಡೆ ಕಮಲಾ ಹ್ಯಾರಿಸ್ ಅವರು ಡೆಮಾಕ್ರಟಿಕ್ ಪಾರ್ಟಿಯೊಂದಿಗೆ ಇದೇ ರೀತಿ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ಮೂಲದ ಇಬ್ಬರು ಒಂದೇ ರೇಸ್‌ನಲ್ಲಿ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿದೆ. ಕಮಲಾ ಹ್ಯಾರಿಸ್ ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನ ಉಪಾಧ್ಯಕ್ಷರಾಗಿದ್ದರೆ, ನಿಕ್ಕಿ ಹ್ಯಾಲೆ ದಕ್ಷಿಣ ಕೆರೊಲಿನಾದ ಗವರ್ನರ್ ಆಗಿದ್ದಾರೆ.

US Presidential Elections 2024: ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಪ್ರಕಟಿಸಿದ ಭಾರತೀಯ ಮೂಲದ ನಿಕ್ಕಿ ಹ್ಯಾಲಿ

US Presidential Elections 2024: ಮುಂಬರುವ 2024 ರಲ್ಲಿ ಅಮೆರಿಕದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗಳು ಅಧ್ಯಕ್ಷೀಯ ಚುನಾವಣೆಗಳು ಈಗಿನಿಂದಲೇ ಭಾರೀ ಕುತೂಹಲಕಾರಿಯಾಗಿರಲಿವೆ. ಈ ಬಾರಿಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಪರವಾಗಿ ಭಾರತೀಯ ಮೂಲದ ನಿಕ್ಕಿ ಹ್ಯಾಲಿ ಡೊನಾಲ್ಡ್ ಟ್ರಂಪ್ ಅವರಿಗೆ ಸವಾಲು ಹಾಕಲಿದ್ದಾರೆ. ನಿಕ್ಕಿ ಹ್ಯಾಲೆ 2024 ರ ಅಧ್ಯಕ್ಷೀಯ ಚುನಾವಣೆಗೆ ತನ್ನ ಹಕ್ಕನ್ನು ಸಲ್ಲಿಸಿದ್ದಾರೆ. ಈಗಾಗಲೇ ಅಮೆರಿಕದಲ್ಲಿ ನಡೆಯಲಿರುವ ಈ ಚುನಾವಣೆಗೂ ಮುನ್ನವೇ ಅಧ್ಯಕ್ಷೀಯ ಅಭ್ಯರ್ಥಿಯನ್ನು ಅಧಿಕೃತವಾಗಿ ನಿರ್ಧರಿಸುವ ಪೈಪೋಟಿ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳಲ್ಲಿ ಆರಂಭವಾಗಿದೆ.

ಇದನ್ನೂ ಓದಿ: YouTube ಹೊಸ ಸಿಇಒ ಭಾರತೀಯ ಮೂಲದ ನೀಲ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು ?

ನಿಕ್ಕಿ ಹ್ಯಾಲಿ ಈ ರೇಸ್‌ನಲ್ಲಿ ಭಾಗವಹಿಸಲು ತನ್ನ ಹೆಸರನ್ನು ಘೋಷಿಸಿದ್ದಾರೆ. ಮತ್ತೊಂದೆಡೆ ಕಮಲಾ ಹ್ಯಾರಿಸ್ ಅವರು ಡೆಮಾಕ್ರಟಿಕ್ ಪಾರ್ಟಿಯೊಂದಿಗೆ ಇದೇ ರೀತಿ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ಮೂಲದ ಇಬ್ಬರು ಒಂದೇ ರೇಸ್‌ನಲ್ಲಿ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿದೆ. ಕಮಲಾ ಹ್ಯಾರಿಸ್ ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನ ಉಪಾಧ್ಯಕ್ಷರಾಗಿದ್ದರೆ, ನಿಕ್ಕಿ ಹ್ಯಾಲೆ ದಕ್ಷಿಣ ಕೆರೊಲಿನಾದ ಗವರ್ನರ್ ಆಗಿದ್ದಾರೆ.

ನಿಕ್ಕಿ ಹ್ಯಾಲೆ ಅವರ ಅಧಿಕಾರಾವಧಿಯನ್ನು ನೋಡಿದರೆ, ಅಮೆರಿಕಾದಲ್ಲಿ ಅನುಭವಿಸುತ್ತಿರುವ ಜನಾಂಗ ಮತ್ತು ಲಿಂಗದ ಸಮಸ್ಯೆಗಳ ಬಗ್ಗೆ ದನಿ ಎತ್ತುತ್ತಿದ್ದಾರೆ. ಹೀಗಿರುವಾಗ ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಉಮೇದುವಾರಿಕೆ ಕುರಿತು ವೀಡಿಯೋ ಬಿಡುಗಡೆ ಮಾಡಿರುವ ಅವರು, ಅಮೆರಿಕಕ್ಕೆ ಸಂಬಂಧಿಸಿದ ತಮ್ಮ ಪ್ರಮುಖ ವಿಚಾರಗಳಲ್ಲಿ ಈ ವಿಷಯಗಳನ್ನೂ ಸೇರಿಸಿದ್ದಾರೆ. ವಿದೇಶಾಂಗ ನೀತಿಯನ್ನು ಹೇಗೆ ನಿಭಾಯಿಸುತ್ತೇನೆ ಎಂದು ಸಹ ಸ್ಪಷ್ಟಪಡಿಸಿದರು. ಇದಲ್ಲದೇ ಚೀನಾ ಮತ್ತು ರಷ್ಯಾದಿಂದ ಹೆಚ್ಚುತ್ತಿರುವ ಬೆದರಿಕೆಯ ಬಗ್ಗೆಯೂ ಹ್ಯಾಲಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:Trending News: 5 ಸಾವಿರ ವರ್ಷಗಳ ಹಿಂದೆಯೂ ಜನರು ಪಾರ್ಟಿ ಮಾಡುತ್ತಿದ್ದರು, ಬಿಯರ್ ಕುಡಿಯುತ್ತಿದ್ದರು.. ಇಲ್ಲಿ ಸಿಕ್ಕಿದೆ ಖಚಿತ 'ಸಾಕ್ಷಿ'

ನಿಮ್ರತ್ ರಾಂಧವಾ ಅಂದರೆ ನಿಕ್ಕಿ. ಇದು ಇವರ ಮತ್ತೊಂದು ಹೆಸರಾಗಿದೆ. ನಿಕ್ಕಿ ಅವರ ಪೋಷಕರು ಒಮ್ಮೆ ಅಮೆರಿಕಕ್ಕೆ ಹೋಗಿದ್ದರು. ಆ ಬಳಿಕ ಅಲ್ಲಿಯೇ ನೆಲೆಸಿದರು. ಸ್ವಲ್ಪ ಸಮಯದ ನಂತರ ನಿಮ್ರತ್ ಅಂದರೆ ನಿಕ್ಕಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು. 1996 ರಲ್ಲಿ ಮೈಕೆಲ್ ಹ್ಯಾಲಿ ಎಂಬ ಅಮೇರಿಕನ್ನರನ್ನು ವಿವಾಹವಾದರು. ಮಾಹಿತಿಯ ಪ್ರಕಾರ, ಮೈಕೆಲ್ ಹ್ಯಾಲಿ ಸೌತ್ ಕೆರೊಲಿನಾ ನ್ಯಾಷನಲ್ ಆರ್ಮಿ ಗಾರ್ಡ್‌ನಲ್ಲಿ ಅಧಿಕಾರಿಯಾಗಿದ್ದಾರೆ. ನಿಕ್ಕಿ ಹ್ಯಾಲಿ ಸಿಖ್ ಧರ್ಮದ ಜೊತೆಗೆ ಕ್ರಿಶ್ಚಿಯನ್ ಧರ್ಮದಲ್ಲಿ ವಿವಾಹವಾದರು. ನಿಕ್ಕಿ ಮತ್ತು ಮೈಕೆಲ್ ಹ್ಯಾಲಿ ಅವರಿಗೆ ರೆನಾ (ಮಗ) ಮತ್ತು ನಳಿನ್ (ಮಗಳು) ಎಂಬ ಇಬ್ಬರು ಮಕ್ಕಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More