Home> NRI
Advertisement

Gandhada Gudi : ಕರುನಾಡ ಕಂದನಿಗೆ ಮಿಡಿದ ಅನಿವಾಸಿ ಭಾರತೀಯರ ಮನ! ವಿಶ್ವಾದ್ಯಂತ ಗಂಧದ ಗುಡಿ ಘಮಲು

Gandhada Gudi : ಅಮೆರಿಕಾದಂತಹ ದೇಶದಲ್ಲಿ ನಿನ್ನೆ (ಅ 27) ರಂದು ಗಂಧದ ಗುಡಿ ತೆರೆ ಕಂಡಿದೆ. ಸಿಂಗಪೂರ್ ನಲ್ಲಿ ಇಂದು (ಅ 28) ರಂದು ಗಂಧದ ಗುಡಿ ಬೆಳ್ಳಿತೆರೆ ಮೇಲೆ ಬಿಡುಗಡೆಯಾಗಿದೆ. ಯುಎಇ ಯಲ್ಲಿ ಈ ಚಿತ್ರ ಅನೇಕ ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗುತ್ತಿದ್ದು, ದೊಡ್ಡ ಲಿಸ್ಟೇ ಇದೆ. 

Gandhada Gudi : ಕರುನಾಡ ಕಂದನಿಗೆ ಮಿಡಿದ ಅನಿವಾಸಿ ಭಾರತೀಯರ ಮನ! ವಿಶ್ವಾದ್ಯಂತ ಗಂಧದ ಗುಡಿ ಘಮಲು

Gandhada Gudi : ಕರ್ನಾಟಕದ ಯುವರತ್ನ ಪುನೀತ್ ರಾಜ್‌ ಕುಮಾರ್ ಅಭಿನಯದ ಗಂಧದ ಗುಡಿ ರಿಲೀಸ್ ಆಗಿದೆ. ಅಭಿಮಾನಿಗಳು ಅಪ್ಪು ಹಬ್ಬವನ್ನು ಆಚರಿಸುತ್ತಿದ್ದಾರೆ. ತಮ್ಮ ನೆಚ್ಚಿನ ನಟನ ಕೊನೆಯ ಸಿನಿಮಾವನ್ನು ಕಂಡು ಭಾವುಕರಾಗುತ್ತಿದ್ದಾರೆ. ಇಂದು ಭಾರತ ಮಾತ್ರವಲ್ಲ ವಿದೇಶದ ಬೇರೆ ಬೇರೆ ಕಡೆಗಳಲ್ಲಿಯೂ ರಿಲೀಸ್ ಆಗಿದೆ ಈ ಸಿನಿಮಾ. ಅಮೆರಿಕಾದಂತಹ ದೇಶದಲ್ಲಿ ನಿನ್ನೆ (ಅ 27) ರಂದು ಗಂಧದ ಗುಡಿ ತೆರೆ ಕಂಡಿದೆ. ಸಿಂಗಪೂರ್ ನಲ್ಲಿ ಇಂದು (ಅ 28) ರಂದು ಗಂಧದ ಗುಡಿ ಬೆಳ್ಳಿತೆರೆ ಮೇಲೆ ಬಿಡುಗಡೆಯಾಗಿದೆ. ಯುಎಇ ಯಲ್ಲಿ ಈ ಚಿತ್ರ ಅನೇಕ ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗುತ್ತಿದ್ದು, ದೊಡ್ಡ ಲಿಸ್ಟೇ ಇದೆ.  ಗಂಧದ ಗುಡಿ ಪವರ್‌ ಸ್ಟಾರ್ ಅಭಿನಯದ ಕೊನೆಯ ಸಿನಿಮಾ. ‌ 

ಇದನ್ನೂ ಓದಿ : Gandhada Gudi : "ಇಲ್ಲಿ ಪ್ರಕೃತಿಯೇ ದೇವರಲ್ಲ, ದೇವರೊಂದಿಗೆ ಪ್ರಕೃತಿ" ಎಂದ ನೆಟ್ಟಿಜನ್ಸ್‌

ಅಮೆರಿಕದಲ್ಲಿ ಗಂಧದ ಗುಡಿಯ ಕಂಪು : 

ನಟ ಪುನೀತ್ ರಾಜಕುಮಾರ್ ಅಭಿನಯದ ಗಂಧದ ಗುಡಿ ಸಿನಿಮಾ ಅಮೆರಿಕದಲ್ಲಿ ತೆರೆ ಕಂಡಿದೆ. ನಿನ್ನೆಯೇ ಸಿನಿಮಾ ರಿಲೀಸ್‌ ಆಗಿದ್ದು, ಅನಿವಾಸಿ ಭಾರತೀಯರು ಅಪ್ಪುವನ್ನು ಕಂಡು ಸಂತಸರಾಗಿದ್ದಾರೆ. ಕ್ಯಾಲಿಪೋರ್ನಿಯಾ, ಆರಿಜೋನಾ, ಪ್ಲೋರಿಡಾ, ನ್ಯೂಯಾರ್ಕ್, ಟೆಕ್ಸಾಸ್, ನ್ಯೂ ಜರ್ಸಿ ಸೇರಿದಂತೆ ಅಮೆರಿಕದ ಪ್ರಮುಖ ನಗರಗಳಲ್ಲಿ ಗಂಧದ ಗುಡಿ ರಿಲೀಸ್ ಆಗಿದೆ.

 

 

ಸಿಂಗಾಪೂರ್​ ನಲ್ಲಿ ಗಂಧದ ಗುಡಿಯ ಘಮ : 

ಗಂಧದ ಗುಡಿ ಸಿನಿಮಾದ ಮೇಲಿನ ಪ್ರೀತಿ ಗಡಿಯಾಚೆಗೂ ಹಬ್ಬಿದೆ. ಸಿಂಗಾಪೂರ್​ ನಲ್ಲಿ ಗಂಧದ ಗುಡಿ ಇಂದು ರಿಲೀಸ್ ಆಗಿದೆ. ಕ್ಯಾಥೆ ಸಿನಿಪ್ಲೆಕ್ಸ್ - ವೆಸ್ಟ್ ಮಾಲ್, ಪಾರ್ಕ್​ವೇ ಪರೇಡ್, ಕ್ಯಾಸ್ವೇ ಪಾಯಿಂಗ್ ನಲ್ಲಿ ಅಪ್ಪು ಫ್ಯಾನ್ಸ್‌ ಸಿನಿಮಾ ನೋಡುತ್ತಿದ್ದಾರೆ. ಕಾರ್ನಿವಲ್ ಸಿನಿಮಾಸ್ - ಕಾರ್ನಿವಲ್ ಸಿನಿಮಾಸ್: ಗೋಲ್ಡನ್ ಮೈಲ್​ ಟವರ್ ನಲ್ಲೂ ಗಂಧದ ಗುಡಿ ಪ್ರದರ್ಶನ ಕಾಣಿತ್ತಿದೆ.

UAE ಮತ್ತು GCCಯಲ್ಲೂ ಗಂಧದ ಗುಡಿ ರಿಲೀಸ್ : 

ಅರಬ್ ಕಂಟ್ರಿಯಲ್ಲೂ ಕನ್ನಡದ ಗಂಧದ ಗುಡಿ ಸಿನಿಮಾ ರಿಲೀಸ್ ಆಗುತ್ತಿದೆ. ದುಬೈ, ಶಾರ್ಜಾ, ಮಸ್ಕಟ್, ಕತಾರ್, ಬಹ್ರೇನ್, ಕುವೈತ್, ಸೌದಿ ಅರೇಬಿಯಾ, ಅಬುಧಾಬಿಯಲ್ಲಿ ಗಂಧದ ಗುಡಿ ತೆರೆ ಕಾಣುತ್ತಿದೆ. ಇಡೀ ಕರ್ನಾಟಕ ಸೇರಿದಂತೆ ವಿದೇಶದಲ್ಲೂ ಗಂಧದ ಗುಡಿ ತನ್ನ ಕಂಪನ್ನು ಹರಡಿದೆ.

ಇದನ್ನೂ ಓದಿ : Gandhada Gudi : "ಇಲ್ಲಿ ಪ್ರಕೃತಿಯೇ ದೇವರಲ್ಲ, ದೇವರೊಂದಿಗೆ ಪ್ರಕೃತಿ" ಎಂದ ನೆಟ್ಟಿಜನ್ಸ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More