Home> Lifestyle
Advertisement

Beard Can Also Change Luck: ಗಡ್ಡದಲ್ಲಿಯೂ ಕೂಡ ನಿಮ್ಮ ಅದೃಷ್ಟ ಅಡಗಿದೆ ಗೊತ್ತಾ?

Beard Can Also Change Luck - ಇಂದಿನ ಯುವ ಪೀಳಿಗೆಯಲ್ಲಿ ಗಡ್ಡ (Beard) ಬಿಡುವ ಹವ್ಯಾಸ ವ್ಯಾಪಕವಾಗಿ ಹೆಚ್ಚಾಗತೊಡಗಿದೆ. ಸೆಲಿಬ್ರಿಟಿಗಳು ಹಾಗೂ ಇತರರನ್ನು ನೋಡಿ ಯುವಕರು ತಮ್ಮ ಗಡ್ಡವನ್ನು ಬೆಳೆಸುತ್ತಿದ್ದಾರೆ.

Beard Can Also Change Luck: ಗಡ್ಡದಲ್ಲಿಯೂ ಕೂಡ ನಿಮ್ಮ ಅದೃಷ್ಟ ಅಡಗಿದೆ ಗೊತ್ತಾ?

Beard Can Also Change Luck - ಇಂದಿನ ಯುವ ಪೀಳಿಗೆಯಲ್ಲಿ ಗಡ್ಡ (Beard) ಬಿಡುವ ಹವ್ಯಾಸ ವ್ಯಾಪಕವಾಗಿ ಹೆಚ್ಚಾಗತೊಡಗಿದೆ. ಸೆಲಿಬ್ರಿಟಿಗಳು ಹಾಗೂ ಇತರರನ್ನು ನೋಡಿ ಯುವಕರು ತಮ್ಮ ಗಡ್ಡವನ್ನು ಬೆಳೆಸುತ್ತಿದ್ದಾರೆ. ಆದರೆ, ಈ ಗಡ್ಡ ನಮ್ಮ ಅದೃಷ್ಟದ (Fortune) ಜೊತೆಗೂ ಕೂಡ ತೊಡಕುಹಾಕಿಕೊಂಡಿದೆ ಎಂದರೆ ನೀವು ನಂಬುತ್ತೀರಾ? ಹೌದು ಜ್ಯೋತಿಷ್ಯ (Jyotishya)ಯೋಗದ (Yoga) ಅನುಸಾರ ಹಲವು ಯೋಗಗಳ ಅವಧಿಯಲ್ಲಿ ಗಡ್ಡ ಬಿಡುವುದು ಧನ ಹಾಗೂ ಯಶಸ್ಸಿನ ಪ್ರಾಪ್ತಿಗೆ ಕಾರಣವಾಗುತ್ತದೆ ಎನ್ನಲಾಗಿದೆ. ಆದರೆ, ಹಲವು ಬಾರಿ ಇದರಿಂದ ಹಾನಿ ಕೂಡ ಆಗುತ್ತದೆ. ಏಕೆಂದರೆ ಗಡ್ಡ ಬಿಡುವಾಗ ಅವರು ಈ ಕುರಿತು ಆಲೋಚನೆ ಮಾಡದ ಕಾರಣ ಗಡ್ಡದಿಂದ ತಮಗೆ ಹಾನಿಯಾಗಿದೆ ಎಂಬುದು ಅವರಿಗೆ ಗೊತ್ತೇ ಆಗುವುದಿಲ್ಲ.

ಜೋತಿಷ್ಯಶಾಸ್ತ್ರದ (Astrology) ಪ್ರಕಾರ ಯಾರು ಗಡ್ಡ ಕಾಯಬೇಕು ಹಾಗೂ ಯಾರು ಕಾಯಬಾರದು ಎಂಬುದಕ್ಕೂ ಒಂದು ಲೆಕ್ಕಾಚಾರ ಇದೆ. ಒಂದು ವೇಳೆ ಜನ್ಮ ಜಾತಕದಲ್ಲಿ ಲಗ್ನದ ಮೇಲೆ ಕೇತುವಿನ ಪ್ರಭಾವವಿದ್ದರೆ ಅಥವಾ ಸಿಂಹ ರಾಶಿಯಲ್ಲಿ ರಾಹು-ಕೇತುಗಳ ವಿಶೇಷ ಪ್ರಭಾವ ಇರುವ ಜಾತಕದವರು ಗಡ್ಡ ಬೆಳೆಸಬೇಕು. ಆದರೆ ಇದರ ಅರ್ಥ ಸಂಪೂರ್ಣ ಸಾಧು-ಸನ್ಯಾಸಿಗಳ ರೀತಿ ಗಡ್ಡ ಕಾಯಬೇಕು ಎಂಬುದು ಇದರ ಅರ್ಥ ಅಲ್ಲ. ತಿಳುವಾದ ಗಡ್ಡ ಅಥವಾ ಫ್ರೆಂಚ್ ಕಟ್ ಗಡ್ಡದಿಂದಲೂ ಕೂಡ ಲಾಭ ಸಿಗುತ್ತದೆ. 

ಆದರೆ ಯಾರ ಜಾತಕದಲ್ಲಿ ಶುಕ್ರ ಪ್ರಬಲನಾಗಿರುತ್ತಾನೆಯೋ ಮತ್ತು ಉಚ್ಚ ಅಭಿಲಾಶಿಯಾಗಿರುತ್ತಾನೆ ಹಾಗೂ ಯಾರಿಗೆ ಶುಕ್ರ ದೆಸೆಯಿಂದ ಉತ್ತಮ ಲಾಭ ಸಿಗುತ್ತಿದೆಯೋ, ಆ ವ್ಯಕ್ತಿಗಳು ಗಡ್ಡ ಕಾಯಬಾರದು.

ಇದನ್ನೂ ಓದಿ-  Hanuman Temple: ಶ್ರೀ ಆಂಜನೇಯನನ್ನು ಸ್ತ್ರೀ ರೂಪದಲ್ಲಿ ಆರಾಧಿಸಲಾಗುವ ಈ ದೇವಸ್ಥಾನದ ಬಗ್ಗೆ ನಿಮಗೆ ತಿಳಿದಿದೆಯಾ?

ಒಂದು ವೇಳೆ ಇಂತಹ ಜನರು ಗಡ್ಡ ಕಾಯ್ದರೆ, ಶುಕ್ರ ಮುನಿಸಿಕೊಳ್ಳುವ ಸಾಧ್ಯತೆ ಇದೆ ಹಾಗೂ ಅವರಿಗೆ ಹಾನಿ ಸಂಭವಿಸುವ ಸಾಧ್ಯತೆ ಕೂಡ ಇದೆ. ಜೋತಿಷ್ಯಶಾಸ್ತ್ರದ ಪ್ರಕಾರ ಶುಕ್ರನಿಗೆ ಶರೀರದ ಮೇಲೆ ಅನಾವಶ್ಯಕ ಹೊರೆ ಏರಿಸುವುದು ಇಷ್ಟ ಇಲ್ಲ ಎನ್ನಲಾಗುತ್ತದೆ. ಹೀಗಾಗಿ ಶುಕ್ರನ ಮಹಾದೆಸೆಯಲ್ಲಿ ಶುಕ್ರನನ್ನು ಬಲಪಡಿಸಲು ಮುಖವನ್ನು ಸುಂದರವಾಗಿಡಿ ಹಾಗೂ ಗಡ್ಡವನ್ನು ಬೋಳಿಸಿ. ಇಂತಹ ಸ್ಥಿತಿಯಲ್ಲಿ ಗಡ್ಡ ಕಾಯುವುದು ಶುಕ್ರನಿಗೆ ಸಂಬಂಧಿಸಿದ ಪ್ರಭಾವಗಳನ್ನು ನಷ್ಟಗೊಳಿಸುತ್ತದೆ.

ಇದನ್ನೂ ಓದಿ-Astrology Tips for Luck: 'ಅದೃಷ್ಟ ಕೈ ಕೊಟ್ಟರೆ' ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೀಗೆ ಮಾಡಿ!

(ಸೂಚನೆ: ಮೇಲೆ ನೀಡಲಾಗಿರುವ ಮಾಹಿತಿ ಧಾರ್ಮಿಕ ನಂಬಿಕೆಗಳು ಹಾಗೂ ಲೌಕಿಕ ಮಾನ್ಯತೆಗಳನ್ನು ಆಧರಿಸಿದೆ. ಸಾಮಾನ್ಯ ತಿಳುವಳಿಕೆಯನ್ನು ಗಮನದಲ್ಲಿಟ್ಟುಕೊಂಡು ಮಾತ್ರ ಪ್ರಸ್ತುತಪಡಿಸಲಾಗಿದೆ. ಝೀ ಹಿಂದೂಸ್ತಾನ್ ಕನ್ನಡ ಅದನ್ನು ಪುಷ್ಟೀಕರಿಸುವುದಿಲ್ಲ)

ಇದನ್ನೂ ಓದಿ-Chaitra 2021: ಹಿಂದೂ ಪಂಚಾಂಗದ ಮೊದಲ ತಿಂಗಳು ಚೈತ್ರ ಮಾಸದಲ್ಲಿ ಏನು ತಿನ್ನಬೇಕು ಏನು ತಿನ್ನಬಾರದು ತಿಳಿದಿದೆಯೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

Read More