Home> Lifestyle
Advertisement

Weight Loss: ತೂಕ ಕಳೆದುಕೊಳ್ಳುವಾಗ ಈ ತಪ್ಪುಗಳನ್ನು ಮಾಡಲೇಬಾರದು

ತೂಕ ಕಳೆದುಕೊಳ್ಳುವವರು ಯಾವ ತಪ್ಪುಗಳನ್ನು ಮಾಡಬಾರದು?: ಅನೇಕ ಬಾರಿ ನಾವು ತೂಕವನ್ನು ಕಳೆದುಕೊಳ್ಳುವ ಪ್ರಯತ್ನದಲ್ಲಿ ಅತಿಯಾಗಿ ಕ್ರಿಯಾಶೀಲರಾಗುತ್ತೇವೆ. ಇದರಿಂದಾಗಿ ನಾವು ನಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಅನೇಕ ತಪ್ಪುಗಳನ್ನು ಮಾಡುತ್ತೇವೆ.

Weight Loss: ತೂಕ ಕಳೆದುಕೊಳ್ಳುವಾಗ ಈ ತಪ್ಪುಗಳನ್ನು ಮಾಡಲೇಬಾರದು

ನವದೆಹಲಿ: ಹೆಚ್ಚಿನ ಜನರು ತೂಕವನ್ನು ಕಳೆದುಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ಅವರು ಡಯೆಟ್, ಜಿಮ್, ವ್ಯಾಯಾಮದಂತಹ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ, ಈ ಸಂದರ್ಭದಲ್ಲಿ ಮಾಡುವ ಕೆಲವು ತಪ್ಪುಗಳಿಂದ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ತೂಕ ಇಳಿಸುವ ಪ್ರಕ್ರಿಯೆಯಲ್ಲಿ ನಾವು ಏನು ಮಾಡಬಾರದು ಎಂಬುದರ ಬಗ್ಗೆ ತಿಳಿದುಕೊಳ್ಳುವುದ ಬಹುಮುಖ್ಯ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.  

ತೂಕ ಕಳೆದುಕೊಳ್ಳುವಾಗ ಮಾಡುವ 5 ತಪ್ಪುಗಳು

1. ದೀರ್ಘಕಾಲ ಹಸಿವಿನಿಂದ ಇರುವುದು

ದೀರ್ಘಕಾಲದವರೆಗೆ ಹಸಿದಿದ್ದಲ್ಲಿ ತೂಕವನ್ನು ಕಳೆದುಕೊಳ್ಳಬಹುದು ಎಂದು ಹಲವರು ಭಾವಿಸಿರುತ್ತಾರೆ. ಆದರೆ, ಇದು ಬಹುತೇಕರು ಮಾಡುವ ದೊಡ್ಡ ತಪ್ಪು. ಏಕೆಂದರೆ ಹೀಗೆ ಮಾಡುವುದರಿಂದ ಚಯಾಪಚಯ ಪ್ರಕ್ರಿಯೆ ಕಡಿಮೆಯಾಗುತ್ತದೆ. ಇದರಿಂದ ತೂಕ ನಷ್ಟವಾಗುವ ಬದಲು ದೇಹವು ದುರ್ಬಲವಾಗಬಹುದು. ಹೀಗಾಗಿ ದೀರ್ಘಕಾಲ ಹಸಿವಿನಿಂದ ಇರುವುದು ಒಳ್ಳೆಯದಲ್ಲ.

ಇದನ್ನೂ ಓದಿ: Healthy Teeth: ಆರೋಗ್ಯಕರ ಹಲ್ಲುಗಳಿಗಾಗಿ ನಿಮ್ಮ ಡಯಟ್ನಲ್ಲಿರಲಿ ಈ 2 ಆಹಾರ

2. ಉಪಹಾರ ಸೇವಿಸದಿರುವುದು

ಡಯಟಿಂಗ್ ಹೆಸರಿನಲ್ಲಿ ಅನೇಕರು ಬೆಳಗಿನ ಉಪಾಹಾರವನ್ನು ಬಿಟ್ಟುಬಿಡುತ್ತಾರೆ. ಇದು ಆರೋಗ್ಯದ ವಿಷಯದಲ್ಲಿ ಮಾಡುವ ದೊಡ್ಡ ತಪ್ಪು. ಬೆಳಗಿನ ಉಪಾಹಾರವು ದಿನದ ಪ್ರಮುಖ ಊಟವೆಂದು ಆರೋಗ್ಯ ತಜ್ಞರು ಒಪ್ಪುತ್ತಾರೆ. ಬೆಳಗಿನ ಉಪಾಹಾರ ಸೇವಿಸಿದರೆ ದಿನವಿಡೀ ಶಕ್ತಿ ನಿಮ್ಮಲ್ಲಿ ಹಾಗೆಯೇ ಉಳಿಯುತ್ತದೆ.

3. ಕಡಿಮೆ ಪ್ರೋಟೀನ್ ಆಹಾರ ತಿನ್ನುವುದು

ತೂಕವನ್ನು ಕಳೆದುಕೊಳ್ಳುವ ಪ್ರಯತ್ನದಲ್ಲಿ ಅನೇಕರು ಪ್ರೋಟೀನ್-ಭರಿತ ಆಹಾರ ಸೇವಿಸುವುದನ್ನು ಮರೆತುಬಿಡುತ್ತಾರೆ. ಈ ರೀತಿ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಏಕೆಂದರೆ ಈ ಪೋಷಕಾಂಶವು ನಮ್ಮ ಸ್ನಾಯುಗಳ ಬೆಳವಣಿಗೆಗೆ ಬಹಳ ಮುಖ್ಯವಾಗಿದೆ. ಸಿರಿಧಾನ್ಯ, ಸೋಯಾಬೀನ್ ಮತ್ತು ಮೊಟ್ಟೆಯ ಬಿಳಿಭಾಗಗಳಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಕಂಡುಬರುತ್ತದೆ.

4. ಸಂರಕ್ಷಿತ ಆಹಾರ ತಿನ್ನುವುದು

ಮಾರುಕಟ್ಟೆಯಲ್ಲಿ ಕಂಡುಬರುವ ಅನೇಕ ಸಂರಕ್ಷಿತ ಆಹಾರ ಪದಾರ್ಥಗಳು ಆರೋಗ್ಯಕರವೆಂದು ಹೇಳಲಾಗುತ್ತದೆ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಸಂರಕ್ಷಕಗಳು ಮತ್ತು ಸಕ್ಕರೆಯನ್ನು ಹೊಂದಿರಬಹುದು. ಇಂತಹ ‘ಡಯಟ್ ಆಹಾರಗಳು’ ಆರೋಗ್ಯವನ್ನು ಹಾಳುಮಾಡುತ್ತವೆ. ಹೀಗಾಗಿ ನೀವು ತಾಜಾ ಆಹಾರವನ್ನು ಮಾತ್ರ ಸೇವಿಸುವುದು ಉತ್ತಮ.

ಇದನ್ನೂ ಓದಿ: Banana Side Effects: ಹೆಚ್ಚು ಬಾಳೆಹಣ್ಣು ತಿನ್ನುವುದರಿಂದ ಏನಾಗುತ್ತೆ ಗೊತ್ತಾ..?

5. ರಾತ್ರಿ ವಾಕ್ ಮಾಡದಿರುವುದು

ನಾವು ಬೆಳಗಿನ ನಡಿಗೆಯಲ್ಲಿ ಹೆಚ್ಚು ಸಮಯ ಕಳೆಯುತ್ತೇವೆ. ಆದರೆ, ರಾತ್ರಿಯ ಊಟದ ನಂತರ ವಾಕ್ ಮಾಡಲು ಸಮಯ ತೆಗೆದುಕೊಳ್ಳುವುದು ಮುಖ್ಯ. ತಜ್ಞರ ಪ್ರಕಾರ ರಾತ್ರಿ 15 ನಿಮಿಷಗಳ ನಡಿಗೆ ಆರೋಗ್ಯಕ್ಕೆ ಒಳ್ಳೆಯದು. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More