ಈ ಆಹಾರಗಳನ್ನು ತಿಂದರೆ ಕೂದಲು ಉದುರಲ್ಲ..!

Yashaswini V

ಕೂದಲು ಉದುರುವಿಕೆ

ನೀವು ಸಮತೋಲಿತ ಆಹಾರ ಸೇವಿಸುತ್ತಿದ್ದರೂ ಕೂದಲು ಉದುರುತ್ತಿದೆಯೇ? ಪ್ರಮುಖ ಖನಿಜಗಳು ಮತ್ತು ವಿಟಮಿನ್‌ಗಳ ಕೊರತೆಯೇ ಇದಕ್ಕೆ ಮೂಲ ಕಾರಣ.

Yashaswini V

ಹೇರ್ ಫಾಲ್ ಆಹಾರ

ನಿಮ್ಮ ದೈನಂದಿನ ಆಹಾರದಲ್ಲಿ ಕೆಲವು ಆಹಾರಗಳ ಬಳಕೆಯಿಂದ ನೀವು ಕೂದಲು ಉದುರುವಿಕೆ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು.

Yashaswini V

ಕೂದಲು, ನೆತ್ತಿಯ ಆರೋಗ್ಯ

ಈ ಆಹಾರಗಳು ನಿಮ್ಮ ನೆತ್ತಿಗೆ ಅಗತ್ಯವಿರುವ ಖನಿಜಗಳು, ವಿಟಮಿನ್‌ಗಳನ್ನು ಒದಗಿಸಿ ಕೂದಲನ್ನು ಬುಡದಿಂದಲೂ ಗಟ್ಟಿಯಾಗಿಸುತ್ತದೆ. ಅವುಗಳೆಂದರೆ...

Yashaswini V

ಕ್ಯಾರೆಟ್

ಕ್ಯಾರೆಟ್ ಸೇವನೆಯು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವುದರ ಜೊತೆಗೆ ಬಾಹ್ಯ ಹಾನಿಗಳಿಂದ ಕೂದಲಿಗೆ ರಕ್ಷಣೆ ನೀಡುತ್ತದೆ.

Yashaswini V

ಮೊಟ್ಟೆಗಳು

ನೈಸರ್ಗಿಕ ಪ್ರೋಟೀನ್ ಒದಗಿಸಬಲ್ಲ ಮೊಟ್ಟೆಗಳು ಹಾನಿಗೊಳಗಾದ ಕೂದಲುಗಳನ್ನು ಕಂಡೀಷನಿಂಗ್ ಮಾಡುವ ಮೂಲಕ ಕೂದಲು ಉದುರುವಿಕೆಯನ್ನು ತಡೆಯುತ್ತದೆ.

Yashaswini V

ಓಟ್ಸ್

ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುವ ಓಟ್ಸ್ ಅನ್ನು ಕೂದಲಿಗೆ ಅನ್ವಯಿಸುವುದರಿಂದ ಇದು ನೆತ್ತಿಯ ತುರಿಕೆ, ಶುಷ್ಕತೆಯನ್ನು ನಿವಾರಿಸುತ್ತದೆ.

Yashaswini V

ವಾಲ್ನಟ್ಸ್

ಒಮೆಗಾ-6 ಕೊಬ್ಬಿನಾಮ್ಲಗಳು, ಕಬ್ಬಿಣ, ಸತು, ಬಿ1, ಬಿ6, ಬಿ9 ಜೀವಸತ್ವಗಳಿಂದ ಸಮೃದ್ಧವಾಗಿರುವ ವಾಲ್ನಟ್ ಅನ್ನು ನಿತ್ಯ ಸೇವಿಸುವುದರಿಂದ ಇದು ಕೂದಲು ಉದುರುವಿಕೆಯನ್ನು ತಡೆದು, ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

Yashaswini V

ವಿಟಮಿನ್ ಸಿ ಆಹಾರ

ನಿಮ್ಮ ದೈನಂದಿನ ಆಹಾರಪದ್ಧತಿಯಲ್ಲಿ ವಿಟಮಿನ್ ಸಿ ಭರಿತ ಆಹಾರಗಳನ್ನು ತಿನ್ನುವುದರಿಂದ ಕೂದಲುದುರುವಿಕೆಯಷ್ಟೇ ಅಲ್ಲ ಕೂದಲ ಹಲವು ಸಮಸ್ಯೆಗಳಿಂದ ರಕ್ಷಣೆ ಪಡೆಯಬಹುದು.

Yashaswini V

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

Yashaswini V
Read Next Story