Home> Lifestyle
Advertisement

Relation Tips: ನಿಮ್ಮ ವೈವಾಹಿಕ ಜೀವನ ಕೂಡ ಬಂಬಾಟಾಗಿರಬೇಕೆ? ರಾತ್ರಿ ಮಲಗುವ ಮುನ್ನ ಈ ಒಂದು ಕೆಲಸ ಮಾಡಿ!

Relationship Tips: ವಿವಾಹಿತ ಪುರುಷರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಅವರ ವೈವಾಹಿಕ ಜೀವನದ ಗಾಡಿ ಹಳಿತಪ್ಪಲು ಪ್ರಾರಂಭಿಸುತ್ತದೆ. ವಿವಾಹಿತ ಪುರುಷರಿಗೆ ಇಲ್ಲಿವೆ ಕೆಲ ಪ್ರಮುಖ ಸಲಹೆಗಳು.
 

Relation Tips: ನಿಮ್ಮ ವೈವಾಹಿಕ ಜೀವನ ಕೂಡ ಬಂಬಾಟಾಗಿರಬೇಕೆ? ರಾತ್ರಿ ಮಲಗುವ ಮುನ್ನ ಈ ಒಂದು ಕೆಲಸ ಮಾಡಿ!

Relationship Tips:ವಿವಾಹಿತ ಪುರುಷರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಇಲ್ಲದಿದ್ದರೆ, ಹದಗೆಟ್ಟ ಆರೋಗ್ಯದಿಂದ ವೈವಾಹಿಕ ಜೀವನವೇ ಹಾಳಾಗಬಹುದು. ಇದೇ ಕಾರಣದಿಂದ ಆರೋಗ್ಯ ತಜ್ಞರು ಕೂಡ ವಿವಾಹಿತ ಪುರುಷರಿಗೆ ಕೆಲ ಸಲಹೆಗಳನ್ನು ಅನುಸರಿಸಲು ಸಲಹೆ ನೀಡುತ್ತಾರೆ. ಇದರಿಂದ ಅವರ ಆರೋಗ್ಯದ ಜೊತೆಗೆ ವೈವಾಹಿಕ ಜೀವನವೂ ಸುಖಮಯವಾಗಿರುತ್ತದೆ. ವಿವಾಹಿತ ಅನುಸರಿಸಬೇಕಾದ ಸಲಹೆಗಳು ಯಾವುವು ತಿಳಿಯೋಣ,

ಒತ್ತಡದಿಂದಾಗಿ ಪುರುಷರ ವೈವಾಹಿಕ ಜೀವನ ಹಾಳಾಗುತ್ತದೆ

ನಿತ್ಯ ಸಾಕಷ್ಟು ನಿದ್ರೆ ಪಡೆಯದ ಪುರುಷರು ಅತಿಯಾದ ಒತ್ತಡಕ್ಕೆ ಒಳಗಾಗುತ್ತಾರೆ. NCBI ನೀಡಿರುವ ವರದಿಯೊಂದರ ಪ್ರಕಾರ ಅಧಿಕ ಒತ್ತಡ ಪುರುಷರ ವೈವಾಹಿಕ ಜೀವನದಲ್ಲಿ ಹುಳಿ ಹಿಂಡುತ್ತದೆ ಮತ್ತು ಪದೇ ಪದೇ ಜಗಳಕ್ಕೆ ಕಾರಣವಾಗುತ್ತದೆ ಎನ್ನಲಾಗಿದೆ. ಆದ್ದರಿಂದ, ವೈವಾಹಿಕ ಜೀವನವನ್ನು ಸುಖಮಯವಾಗಿಸಲು ಪುರುಷರು ಒತ್ತಡದಿಂದ ದೂರ ಉಳಿಯಬೇಕು.

ಇದಕ್ಕಾಗಿ ಪ್ರತಿದಿನ ಸಾಕಷ್ಟು ನಿದ್ರೆ ಮಾಡುವುದು ಅವಶ್ಯಕ 
ವಿವಾಹಿತ ಪುರುಷರು ಮಲಗುವ ಮುನ್ನ ತಜ್ಞರು ನೀಡುವ ಸಲಹೆಗಳನ್ನು ಅನುಸರಿಸಿದರೆ ಅವರಿಗೆ ಬೇಗನೆ ನಿದ್ರೆ ಬರುತ್ತದೆ. ವಿವಾಹಿತ ಪುರುಷರು ಸಾಕಷ್ಟು ನಿದ್ರೆ ಮಾಡದಿದ್ದರೆ, ಅವರು ನಿದ್ರಾಹೀನತೆ ಅಥವಾ ಇನ್ಸೋಮೆನಿಯಾ ಸಮಸ್ಯೆ ಕಾಡಬಹುದು. 

>> ವಿವಾಹಿತ ಪುರುಷರು ಪ್ರತಿ ರಾತ್ರಿ ಒಂದೇ ಸಮಯಕ್ಕೆ ಮಲಗಲು ಪ್ರಯತ್ನಿಸಬೇಕು ಮತ್ತು ಮಾರನೆಯ ದಿನ ಬೆಳಗ್ಗೆ ಒಂದೇ ಸಮಯಕ್ಕೆ ಏಳಬೇಕು. ಇದನ್ನು ಕೆಲ ದಿನಗಳವರೆಗೆ ಅನುಸರಿಸಿದರೆ, ನಿಮ್ಮ ನಿದ್ರೆಯ ಪ್ಯಾಟರ್ನ್ ಸರಿಯಾಗುತ್ತದೆ.

>> ಮಲಗುವ ಮುನ್ನ ಪುರುಷರು ತುಂಬಾ ಹೆವಿ ಅಥವಾ ಲೈಟ್ ಆಹಾರವನ್ನು ತೆಗೆದುಕೊಳ್ಳಬಾರದು. ಇದು ನಿಮ್ಮ ನಿದ್ರೆಗೆ ಅಡ್ಡಿಯಾಗಬಹುದು. ಮಲಗುವ 2 ಗಂಟೆಗಳ ಮೊದಲು ನೀವು ಆಹಾರವನ್ನು ಸೇವಿಸಬೇಕು.

>> ವಿವಾಹಿತ ಪುರುಷರು ಮಲಗುವ ಮುನ್ನ ತಮ್ಮ ಕೋಣೆ ಶಾಂತವಾಗಿದೆ, ತಂಪಾಗಿದೆ ಮತ್ತು ಕತ್ತಲೆಯಿಂದ ಕೂಡಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇದು ತ್ವರಿತವಾಗಿ ನಿದ್ರೆಗೆ ಜಾರಲು ಸಹಾಯ ಮಾಡುತ್ತದೆ.

>> ರಾತ್ರಿ ಹೊತ್ತು ನಿಮಗೆ ನಿದ್ರೆ ಬರುತ್ತಿಲ್ಲ ಎಂದಾದರೆ, ನೀವು ನಿಮ್ಮ ಹಗಲಿನಲ್ಲಿ ಮಲಗುವ ಅಭ್ಯಾಸದ ಬಗ್ಗೆ ಗಮನ ಹರಿಸಬೇಕು. ಏಕೆಂದರೆ ಇದು ರಾತ್ರಿಯಲ್ಲಿ ನಿದ್ರಾಹೀನತೆಗೆ ಕಾರಣವಾಗಬಹುದು.

ಇದನ್ನೂ ಓದಿ-ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಗಿಸಲು ಇಲ್ಲಿದೆ ಒಂದು ರಾಮಬಾಣ ಉಪಾಯ!

>> ಒತ್ತಡದ ಕಾರಣ ವಿವಾಹಿತ ಪುರುಷರ ರಾತ್ರಿ ನಿದ್ರೆಗೆ ಅಡಚಣೆ ಎದುರಾಗಬಹುದು. ಇದಕ್ಕಾಗಿ ನೀವು  ದೈಹಿಕ ಚಟುವಟಿಕೆಯಲ್ಲಿ ತೊಡಗಬೇಕು. ಇದು ನಿಮ್ಮ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ-Vastu Remedies: ನಿಮ್ಮ ಮನೆಯಲ್ಲಿಯೂ ಕೂಡ ಇಂತಹ ಅಲಂಕಾರದ ವಸ್ತುಗಳಿದ್ದರೆ, ತಕ್ಷಣವೇ ಅವುಗಳನ್ನು ಹೊರಹಾಕಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹ್ತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Read More