Home> Lifestyle
Advertisement

Venus Transit April 2022: ಶೀಘ್ರದಲ್ಲಿಯೇ ಈ ಮೂರು ರಾಶಿಗಳ ಜನರ ಮೇಲೆ ಧನವೃಷ್ಟಿ, ಭಾಗ್ಯ ತೆರೆಯಲಿದ್ದಾರೆ ಧನದಾತ ಶುಕ್ರ ಹಾಗೂ ಬೃಹಸ್ಪತಿ

Shukra Rashi Parivartan 2022 - ಬರುವ ಏಪ್ರಿಲ್ 27ರಿಂದ ಶುಕ್ರ ತನ್ನ ರಾಶಿಯನ್ನು ಬದಲಾಯಿಸಿ ಮೀನ ರಾಶಿಗೆ ಪ್ರವೇಶಿಸಲಿದೆ. ಮೀನ ರಾಶಿಯಲ್ಲಿ ಈಗಾಗಲೇ ದೇವಗುರು ಬೃಹಸ್ಪತಿ ವಿರಾಜಮಾನನಾಗಿದ್ದಾನೆ. ಹೀಗಿರುವಾಗ ಎರಡು ಶುಭಗ್ರಹಗಳ ಸಂಯೋಜನೆ ಒಟ್ಟು ಮೂರು ರಾಶಿಗಳ ಜನರಿಗೆ ಅಪಾರ ಲಾಭ ನೀಡಲಿದೆ.
 

Venus Transit April 2022: ಶೀಘ್ರದಲ್ಲಿಯೇ ಈ ಮೂರು ರಾಶಿಗಳ ಜನರ ಮೇಲೆ ಧನವೃಷ್ಟಿ, ಭಾಗ್ಯ ತೆರೆಯಲಿದ್ದಾರೆ ಧನದಾತ ಶುಕ್ರ ಹಾಗೂ ಬೃಹಸ್ಪತಿ

ನವದೆಹಲಿ: Venus Trainsit 2022 In Pices - ಜೋತಿಷ್ಯ ಶಾಸ್ತ್ರದಲ್ಲಿ ಶುಕ್ರ ಮತ್ತು ಗುರು ಗ್ರಹಗಳನ್ನು ತುಂಬಾ ಪ್ರಮುಖ ಗ್ರಹಗಳೆಂದು ಪರಿಗಣಿಸಲಾಗುತ್ತದೆ.  ಏಕೆಂದರೆ ಶುಕ್ರನನ್ನು ಸಂಪತ್ತು ದಯಪಾಲಕ ಎನ್ನಲಾದರೆ, ಮತ್ತೊಂದೆಡೆ, ದೇವಗುರು ಬೃಹಸ್ಪತಿಯನ್ನು ಅದೃಷ್ಟದಾತ ಎನ್ನಲಾಗುತ್ತದೆ. ಹೀಗಿರುವಾಗ ಇದೀಗ ಈ ಎರಡೂ ಶುಭ ಗ್ರಹಗಳು ಒಂದಾಗಲಿವೆ. ಈ ಇಬ್ಬರ ಸಂಯೋಜನೆ 3 ರಾಶಿಗಳ ಜನರ ಮೇಲೆ ಅತ್ಯಂತ ಮಂಗಳಕರ ಪರಿಣಾಮ ಬೀರಲಿದೆ.ಈ ಶುಕ್ರ ಹಾಗೂ ಗುರುವಿನ ಈ ಸಂಯೋಜನೆ ಮೀನ ರಾಶಿಯಲ್ಲಿ ಇರಲಿದೆ. ಏಪ್ರಿಲ್ 27 ರಂದು, ಶುಕ್ರನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ, ಆದರೆ ಈಗಾಗಲೇ ಇಲ್ಲಿ ಗುರು ವಿರಾಜಮಾನನಾಗಿದ್ದಾನೆ.ಈ ಸಂಯೋಜನೆ ಮೇ 23 ರವರೆಗೆ ಮುಂದುವರೆಯಲಿದೆ ಮತ್ತು ಅಲ್ಲಿಯವರೆಗೆ ಈ 3 ರಾಶಿರಾಶಿಗಳ ಜನರಿಗೆ ಲಾಭವೋ ಲಾಭ ಹರಿದುಬರಲಿದೆ.

ಈ ರಾಶಿಗಳ ಜನರು ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ

ವೃಷಭ: ಜೋತಿಷ್ಯ ಶಾಸ್ತ್ರದ ಪ್ರಕಾರ ವೃಷಭ ರಾಶಿಯವರಿಗೆ ಶುಕ್ರ-ಗುರುಗಳ ಈ ಸಂಯೋಜನೆಯಿಂದ ಆದಾಯದಲ್ಲಿ ವೃದ್ಧಿಯಾಗಲಿದೆ. ಈ ಹೆಚ್ಚಿದ ಆದಾಯ ಆರ್ಥಿಕ ಸ್ಥಿತಿಯನ್ನು ಬಳಪಡಿಸಲಿದೆ. ಸಾಲಬಾಧೆಯಿಂದ ಮುಕ್ತಿ ಸಿಗಲಿದೆ.  ವೃತ್ತಿ ಜೀವನದಲ್ಲಿಯೂ ಕೂಡ ಯಶಸ್ಸು ಕಾಣುವಿರಿ. ಐಷಾರಾಮಿ ಜೀವನದ ಆನಂದವನ್ನು ಅನುಭವಿಸುವಿರಿ.

ಇದನ್ನೂ ಓದಿ-Akshaya Tritiya 2022: ಅಕ್ಷಯ್ ತೃತಿಯಾ ಯಾವಾಗ? ವಿವಾಹಕ್ಕೆ ಅದ್ಭುತ ಯೋಗ

ಮಿಥುನ: ಗುರು-ಶುಕ್ರರ ಈ ಸಂಯೋಜನೆಯು ಮಿಥುನ ರಾಶಿ ಜಾತಕದವರ ವೃತ್ತಿಯಲ್ಲಿ ಪ್ರಗತಿಯನ್ನು ನೀಡಲಿದೆ. ಹೊಸ ಉದ್ಯೋಗದ ಅವಕಾಶ ಸಿಗುವ ಸಾಧ್ಯತೆ ಇದೆ. ಪ್ರಮೋಷನ್-ಇನ್ಕ್ರಿಮೆಂಟ್ ಸಿಗಲಿದೆ. ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ವ್ಯಾಪಾರಸ್ಥರಿಗೆ ಲಾಭ ಹೆಚ್ಚಾಗಲಿದೆ. 

ಇದನ್ನೂ ಓದಿ-April 25 ರಿಂದ ಈ 3 ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ

ಕರ್ಕ: ಕರ್ಕ ರಾಶಿಯವರಿಗೆ ಗುರು ಮತ್ತು ಶುಕ್ರರ ಸಂಯೋಜನೆಯು ವಿದೇಶ ಪ್ರಯಾಣದ ಅವಕಾಶವನ್ನು ಕಲ್ಪಿಸುವ ಸಾಧ್ಯತೆ ಇದೆ. ವಿದೇಶದಿಂದ ಧನಾಗಮನದ ಸಾಧ್ಯತೆ ಇದೆ. ಆದಾಯವನ್ನು ಹೆಚ್ಚಿಸುವ ಹಲವಾರು ಅವಕಾಶಗಳು ಸೃಷ್ಟಿಯಾಗಲಿವೆ. ಪರೀಕ್ಷೆ-ಸಂದರ್ಶನಕ್ಕೆ ಹಾಜರಾಗಲಿರುವವರು ಯಶಸ್ಸನ್ನು ಪಡೆಯಲಿದ್ದಾರೆ.

ಇದನ್ನೂ ನೋಡಿ-

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More