Home> Lifestyle
Advertisement

Vastu Tips: ಮನೆಯ ಯಾವ ದಿಕ್ಕಿನಲ್ಲಿ ಆಮೆ ಪ್ರತಿಮೆ ಇಟ್ಟರೆ ಶುಭ ಗೊತ್ತಾ..?

ಹಣಕಾಸಿನ ಸಮಸ್ಯೆಗೆ ಸ್ಫಟಿಕದ ಆಮೆಯನ್ನು ಮನೆಗೆ ತರಬೇಕು. ಆಮೆಯನ್ನು ಡ್ರಾಯಿಂಗ್ ರೂಂನಲ್ಲಿ ಇಟ್ಟರೆ ಉತ್ತಮ, ಆದರೆ ಯಾವುದೇ ಕಾರಣಕ್ಕೂ ಮಲಗುವ ಕೋಣೆಯಲ್ಲಿ ಇಡಬಾರದು.

Vastu Tips: ಮನೆಯ ಯಾವ ದಿಕ್ಕಿನಲ್ಲಿ ಆಮೆ ಪ್ರತಿಮೆ ಇಟ್ಟರೆ ಶುಭ ಗೊತ್ತಾ..?

ನವದೆಹಲಿ:‌ ವಾಸ್ತುಶಾಸ್ತ್ರ ಹಾಗೂ ಪುರಾಣದಲ್ಲಿ ಆಮೆಗೆ ವಿಶೇಷ ಸ್ಥಾನವಿದೆ. ಕಚೇರಿ ಮತ್ತು ಮನೆಯೊಳಗೆ ಆಮೆ ಪ್ರತಿಮೆ ಇಡುವುದರಿಂದ ಧನಾತ್ಮಕ ಶಕ್ತಿ ಬರುತ್ತದೆ ಎಂಬ ನಂಬಿಕೆ ಇದೆ. ಆಮೆಯನ್ನು ವಿಷ್ಣುವಿನ ಸಂಕೇತ ಅಂತಾ ಪರಿಗಣಿಸಲಾಗಿದೆ. ಮಹಾವಿಷ್ಣುವು ಕೂರ್ಮಾವತಾರದಲ್ಲಿ ಬಂದು ತನ್ನ ಅದ್ಭುತ ಮಹಿಮೆ ತೋರಿದನೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದಲೇ ಆಮೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

ವಾಸ್ತು ಶಾಸ್ತ್ರದ ಪ್ರಕಾರ ಆಮೆ ಪ್ರತಿಮೆಯನ್ನು ಮನೆಯಲ್ಲಿಟ್ಟರೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ ಮತ್ತು ಸಂಪತ್ತು ವೃದ್ಧಿಯಾಗುತ್ತದೆ ಎಂಬುದು ನಂಬಿಕೆ. ಮನೆಯಲ್ಲಿ ಆಮೆ ಪ್ರತಿಮೆ ಇಡಬಯಸುವವರು ವಾಸ್ತುತಜ್ಞರ ಸಲಹೆ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ನಿಮಗೆ ಹಲವಾರು ಸಮಸ್ಯೆಗಳು ಕಾಡುತ್ತವೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Chanakya Niti: ಹಾವಿನ ಈ ಒಂದು ಗುಣ ಅರಿತುಕೊಂಡರೆ ಸಾಕು, ನಿಮ್ಮನ್ನು ಕಂಡು ಎದುರಾಳಿಗಳು ಗಡಗಡ ನಡುಗುತ್ತಾರೆ

ಮನೆಯಲ್ಲಿ ಯಾವ ದಿಕ್ಕಿನಲ್ಲಿ ಆಮೆ ಪ್ರತಿಮೆ ಇಟ್ಟರೆ ಶುಭವಾಗುತ್ತದೆ ಅನ್ನೋದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಸಾವಿರಾರು ವರ್ಷಗಳ ಕಾಲ ಬದುಕುವ ಆಮೆಗೆ ಶಾಸ್ತ್ರಗಳಲ್ಲಿ ಮಹತ್ವದ ಸ್ಥಾನ ನೀಡಿ ಗೌರವಿಸಲಾಗಿದೆಹೀಗಾಗಿ ಮನೆಯಲ್ಲಿ ಸುಖ-ಸಂತೋಷ, ಉತ್ತಮ ಆರೋಗ್ಯ, ಸಂಪತ್ತು-ಸಮೃದ್ಧಿ ಬೇಕಾದರೆ ಸರಿಯಾದ ಸ್ಥಳ ಮತ್ತು ದಿಕ್ಕಿನಲ್ಲಿ ಆಮೆ ಪ್ರತಿಮೆ ಪ್ರತಿಷ್ಠಾಪಿಸಬೇಕು.

ಮನೆಯಲ್ಲಿ ಆಮೆ ಪ್ರತಿಮೆ ಇಡುವುದರಿಂದ ಕುಟುಂಬ ಸದಸ್ಯರಲ್ಲಿ ಪ್ರೀತಿಯ ಭಾವನೆ ಹೆಚ್ಚಾಗುತ್ತದೆ. ಜೀವನದಲ್ಲಿ ಪ್ರಗತಿ ಸಾಧಿಸಬಹುದು ಎಂಬ ನಂಬಿಕೆ ಇದೆ. ಸರಿಯಾದ ದಿಕ್ಕಿನಲ್ಲಿ ಆಮೆ ಇಡುವುದರಿಂದ ನಿಮಗೆ ಯಾವುದೇ ರೀತಿಯ ಹಣದ ಕೊರತೆ ಎದುರಾಗುವುದಿಲ್ಲ. ಈ ಆಮೆ ಪ್ರತಿಮೆಯನ್ನು ತಂದಾಗ ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ, ಸರಿಯಾದ ಕ್ರಮದಲ್ಲಿ ಇಟ್ಟರೆ ಮಾತ್ರ ನಿಮಗೆ ಹೆಚ್ಚಿನ ಲಾಭವಾಗುತ್ತದೆ.

ಇದನ್ನೂ ಓದಿ: Vastu Tips For Health : ಉತ್ತಮ ಆರೋಗ್ಯಕ್ಕಾಗಿ ಈ 5 ವಾಸ್ತು ಸಲಹೆಗಳನ್ನು ಅನುಸರಿಸಿ

ಪೂಜಾ ಸ್ಥಳದಲ್ಲಿ ಲೋಹದ ಆಮೆ ಪ್ರತಿಮೆ ಇಡಬೇಕು. ಒಂದು ತಟ್ಟೆಯಲ್ಲಿ ನೀರು ಹಾಕಿ ಆಮೆ ಇಡುವುದು ಮಂಗಳಕರ. ಇದರಿಂದ ನಿಮಗೆ ಸಂತೋಷ, ಸಮೃದ್ಧಿ ಮತ್ತು ಯಶಸ್ಸು ಸಿಗುತ್ತದೆ. ಉತ್ತರ ದಿಕ್ಕಿನಲ್ಲಿ ಆಮೆ ಪ್ರತಿಮೆ ಇಡುವುದರಿಂದ ವ್ಯಾಪಾರದಲ್ಲಿ ಯಶಸ್ಸು ಸಿಗುತ್ತದೆ ಮತ್ತು ಸಂಪತ್ತು ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ. ಹಣಕಾಸಿನ ಸಮಸ್ಯೆಗೆ ಸ್ಫಟಿಕದ ಆಮೆಯನ್ನು ಮನೆಗೆ ತರಬೇಕು. ಆಮೆಯನ್ನು ಡ್ರಾಯಿಂಗ್ ರೂಂನಲ್ಲಿ ಇಟ್ಟರೆ ಉತ್ತಮ, ಆದರೆ ಯಾವುದೇ ಕಾರಣಕ್ಕೂ ಮಲಗುವ ಕೋಣೆಯಲ್ಲಿ ಇಡಬಾರದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More