Home> Lifestyle
Advertisement

Vastu Tips For Good Luck: ಈ ಮಣ್ಣಿನ ವಸ್ತುಗಳು ಮನೆಯಲ್ಲಿದ್ದರೆ ಹೊಳೆಯಲಿದೆ ಅದೃಷ್ಟ

Vastu Tips For Good Luck: ಕುಂಬಾರಿಕೆ, ಶಿಲ್ಪಗಳು, ಅಲಂಕಾರಿಕ ವಸ್ತುಗಳು ಮತ್ತು ದೀಪವು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತುಂಬುತ್ತದೆ. ಆದ್ದರಿಂದ, ವಾಸ್ತು ಶಾಸ್ತ್ರದ ನಿರ್ದೇಶನದ ಪ್ರಕಾರ ಈ ವಸ್ತುಗಳನ್ನು ಮನೆಯಲ್ಲಿ ಇರಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.

Vastu Tips For Good Luck: ಈ ಮಣ್ಣಿನ ವಸ್ತುಗಳು ಮನೆಯಲ್ಲಿದ್ದರೆ ಹೊಳೆಯಲಿದೆ ಅದೃಷ್ಟ

Vastu Tips For Good Luck: ಮತ್ತೆ ಮಡಿಕೆ ಟ್ರೆಂಡ್ ಶುರುವಾಗಿದೆ . ಪರಿಸರದ ದೃಷ್ಟಿಯಿಂದ ಜನರು ಅವುಗಳ ಬಳಕೆಯನ್ನು ಉತ್ತೇಜಿಸುತ್ತಿದ್ದರೂ, ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಮಣ್ಣಿನ ಮಡಕೆಗಳು ಇರುವುದು ತುಂಬಾ ಮಂಗಳಕರವಾಗಿದೆ. ಮಡಿಕೆಗಳ ಬಳಕೆಯು ಉತ್ತಮ ಆರೋಗ್ಯ ಮತ್ತು ಉತ್ತಮ ಪರಿಸರವನ್ನು ನೀಡುತ್ತದೆ. ಅದೇ ಸಮಯದಲ್ಲಿ, ಮನೆಯ ಅಲಂಕಾರದಲ್ಲಿ ಮಡಿಕೆಗಳು ಅಥವಾ ವಸ್ತುಗಳ ಬಳಕೆಯು ಅದೃಷ್ಟವನ್ನು ಬೆಳಗಿಸುತ್ತದೆ. ಆದಾಗ್ಯೂ, ಇದಕ್ಕಾಗಿ ಮಣ್ಣಿನ ಮಡಕೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. 

ಮನೆ ಸಂತೋಷ ಮತ್ತು ಹಣದಿಂದ ತುಂಬಿರುತ್ತದೆ :

ಮಣ್ಣಿನ ಮೂರ್ತಿಗಳು: ವಾಸ್ತು ಶಾಸ್ತ್ರದ (Vastu Shastra) ಪ್ರಕಾರ ಮಣ್ಣಿನಿಂದ ಮಾಡಿದ ಮೂರ್ತಿಗಳನ್ನು ಮನೆಯಲ್ಲಿ ಯಾವಾಗಲೂ ಪೂಜಿಸಬೇಕು. ಹೀಗೆ ಮಾಡುವುದರಿಂದ ಮನೆ ಸಂಪತ್ತಿನಿಂದ ತುಂಬಿರುತ್ತದೆ. ಆದರೆ ಈ ವಿಗ್ರಹಗಳನ್ನು ಮನೆಯ ಈಶಾನ್ಯದಲ್ಲಿ ಇಡಬೇಕು ಎಂಬುದನ್ನು ನೆನಪಿಡಿ. 

ಇದನ್ನೂ ಓದಿ- ಬಹಳ ಚಾಲಾಕಿಯಾಗಿರುತ್ತಾರೆ ಈ ಮೂರು ರಾಶಿಯವರು, ಯಾವಾಗ ಬೇಕಾದರೂ ಇತರರಿಗೆ ಮೋಸ ಮಾಡಬಹುದು

ಮಣ್ಣಿನಿಂದ ಮಾಡಿದ ಅಲಂಕಾರಿಕ ವಸ್ತುಗಳು: ಈಶಾನ್ಯ ಮತ್ತು ನೈಋತ್ಯ ದಿಕ್ಕುಗಳು ಭೂಮಿಯ ಅಂಶಕ್ಕೆ ಸಂಬಂಧಿಸಿವೆ. ಆದುದರಿಂದ ಮನೆಯ ಈ ದಿಕ್ಕುಗಳಲ್ಲಿ ಮಣ್ಣಿನಿಂದ ಮಾಡಿದ ಅಲಂಕಾರಿಕ ವಸ್ತುಗಳನ್ನು ಇಡುವುದು ತುಂಬಾ ಮಂಗಳಕರ (Auspicious). ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ.

ಮಣ್ಣಿನ ಮಡಕೆ: ಮಣ್ಣಿನ ಮಡಕೆಯನ್ನು ಉತ್ತರ ದಿಕ್ಕಿನಲ್ಲಿ ಇಡುವುದರಿಂದ ಅದೃಷ್ಟವನ್ನು ಬದಲಾಯಿಸಬಹುದು. ಈ ದಿಕ್ಕಿಗೆ ಇಟ್ಟ ಮಣ್ಣಿನ ಮಡಕೆಯು ಮನೆಯ ಋಣಾತ್ಮಕತೆಯನ್ನು ನಿವಾರಿಸುತ್ತದೆ ಮತ್ತು ಆರ್ಥಿಕ ಸ್ಥಿತಿಯನ್ನೂ ಸುಧಾರಿಸುತ್ತದೆ. ಆದರೆ ಯಾವುದೇ ಕಾರಣಕ್ಕೂ ಈ ಮಡಕೆ ಖಾಲಿ ಇರಬಾರದು ಎಂಬುದನ್ನು ನೆನಪಿಡಿ. ಆಗಾಗ್ಗೆ ಅದರಲ್ಲಿರುವ ನೀರನ್ನು ಬದಲಾಯಿಸುತ್ತಿರಿ. 

ಇದನ್ನೂ ಓದಿ-  Name Astrology: ವೃತ್ತಿಜೀವನದ ವಿಷಯದಲ್ಲಿ ತುಂಬಾ ಅದೃಷ್ಟವಂತರು ಈ ಹುಡುಗಿಯರು

ಮಣ್ಣಿನ ದೀಪಗಳು: ಈಗ ಹೆಚ್ಚಿನ ಮನೆಗಳಲ್ಲಿ ಜನರು ಪೂಜೆಯ ಸಮಯದಲ್ಲಿ ಲೋಹದ ದೀಪಗಳನ್ನು ಬಳಸುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಮಣ್ಣಿನ ದೀಪಗಳನ್ನು ಬಳಸುವುದು ಯಾವಾಗಲೂ ಮಂಗಳಕರವಾಗಿದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More