Home> Lifestyle
Advertisement

Vastu Tips: ತೆಂಗಿನ ಕಾಯಿ ತಾಯಿ ಲಕ್ಷ್ಮಿಯ ಸ್ವರೂಪ, ಯಶಸ್ಸಿಗಾಗಿ ಈ ವಾಸ್ತು ಸಲಹೆಗಳನ್ನು ಅನುಸರಿಸಿ

Vastu Tips In Kannada: ತೆಂಗಿನ ಮರ ಇರುವ ಮನೆಯಲ್ಲಿ ಯಾವಾಗಲು ಸುಖ-ಶಾಂತಿ ನೆಲೆಸಿರುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ತೆಂಗಿನ ಮರಕ್ಕೆ ಸಂಬಂಧಿಸಿದ ಕೆಲ ನಂಬಿಕೆಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ,
 

Vastu Tips: ತೆಂಗಿನ ಕಾಯಿ ತಾಯಿ ಲಕ್ಷ್ಮಿಯ ಸ್ವರೂಪ, ಯಶಸ್ಸಿಗಾಗಿ ಈ ವಾಸ್ತು ಸಲಹೆಗಳನ್ನು ಅನುಸರಿಸಿ

Vastu Tips Related To Coconut -  ಹಿಂದೂ ಧರ್ಮ ಶಾಸ್ತ್ರಗಳಲ್ಲಿ ತೆಂಗಿನಕಾಯಿಗೆ ವಿಶೇಷ ಮಹತ್ವ ನೀಡಲಾಗಿದೆ, ಇದೇ ಕಾರಣದಿಂದ ಅದನ್ನು ವಿವಿಧ ರೀತಿಯ ಪೂಜೆಗಳಲ್ಲಿ ಬಳಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ತೆಂಗಿನ ಮರದಲ್ಲಿ ತಾಯಿ ಲಕ್ಷ್ಮಿ ನೆಲೆಸಿದ್ದಾಳೆ ಎನ್ನಲಾಗುತ್ತದೆ. ವಾಸ್ತು ಪ್ರಕಾರ ತೆಂಗಿನ ಮರ ಇರುವ ಮನೆಯಲ್ಲಿ ಸದಾ ಸುಖ ಶಾಂತಿ ನೆಲೆಸಿರುತ್ತದೆ. ವಾಸ್ತು ಶಾಸ್ತ್ರದಲ್ಲಿ ತೆಂಗಿನ ಮರಕ್ಕೆ ಸಂಬಂಧಿಸಿದ ಹಲವು ಸಲಹೆಗಳನ್ನು ನೀಡಲಾಗಿದೆ. ಹಾಗಾದರೆ ಬನ್ನಿ ಮನೆಯಲ್ಲಿ ತೆಂಗಿನ ಮರವನ್ನು ನೆಡುವುದರಿಂದ ಆಗುವ ಪ್ರಯೋಜನಗಳೇನು ತಿಳಿದುಕೊಳ್ಳೋಣ.

ಇದನ್ನೂ ಓದಿ-Shani Dev Grace : ನಿಮ್ಮಲ್ಲಿ ಈ ಗುಣಗಳಿದ್ದರೆ ನಿಮಗಿರುತ್ತೆ ಶನಿದೇವನ ವಿಶೇಷ ಕೃಪೆ..!

ವಾಸ್ತು ಪ್ರಕಾರ ತೆಂಗಿನ ಮರವನ್ನು ನೆಡುವುದರಿಂದ ಆಗುವ ಪ್ರಯೋಜನಗಳು
ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಕೆಲಸ ಅಥವಾ ವ್ಯವಹಾರದಲ್ಲಿ ಆಗಾಗ್ಗೆ ಸಮಸ್ಯೆಗಳಿದ್ದರೆ, ನೀವು ಮನೆಯ ಅಂಗಳದಲ್ಲಿ ತೆಂಗಿನ ಮರವನ್ನು ನೆಡಬೇಕು. ತೆಂಗಿನ ಮರವನ್ನು ನೆಡುವುದರಿಂದ ಮನೆಯ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಹಾಗೂ ಮನೆಯ ಸದಸ್ಯರಿಗೆ ಸಾಲಬಾಧೆಯಿಂದ ಮುಕ್ತಿ ಸಿಗುತ್ತದೆ. ಸುಖ, ಸಮೃದ್ಧಿಗಾಗಿ ಮನೆಯಲ್ಲಿ ತೆಂಗಿನ ಮರವನ್ನು ನೆಡಬೇಕು. ತೆಂಗಿನಕಾಯಿಯನ್ನು ಅನೇಕ ಧಾರ್ಮಿಕ ಮತ್ತು ಶುಭ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಮನೆಯ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ತೆಂಗಿನ ಮರವನ್ನು ನೆಡುವುದು ಶುಭಕರ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ-Surya Grahan : ಈ ದಿನ ವರ್ಷದ ಕೊನೆಯ ಸೂರ್ಯಗ್ರಹಣ : ಇದು ದೀಪಾವಳಿ-ಗೋಪೂಜೆ ಮೇಲೆ ಪರಿಣಾಮವೆ?

ತೆಂಗಿನಕಾಯಿಗೆ ಸಂಬಂಧಿಸಿದ ನಂಬಿಕೆ
ಜೀವನದಲ್ಲಿ ಪದೇ ಪದೇ ಸಮಸ್ಯೆಗಳು ಎದುರಾಗುತ್ತಿದ್ದರೆ, ತೆಂಗಿನಕಾಯಿಗೆ ಸಂಬಂಧಿಸಿದ ಕೆಲ ವಿಶೇಷ ಉಪಾಯಗಳನ್ನು ಅನುಸರಿಸುವುದು ಸಾಕಷ್ಟು ಪ್ರಯೋಜನವನ್ನು ನೀಡಲಿದೆ. ನೀರು ಇರುವ ತೆಂಗಿನಕಾಯಿಯನ್ನು ಅಡಿಯಿಂದ ಮುಡಿಯವರೆಗೆ 21 ಬಾರಿ ಇಳಿಸಿ, ನಂತರ ಅದನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಸುಟ್ಟುಹಾಕಿ. ಪ್ರತಿ ಮಂಗಳವಾರ ಅಥವಾ ಶನಿವಾರದಂದು ಈ ಕೆಲಸ ಮಾಡಿದರೆ, ಕೆಲ ದಿನಗಳ ಬಳಿಕ ನಿಮ್ಮ ಜೀವನದ ಸಮಸ್ಯೆಗಳು ಶಾಶ್ವತವಾಗಿ ನಿವಾರಣೆಯಾಗುತ್ತವೆ. ತೆಂಗಿನಕಾಯಿ ಮತ್ತು ಅದರ ನೀರು ಆರೋಗ್ಯಕ್ಕೂ ಕೂಡ ತುಂಬಾ ಪ್ರಯೋಜನಕಾರಿಯಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More