Home> Lifestyle
Advertisement

Valentine's Day 2023: ಪ್ರೀತಿಯ ವಿಷಯದಲ್ಲಿ ತುಂಬಾ ಲಾಯಲ್ ಆಗಿರುತ್ತಾರೆ ಈ ಮೂರು ರಾಶಿಯವರು!

Valentine's Day 2023 : ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಇಂದು ನಾವು ನಿಮ್ಮೊಂದಿಗೆ ಮೂರು ರಾಶಿಗಳ ಕುರಿತು ಚರ್ಚೆಯನ್ನು ನಡೆಸುತ್ತಿದ್ದು, ಈ ರಾಶಿಗಳ ಜನರು ಪ್ರೀತಿಯ ವಿಷಯದಲ್ಲಿ ತುಂಬಾ ಲಾಯಲ್ ಆಗಿರುತ್ತಾರೆ.
 

Valentine's Day 2023: ಪ್ರೀತಿಯ ವಿಷಯದಲ್ಲಿ ತುಂಬಾ ಲಾಯಲ್ ಆಗಿರುತ್ತಾರೆ ಈ ಮೂರು ರಾಶಿಯವರು!

Valentine's Day 2023: ಜ್ಯೋತಿಷ್ಯ ಶಾಸ್ತ್ರದಲ್ಲಿ ಒಟ್ಟು 12 ರಾಶಿಗಳು ಮತ್ತು 27 ನಕ್ಷತ್ರಗಳ ಬಗ್ಗೆ ವಿವರಣೆ ನೀಡಲಾಗುತ್ತದೆ. ಇದರೊಂದಿಗೆ, ಈ ರಾಶಿಗಳಿಗೆ ಸಂಬಂಧಿಸಿದ ಜನರು ಒಂದು ಅಥವಾ ಇನ್ನೊಂದು ಗ್ರಹದ ಪ್ರಭಾವವನ್ನು ಹೊಂದಿರುತ್ತಾರೆ. ಆದ್ದರಿಂದಲೇ ಅವರ ಸ್ವಭಾವ, ವ್ಯಕ್ತಿತ್ವ ಭಿನ್ನ ಭಿನ್ನವಾಗಿರುತ್ತದೆ. ಪ್ರೀತಿಯಲ್ಲಿ ನಿಷ್ಠರಾಗಿರುವ 3 ರಾಶಿಗಳ ಜನರ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಅಲ್ಲದೆ, ಈ ಜನರು ಪ್ರೀತಿಯನ್ನು ಪಡೆಯಲು ಯಾವುದೇ ಹಂತಕ್ಕೆ ಹೋಗುತ್ತಾರೆ. ಈ ಜನರು ಪ್ರೀತಿಯ ವಿಷಯದಲ್ಲಿ ತಮ್ಮ ಬದ್ಧತೆಯಿಂದ ಹಿಂದೆ ಸರಿಯುವುದಿಲ್ಲ. ತಾವು ಪ್ರೀತಿಸುವವರಿಗೆ ತಮ್ಮನ್ನು ತಾವು ಸಂಪೂರ್ಣವಾಗಿ ಒಪ್ಪಿಸಿಕೊಳ್ಳುತ್ತಾರೆ.

ವೃಶ್ಚಿಕ ರಾಶಿ

ಈ ರಾಶಿಯ ಜನರು ಪ್ರೀತಿಯ ವಿಷಯದಲ್ಲಿ ತುಂಬಾ ನಿಷ್ಠರಾಗಿರುತ್ತಾರೆ. ಈ ಜನರು ಪ್ರೀತಿಯನ್ನು ಪಡೆಯಲು ಯಾವುದೇ ಹಂತಕ್ಕೆ ಹೋಗಬಹುದು. ಇದರೊಂದಿಗೆ, ಈ ಸಹ ನಿರ್ಭೀತರು ಮತ್ತು ಧೈರ್ಯಶಾಲಿಗಳಾಗಿರುತ್ತಾರೆ. ಈ ಜನರು ತಮ್ಮ ಪ್ರೀತಿಯ ವಿಷಯದಲ್ಲಿ ತುಂಬಾ ಪ್ರೋಟೆಕ್ಟಿವ್ ಆಗಿರುತ್ತಾರೆ. ಅಲ್ಲದೆ, ಈ ಜನರು ಪ್ರೀತಿಯನ್ನು ಪಡೆಯಲು ತಮ್ಮ ಕುಟುಂಬದ ವಿರುದ್ಧ ಹೋಗಲು ಕೂಡ ಹಿಂಜರಿಯುವುದಿಲ್ಲ. ಈ ಜನರು ತಮ್ಮ ಪ್ರೇಮ ಜೀವನವನ್ನು ಸಂತೋಷವಾಗಿಡಲು ಯಾವಾಗಲೂ ಹೊಸದನ್ನು ಪ್ರಯತ್ನಿಸುತ್ತಲೇ ಇರುತ್ತಾರೆ. ವೃಶ್ಚಿಕ ರಾಶಿಗೆ ಮಂಗಳ ಅಧಿಪತಿ. ಹೀಗಾಗಿ ಮಂಗಳ ಅವರಿಗೆ ಈ ಗುಣಗಳನ್ನು ನೀಡುತ್ತದೆ.

ಇದನ್ನೂ ಓದಿ-Lucky Life Partner: ಇಂತಹ ಹುಡುಗಿಯರು ವಿವಾಹದ ಬಳಿಕ ಮನೆಯನ್ನೇ ಸ್ವರ್ಗವನ್ನಾಗಿಸುತ್ತಾರೆ

ಈ ರಾಶಿಯ ಜನರು ಪ್ರೀತಿಯ ವಿಷಯದಲ್ಲಿ ನಿಷ್ಠಾವಂತರಾಗಿರುತ್ತಾರೆ. ಅಲ್ಲದೆ ಈ ಜನರು ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ. ಈ ಜನರು ತಮ್ಮ ಪ್ರತಿಯೊಂದು ಕೆಲಸವನ್ನು ಬಾಳ ಸಂಗಾತಿಯ ಮಾತನ್ನೇ ಕೇಳಿ ಮೀದುತ್ತಾರೆ. ಜೊತೆಗೆ ತಮ್ಮ ಸಂಗಾತಿಯನ್ನು ಮಗುವಿನಂತೆ ನೋಡಿಕೊಳ್ಳುತ್ತಾರೆ. ಈ ಜನರು ಪ್ರಯಾಣಿಸಲು ಇಷ್ಟಪಡುತ್ತಾರೆ. ಇವರ ಪಾಲಿಗೆ ಪ್ರೀತಿ ಎಲ್ಲಕ್ಕಿಂತ ದೊಡ್ಡದು. ಇವರು ತಮ್ಮ ಪ್ರೀತಿಯ ಸಂಬಂಧವನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುತ್ತಾರೆ. ವೃಷಭ ರಾಶಿಗೆ ಶುಕ್ರ ಅಧಿಪತಿ, ಶುಕ್ರ ಅವರಿಗೆ ಈ ಗುಣವನ್ನು ನೀಡುತ್ತದೆ.

ಇದನ್ನೂ ಓದಿ-Solar Eclipse 2023: ಈ ರಾಶಿಗಳ ಜನರ ಮೇಲೆ ವರ್ಷದ ಮೊದಲ ಸೂರ್ಯ ಗ್ರಹಣದ ವಿಶೇಷ ಪ್ರಭಾವ, ಉನ್ನತಿ-ಧನಪ್ರಾಪ್ತಿಯ ಯೋಗ!

ಮಿಥುನ ರಾಶಿ
ಮಿಥುನ ರಾಶಿಯ ಜನರು ಪ್ರೀತಿಯ ಬಗ್ಗೆ ತುಂಬಾ ಸೂಕ್ಷ್ಮವಾಗಿರುತ್ತಾರೆ. ಇವರಿಗೆ ತಮ್ಮ  ಪ್ರೀತಿ ಸಂಬಂಧ ಎಲ್ಲಕ್ಕಿಂತ ಹೆಚ್ಚು. ಇವರನ್ನು ತಮ್ಮ ಸಂಗಾತಿಗೆ ನಿಷ್ಠರು ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ, ಈ ಜನರು ಪ್ರೀತಿಯ ವಿಷಯದಲ್ಲಿ ತುಂಬಾ ನಿಷ್ಠರಾಗಿರುತ್ತಾರೆ. ಈ ಜನರು ತಾವು ಪ್ರೀತಿಸುವವರ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ. ಇದಲ್ಲದೆ ಇವರು ತಮ್ಮ ಸಂಗಾತಿಯ ಭಾವನೆಗಳನ್ನು ಸಂಪೂರ್ಣವಾಗಿ ಗೌರವಿಸುತ್ತಾರೆ. ಈ ಜನರು ಪ್ರೀತಿಯನ್ನು ಪಡೆಯಲು ತಮ್ಮ ಕುಟುಂಬ ಸದಸ್ಯರೊಂದಿಗೆ ಹೋರಾಡಲು ಕೂಡ ಸಿದ್ಧರಾಗುತ್ತಾರೆ. ಈ ಜನರು ತುಂಬಾ ಸೃಜನಶೀಲ ಮನಸ್ಸಿನವರು. ಈ ರಾಶಿಗೆ ಬುಧ ಅಧಿಪತಿ. ಬುಧ ಅವರಿಗೆ ಈ ಗುಣಗಳನ್ನು ನೀಡುತ್ತದೆ.

ಇದನ್ನೂ ಓದಿ-Valentine's Day 2023: ಸಂಗಾತಿ ಜೊತೆಗಿನ ಸಂಬಂಧ ಸುಮಧುರತೆಗೆ ಇಲ್ಲಿವೆ 8 ಉಪಾಯಗಳು, ಶೀಘ್ರವೇ ಪ್ರೇಮ ವಿವಾಹ ಯೋಗ ಪ್ರಾಪ್ತಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More