December Planatery Transit: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸೋಮವಾರ ಡಿಸೆಂಬರ್ 5, 2022 ರಂದು ಶುಕ್ರ ತನ್ನ ರಾಶಿಯನ್ನು ಪರಿವರ್ತಿಸಲಿದೆ. ಸೋಮ ಪ್ರದೋಶದ ದಿನ ಧನ-ವಿಲಾಸಿತನ ನೀಡುವ ಈ ಗ್ರಹದ ರಾಶಿ ಪರಿವರ್ತನೆ ಎಲ್ಲಾ 12 ರಾಶಿಗಳ ಜನರ ಜೀವನದ ಮೇಲೆ ಶುಭ-ಅಶುಭ ಫಲಿತಾಂಶಗಳನ್ನು ನೀಡಲಿದೆ. ಶುಕ್ರ ವೃಶ್ಚಿಕ ರಾಶಿಯಿಂದ ಹೊರಟು ಧನು ರಾಶಿಗೆ ಪ್ರವೇಶಿಸಲಿದೆ. ಬಳಿಕ ಡಿಸೆಂಬರ್ 29, 2022ರವರೆಗೆ ಶುಕ್ರ ಅದೇ ರಾಶಿಯಲ್ಲಿ ಮುಂದುವರೆಯಲಿದೆ. ಈ ಅವಧಿಯಲ್ಲಿ 5 ರಾಶಿಗಳ ಜಾತಕದವರಿಗೆ ಶುಕ್ರ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಲಿದ್ದಾನೆ. ಆ ರಾಶಿಗಳು ಯಾವುದು ತಿಳಿದುಕೊಳ್ಳೋಣ ಬನ್ನಿ,
ಈ ರಾಶಿಗಳ ಮೇಲೆ ಶುಕ್ರಗೊಚರದ ನಕಾರಾತ್ಮಕ ಪರಿಣಾಮಗಳು
ಕರ್ಕ ರಾಶಿ: ಶುಕ್ರನ ಈ ರಾಶಿ ಪರಿವರ್ತನೆ ನಿಮ್ಮ ರಹಸ್ಯ ಶತ್ರುಗಳನ್ನು ಸಕ್ರೀಯಗೊಳಿಸಲಿದೆ. ಈ ಅವಧಿಯಲ್ಲಿ ವಿರೋಧಿಗಳು ನಿಮಗೆ ಹಾನಿ ತರಲು ಯತ್ನಿಸುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಜಾಗರೂಕರಾಗಿರಿ. ಅಲ್ಲದೆ, ನಿಮ್ಮ ಕೆಲಸವನ್ನು ಚೆನ್ನಾಗಿ ಮಾಡಿ, ಇಲ್ಲದಿದ್ದರೆ ಸಮಸ್ಯೆಗಳು ಉದ್ಭವಿಸಬಹುದು. ಬಜೆಟ್ ನೋಡಿದ ನಂತರವೇ ಖರ್ಚು ಮಾಡಿ.
ತುಲಾ ರಾಶಿ: ಶುಕ್ರನ ಈ ರಾಶಿ ಪರಿವರ್ತನೆ ತುಲಾ ರಾಶಿಯವರಿಗೆ ಕಷ್ಟವನ್ನು ಹೆಚ್ಚಿಸಲಿದೆ. ಹೂಡಿಕೆ ಮಾಡುವ ಮುನ್ನ ನೂರು ಬಾರಿ ಯೋಚಿಸಿ. ಅಪಾಯಕಾರಿ ಹೂಡಿಕೆಗಳನ್ನು ಮಾಡಬೇಡಿ. ಕಠಿಣ ಪರಿಶ್ರಮದಿಂದ ಮಾತ್ರ ನೀವು ಯಶಸ್ಸನ್ನು ಪಡೆಯುವಿರಿ. ಅದೃಷ್ಟ ನಿಮ್ಮೊಂದಿಗೆ ಇರುವುದಿಲ್ಲ. ಎಲ್ಲವನ್ನು ಕಣ್ಮುಚ್ಚಿ ನಂಬಬೇಡಿ.
ಧನು ರಾಶಿ: ಶುಕ್ರನ ಈ ಸಂಚಾರ ಧನು ರಾಶಿಯಲ್ಲಿ ನಡೆಯುತ್ತಿದೆ. ಹೀಗಾಗಿ ಧನು ರಾಶಿಯವರಿಗೆ ಇದು ಒಳ್ಳೆಯದು ಎಂದು ಪರಿಗಣಿಸಲಾಗುವುದಿಲ್ಲ. ಕೆಲಸ ಬದಲಾಯಿಸಲು ಇದು ಸರಿಯಾದ ಸಮಯವಲ್ಲ. ತಾಳ್ಮೆಯಿಂದಿರಿ. ನಿಮ್ಮ ಮಾತಿನ ಮೇಲೂ ಹಿಡಿತವಿರಲಿ. ಆರ್ಥಿಕ ಪರಿಸ್ಥಿತಿ ಹದಗೆಡಬಹುದು.
ಇದನ್ನೂ ಓದಿ-Gemstone: ಈ ರತ್ನದ ಪವಾಡದಿಂದ ನಿಮ್ಮ ಜೀವನವೇ ಬದಲಾಗುತ್ತದೆ
ಮಕರ ರಾಶಿ: ಶುಕ್ರನ ಈ ಧನು ಗೋಚರ ಮಕರ ರಾಶಿಯವರು ಎಚ್ಚರಿಕೆಯ ಕರೆಗಂಟೆಯಾಗಿದೆ. ನಿಮ್ಮ ಯೋಜನೆಗಳನ್ನು ಯಾರಿಗೂ ಹೇಳದೆ ಸದ್ದಿಲ್ಲದೆ ನಿಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಉತ್ತಮ. ಚಾಲನೆ ಮಾಡುವಾಗ ಹೆಚ್ಚಿನ ಜಾಗರೂಕತೆ ವಹಿಸಿ. ಗಾಯಕ್ಕೆ ಗುರಿಯಾಗುವ ಸಂಭವವಿದೆ. ಹಣಕಾಸಿನ ವಿಷಯಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸಿ.
ಇದನ್ನೂ ಓದಿ-fruits with salt: ಈ ಹಣ್ಣುಗಳಿಗೆ ಉಪ್ಪು ಬೆರೆಸಿ ತಿಂದರೆ ಪರೋಕ್ಷವಾಗಿ ವಿಷ ಸೇವಿಸಿದಂತೆ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.