Home> Lifestyle
Advertisement

ಮನಿ ಪ್ಲಾಂಟ್ ನೆಡುವಾಗ ಈ ವಸ್ತುವನ್ನು ಜೊತೆಯಲ್ಲಿಟ್ಟರೆ ಹಣಕಾಸಿನ ಸಮಸ್ಯೆ ಕ್ಷಣದಲ್ಲಿ ಪರಿಹಾರ

ವಾಸ್ತುವಿನಲ್ಲಿ ಮನಿ ಪ್ಲಾಂಟ್ ಬಗ್ಗೆ ಅನೇಕ ಪರಿಹಾರಗಳನ್ನು ಹೇಳಲಾಗಿದೆ. ಮನಿ ಪ್ಲಾಂಟ್ ಅನ್ನು ಮನೆಯಲ್ಲಿ ನೆಡುವುದರಿಂದ ಆರ್ಥಿಕ  ಸಮಸ್ಯೆಗಳು ದೂರವಾಗುತ್ತವೆ.

ಮನಿ  ಪ್ಲಾಂಟ್ ನೆಡುವಾಗ ಈ ವಸ್ತುವನ್ನು ಜೊತೆಯಲ್ಲಿಟ್ಟರೆ ಹಣಕಾಸಿನ ಸಮಸ್ಯೆ ಕ್ಷಣದಲ್ಲಿ ಪರಿಹಾರ

ಬೆಂಗಳೂರು : ಮನಿ ಪ್ಲಾಂಟ್ ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಕಂಡುಬರುವ ಸಸ್ಯವಾಗಿದೆ. ಅದನ್ನು ಮನೆಯ ಒಳಗೆ ಅಥವಾ ಬಾಲ್ಕನಿಯಲ್ಲಿ ಹೆಚ್ಚಾಗಿ ಇರಿಸಲಾಗುತ್ತದೆ. ಕೆಲವರು ಈ ಸಸ್ಯವನ್ನು ಕಚೇರಿಯಲ್ಲೂ ಇಡುತ್ತಾರೆ. ಮನಿ ಪ್ಲಾಂಟ್‌ ಬೆಳೆಸುವುದು ಅಷ್ಟು ಕಷ್ಟವೇನಲ್ಲ. ಈ ಸಸ್ಯಕ್ಕೆ ಹೆಚ್ಚಿನ ಕಾಳಜಿಯ ಅಗತ್ಯವಿರುವುದಿಲ್ಲ.  ಬೆಳೆಸುವುದು ಕೂಡಾ ಬಲು ಸುಲಭ. ವಾಸ್ತು ಪ್ರಕಾರ ಮನಿ ಪ್ಲಾಂಟ್ ಇರುವ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಯಾಗುತ್ತದೆ. 

ವಾಸ್ತುವಿನಲ್ಲಿ ಮನಿ ಪ್ಲಾಂಟ್ ಬಗ್ಗೆ ಅನೇಕ ಪರಿಹಾರಗಳನ್ನು ಹೇಳಲಾಗಿದೆ. ಮನಿ ಪ್ಲಾಂಟ್ ಅನ್ನು ಮನೆಯಲ್ಲಿ ನೆಡುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಮನಿ ಪ್ಲಾಂಟ್ ಶುಕ್ರ ಗ್ರಹಕ್ಕೆ ಸಂಬಂಧಿಸಿದ್ದಾಗಿದೆ. ಮನಿ ಪ್ಲಾಂಟ್ ಅನ್ನು ಸರಿಯಾದ ದಿಕ್ಕಿನಲ್ಲಿ ಇರಿಸುವ ಮನೆಯಲ್ಲಿ, ಶುಕ್ರ ಗ್ರಹದ ಕೆಟ್ಟ ಪರಿಣಾಮ ಬೀಳುವುದಿಲ್ಲ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ. 

ಇದನ್ನೂ ಓದಿ : ಈ 5 ವಸ್ತುಗಳನ್ನು ತಪ್ಪಿಯೂ ಉಡುಗೊರೆಯಾಗಿ ನೀಡಬೇಡಿ

ಕೆಂಪು ಬಣ್ಣದ ದಾರ ಕಟ್ಟಿದರೆ ಶುಭ : 
ವಾಸ್ತು ಪ್ರಕಾರ, ಮನಿ ಪ್ಲಾಂಟ್‌ಗೆ ಕೆಂಪು ಬಣ್ಣದ ದಾರವನ್ನು ಕಟ್ಟುವುದು ಶುಭ. ಹಣದ ಸಮಸ್ಯೆಯನ್ನು ತೊಡೆದುಹಾಕಲು ಮತ್ತು ಪ್ರಗತಿಯನ್ನು ಸಾಧಿಸಲು ಬಯಸುವುದಾದರೆ ಶುಕ್ರವಾರದಂದು ಮನಿ ಪ್ಲಾಂಟ್‌ನಲ್ಲಿ ಕೆಂಪು ದಾರವನ್ನು ಕಟ್ಟಬೇಕು ಎಂದು ಹೇಳಲಾಗುತ್ತದೆ. ಹೀಗೆ ಮಾಡಿದರೆ ಶುಭ ಫಲ ಸಿಗುತ್ತದೆಯಂತೆ. 

ಮನಿ ಪ್ಲಾಂಟ್‌ನಲ್ಲಿ ಕೆಂಪು ದಾರವನ್ನು ಕಟ್ಟುವಾಗ ಕೆಲವು ನಿಯಮಗಳನ್ನು ಪಾಲಿಸುವುದು ಅವಶ್ಯಕ. ಶುಕ್ರವಾರದಂದು ಬೆಳಿಗ್ಗೆ ಸ್ನಾನ ಮಾಡಿದ ನಂತರ ಲಕ್ಷ್ಮೀ ದೇವಿಯನ್ನು ಪೂಜಿಸಿ ಮತ್ತು ಧೂಪ ದೀಪವನ್ನು ಬೆಳಗಿಸಿ. ಮನಿ ಪ್ಲಾಂಟ್‌ನಲ್ಲಿ ಕಟ್ಟಲು ಹೊರಟಿರುವ ದಾರವನ್ನು ಲಕ್ಷ್ಮೀ ದೇವಿಯ ಪಾದಗಳಿಗೆ ಅರ್ಪಿಸಬೇಕು. ನಂತರ ಆರತಿ ಬೆಳಗಿ ಕೆಂಪು ದಾರದ ಮೇಲೆ ಕುಂಕುಮವನ್ನು ಹಚ್ಚಿ. ಈಗ ಈ ದಾರವನ್ನು ಮನಿ ಪ್ಲಾಂಟ್‌ನ ಬೇರಿನ ಸುತ್ತಲೂ ಕಟ್ಟಿಕೊಳ್ಳಿ. ಈ ಪರಿಹಾರವನ್ನು ಮಾಡಿದ ಕೆಲವು ದಿನಗಳ ನಂತರ, ಅದರ ಪ್ರಯೋಜನ ತಿಳಿಯುತ್ತದೆ. 

ಇದನ್ನೂ ಓದಿ : ಈ ರಾಶಿಯ ಸಂಗಾತಿ ಸಿಕ್ಕರೆ ನಿಮ್ಮ ಅದೃಷ್ಟದ ಬಾಗಿಲು ತೆರೆದಂತೆ

 

(ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ  ZEE NEWS ಇದನ್ನು ಖಚಿತ ಪಡಿಸುವುದಿಲ್ಲ. )

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More