Home> Lifestyle
Advertisement

Vastu Tips For Money: ಇದೇ ಆ ಸಸ್ಯ, ಹಣವನ್ನು ಆಯಸ್ಕಾಂತದಂತೆ ಆಕರ್ಷಿಸುತ್ತದೆ! ಇಂದೇ ಮನೆಗೆ ತನ್ನಿ

Vastu Tips: ಪರಿಸರದ ದೃಷ್ಟಿಯಿಂದ ಗಿಡ ಮರಗಳನ್ನು ನೆಡುವುದು ಸಾಕಷ್ಟು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ, ವಾಸ್ತು ಶಾಸ್ತ್ರದಲ್ಲಿ ಅವುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ವಾಸ್ತು ಶಾಸ್ತ್ರದಲ್ಲಿ ಕೆಲ ಸಸ್ಯಗಳನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅವುಗಳನ್ನು ಮನೆಯಲ್ಲಿ ನೆಡುವುದರಿಂದ, ಪ್ರಗತಿಯು ಹೊಸ ಬಾಗಿಲುಗಳು ತೆರೆಯುತ್ತವೆ.
 

Vastu Tips For Money: ಇದೇ ಆ ಸಸ್ಯ, ಹಣವನ್ನು ಆಯಸ್ಕಾಂತದಂತೆ ಆಕರ್ಷಿಸುತ್ತದೆ! ಇಂದೇ ಮನೆಗೆ ತನ್ನಿ

Magical Plant That Attracts Money: ವಾಸ್ತು ಶಾಸ್ತ್ರದಲ್ಲಿ ಕೆಲವು ಸಸ್ಯಗಳನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಗಿಡಗಳನ್ನು ಮನೆಯಲ್ಲಿ ನೆಡುವುದರಿಂದ ಶ್ರೇಯಸ್ಸು ಲಭಿಸುತ್ತದೆ ಮತ್ತು ಸಂತೋಷ, ಸಮೃದ್ಧಿ ಮತ್ತು ಪ್ರಗತಿಯ ಬಾಗಿಲು ತೆರೆಯುತ್ತವೇ ಎನ್ನಲಾಗುತ್ತದೆ. ಅಂತಹುದೇ ಸಸ್ಯಗಳಲ್ಲಿ ಕ್ರಾಸ್ಸುಲಾ ಸಸ್ಯ ಕೂಡ ಒಂದು. ಇದನ್ನು ಜೇಡ್ ಪ್ಲಾಂಟ್ ಎಂದೂ ಕರೆಯುತ್ತಾರೆ. ಜನರು ಇದನ್ನು ಹಣವನ್ನು ಆಕರ್ಷಿಸುವ ಆಯಸ್ಕಾಂತ ಎಂದೂ ಕರೆಯುತ್ತಾರೆ, ಏಕೆಂದರೆ ಇದನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಹಣಕಾಸಿನ ಮುಗ್ಗಟ್ಟು ಅಂತ್ಯವಾಗಿ ಮನೆ ಸುಖ ಸಮೃದ್ಧಿಯಿಂದ ತುಂಬಿ ತುಳುಕುತ್ತದೆ ಎನ್ನಲಾಗುತ್ತದೆ.  ಈ ಸಸ್ಯವು ನೋಡಲು ತುಂಬಾ ಚಿಕ್ಕದಾಗಿದ್ದರೂ, ಅದರ ಪರಿಣಾಮವು ತುಂಬಾ ಅಗಾಧವಾಗಿದೆ. ಇದನ್ನು ಸುಲಭವಾಗಿ ಮನೆ, ಕಚೇರಿ, ಅಂಗಡಿಗಳಲ್ಲಿ ಎಲ್ಲಿ ಬೇಕಾದರೂ ನೆಡಬಹುದು ಅಥವಾ ಇರಿಸಬಹುದು.

ಆದಾಯ

ಹಣವನ್ನು ಆಕರ್ಷಿಸುವ ವಿಶೇಷ ಗುಣದಿಂದಾಗಿ ಕ್ರಾಸ್ಸುಲಾ ಸಸ್ಯವನ್ನು  ಮನಿ ಪ್ಲಾಂಟ್, ಗುಡ್ ಲಕ್ ಪ್ಲಾಂಟ್ ಮತ್ತು ಮೋಹಿನಿ ಪ್ಲಾಂಟ್ ಎಂದೂ ಕರೆಯುತ್ತಾರೆ. ಕ್ರಾಸ್ಸುಲಾ ಗಿಡವನ್ನು ಯಾವ ಸ್ಥಳದಲ್ಲಿ ಇಡುವುದರಿಂದ ಆದಾಯ ಹೆಚ್ಚುತ್ತದೆ ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ.

ಆರ್ಥಿಕ ಸ್ಥಿತಿ
ಮನೆಯ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು, ಪ್ರವೇಶದ್ವಾರದ ಬಲಭಾಗದಲ್ಲಿ ಕ್ರಾಸ್ಸುಲಾ ಸಸ್ಯವನ್ನು ಇಡುವುದು ತುಂಬಾ ಮಂಗಳಕರವಾಗಿದೆ. ಇದು ಸಾಧ್ಯವಾಗದಿದ್ದರೆ, ಅದನ್ನು ಮನೆಯ ಮುಖ್ಯ ಗೇಟ್‌ನಲ್ಲಿಯೂ ಇಡಬಹುದು. ಇದನ್ನು ಮಾಡುವುದರಿಂದ ಪ್ರಗತಿಗೆ ದಾರಿಗಳು ತೆರೆದುಕೊಳ್ಳುತ್ತವೆ.

ಸಕಾರಾತ್ಮಕ ಶಕ್ತಿ
ಕೆಲಸದ ಸ್ಥಳದಲ್ಲಿ ಕ್ರಾಸ್ಸುಲಾ ಸಸ್ಯವನ್ನು ಇರಿಸುವುದು ಕೂಡ ತುಂಬಾ ಮಂಗಳಕರವಾಗಿದೆ. ಇದನ್ನು ಕೆಲಸದ ಸ್ಥಳದ ನೈಋತ್ಯ ದಿಕ್ಕಿನಲ್ಲಿ ಇರಿಸುವುದರಿಂದ ಇದು ಸಾಕಷ್ಟು ಧನಾತ್ಮಕತೆಯನ್ನು ತರುತ್ತದೆ. ವ್ಯಕ್ತಿಯು ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಮತ್ತು ಅವನು ತ್ವರಿತ ಪ್ರಮೋಷನ್ ಪಡೆಯುತ್ತಾನೆ.

ಇದನ್ನೂ ಓದಿ-ತೂಕ ಹೆಚ್ಚಳ, ಮಧುಮೇಹದಂತಹ ಹಲವು ಲೈಫ್ ಸ್ಟೈಲ್ ಕಾಯಿಲೆಗಳಿಗೆ ಒಂದು ವರದಾನ ಈ ಎಲೆ!

ದಿಕ್ಕು
ಕ್ರಾಸ್ಸುಲಾ ಸಸ್ಯವನ್ನು ಮನೆಯೊಳಗೆ ಇಡಬಹುದು. ಆದರೆ ಇದಕ್ಕಾಗಿ ಅದನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಕ್ರಾಸ್ಸುಲಾ ಸಸ್ಯವನ್ನು ಬಾಲ್ಕನಿಯಲ್ಲಿಯೂ ಇಡಬಹುದು. ಇದಕ್ಕಾಗಿ, ದಿಕ್ಕು ಉತ್ತರ ಅಥವಾ ಪೂರ್ವ ಮಾತ್ರ ಇರಬೇಕು ಎಂಬುದನ್ನು ನೆನಪಿನಳ್ಳಿಡಿ. ಮನೆಯಲ್ಲಿ ಕ್ರಾಸ್ಸುಲಾ ಸಸ್ಯವನ್ನು ಎಂದಿಗೂ ದಕ್ಷಿಣ ದಿಕ್ಕಿನಲ್ಲಿ ಇಡಬೇಡಿ.

ಇದನ್ನೂ ಓದಿ-Diabetes Symptoms: ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ ತಪ್ಪಿದರೆ ಈ ಲಕ್ಷಣಗಳು ಕಾಣಿಸುತ್ತವೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More