Home> Lifestyle
Advertisement

ಪ್ರತಿಯೊಬ್ಬರನ್ನೂ ತನ್ನತ್ತ ಆಕರ್ಷಿಸಿ ಬಿಡುತ್ತಾರೆ ಈ ಮೂರು ರಾಶಿಯವರು ..!

ಕೆಲವರಿಗೆ ಎಲ್ಲರನ್ನೂ ನಗಿಸುವ ಸಾಮರ್ಥ್ಯ ಇರುತ್ತದೆ. ಅವರ ಮಾತು ಮತ್ತು ಶೈಲಿ  ಎಲ್ಲರನ್ನೂ ತಮ್ಮತ್ತ ಆಕರ್ಷಿಸುವಂತೆ ಮಾಡುತ್ತದೆ.  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಿಶೇಷತೆಯು ಕೇವಲ 3 ರಾಶಿಯವರಲ್ಲಿ  ಮಾತ್ರ ಕಂಡುಬರುತ್ತದೆ. 

ಪ್ರತಿಯೊಬ್ಬರನ್ನೂ ತನ್ನತ್ತ ಆಕರ್ಷಿಸಿ ಬಿಡುತ್ತಾರೆ ಈ ಮೂರು ರಾಶಿಯವರು ..!

ಬೆಂಗಳೂರು : ಕೆಲವರಿಗೆ ಅದ್ಭುತವಾದ ಸೌಂದರ್ಯ ಇರುತ್ತದೆ. ಜನರು ಇದ್ದಕ್ಕಿದ್ದಂತೆ ಅವರ ಕಡೆಗೆ ಆಕರ್ಷಿಸಲ್ಪಡುತ್ತಾರೆ (Nature by zodiac). ಇದರ ಹಿಂದೆ ಅವರ ಸ್ವಭಾವ-ನಡತೆ, ಮಾತನಾಡುವ ಶೈಲಿ, ಬದುಕುವ ರೀತಿ ಹೀಗೆ ಬೇರೆ ಬೇರೆ ಕಾರಣಗಳು ಕೂಡಾ ಸೇರಿರುತ್ತವೆ. . ಜ್ಯೋತಿಷ್ಯಶಾಸ್ತ್ರದ ಪ್ರಕಾರ (Astrology), 3 ರಾಶಿಯ ಜನರು, ತುಂಬಾ ಸಂತೋಷದಿಂದ ಮತ್ತು ಹರ್ಷಚಿತ್ತದಿಂದ ಇರುತ್ತಾರೆ. ಜನರು ಇವರಿಂದ ಬೇಗನೆ ಪ್ರಭಾವಿತರಾಗುತ್ತಾರೆ ಮತ್ತು ಅವರ ಅಭಿಮಾನಿಗಳಾಗಿ ಬಿಡುತ್ತಾರೆ.  

ಮೇಷ ರಾಶಿ : ಮೇಷ ರಾಶಿಯ (Aries) ಜನರು ತುಂಬಾ ತಮಾಷೆಯ ಸ್ವಭಾವದವರು. ಯಾವಾಗಲೂ ಸಂತೋಷವಾಗಿರುತ್ತಾರೆ. ಅವರು ಜೀವನವನ್ನು ಪೂರ್ಣವಾಗಿ ಆನಂದಿಸುತ್ತಾರೆ. ಅವರೊಂದಿಗೆ ವಾಸಿಸುವ ಜನರು ಸಹ  ಸಂತೋಷದಿಂದ ಇರುತ್ತಾರೆ.   ಅವರ ಈ ಗುಣದಿಂದಾಗಿ ಈ ರಾಶಿಯವರನ್ನು (Zodiac Sign)ಬಹಳವಾಗಿ ಇಷ್ಟಪಡುತ್ತಾರೆ. ಈ ರಾಶಿಯ ಜನರು ಸ್ನೇಹವನ್ನು ಉತ್ತಮವಾಗಿ ನಿಭಾಯಿಸುತ್ತಾರೆ. 

ಇದನ್ನೂ ಓದಿ : ಏಪ್ರಿಲ್ ನಲ್ಲಿ ಈ ರಾಶಿಯವರ ಮೇಲೆ ಬೀಳಲಿದೆ ಶನಿಯ ವಕ್ರ ದೃಷ್ಟಿ

ವೃಷಭ ರಾಶಿ : ವೃಷಭ ರಾಶಿಯ (Taurus)ಜನರು ತುಂಬಾ ಧನಾತ್ಮಕವಾಗಿ ಯೋಚಿಸುತ್ತಾರೆ. ಹರ್ಷಚಿತ್ತದಿಂದ ಇರುತ್ತಾರೆ ಮತ್ತು ಎಲ್ಲರೊಂದಿಗೆ ತಮಾಷೆಯಾಗಿ ಮಾತನಾಡುತ್ತಾರೆ.  ಅವರ ಮಾತಿನ ಶೈಲಿ, ನಗುವನ್ನು ಜನ ಇಷ್ಟಪಡುತ್ತಾರೆ.  ಈ ರಾಶಿಯವರು ಬಹಳ  ಬುದ್ಧಿವಂತರಾಗಿರುತ್ತಾರೆ.  ತಮ್ಮ ಗುಣದಿಂದ ಎದುರಿಗಿರುವವರನ್ನು ಇವರು ಆಕರ್ಷಿಸಿ ಬಿಡುತ್ತಾರೆ (Nature by zodiac). 

ಧನು ರಾಶಿ : ಧನು ರಾಶಿಯವರು (Sagitarius)ಲವಲವಿಕೆ ಸ್ವಭಾವದವರು. ಈ ರಾಶಿಯವರು ಮಾತನಾಡುವ ಕಲೆಯಲ್ಲಿ ಪರಿಣತರಾಗಿರುತ್ತಾರೆ. ಇದರಿಂದಾಗಿ ಅವರು ಸುಲಭವಾಗಿ ಜನರನ್ನು ತಮ್ಮ ಕಡೆಗೆ ಆಕರ್ಷಿಸುತ್ತಾರೆ. ಅವರು ಹೋದಲ್ಲೆಲ್ಲಾ ಆಕರ್ಷಣೆಯ ಕೇಂದ್ರಬಿಂದುವಾಗುತ್ತಾರೆ. 

ಇದನ್ನೂ ಓದಿ : ನವರಾತ್ರಿಯ ವೇಳೆ ನೀವೂ ಉಪವಾಸ ಮಾಡುತ್ತೀರಾ? ಕಲ್ಲು ಉಪ್ಪಿಗೆ ಸಂಬಂಧಿಸಿದ ಈ ಸತ್ಯ ತಿಳಿಯಿರಿ

 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ನಂಬಿಕೆ ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More