Home> Lifestyle
Advertisement

ಇಂದಿನಿಂದ ಬೆಳಗಲಿದೆ ಈ 4 ರಾಶಿಯವರ ಅದೃಷ್ಟ, ಬುಧ ನೀಡಲಿದ್ದಾನೆ ಅಪಾರ ಲಾಭ

ಮಕರ ರಾಶಿಯಲ್ಲಿ ಸೂರ್ಯನೊಂದಿಗೆ ಶನಿಯ ಉಪಸ್ಥಿತಿಯಿಂದಾಗಿ, ಬುಧ ಗ್ರಹವು ಅಸ್ತವಾಗಿತ್ತು. ಈಗ ಮತ್ತೆ ಬುಧ ಗ್ರಹದ ಉದಯವಾಗಿದ್ದು 4 ರಾಶಿಯವರಿಗೆ ಭಾರೀ ಲಾಭವಾಗಲಿದೆ. 

ಇಂದಿನಿಂದ ಬೆಳಗಲಿದೆ ಈ 4 ರಾಶಿಯವರ ಅದೃಷ್ಟ, ಬುಧ ನೀಡಲಿದ್ದಾನೆ ಅಪಾರ ಲಾಭ

ನವದೆಹಲಿ : ಬುದ್ಧಿಮತ್ತೆ, ಸಂಪತ್ತು, ವ್ಯಾಪಾರ, ಸಂವಹನದ ಅಂಶವಾದ ಬುಧ ಗ್ರಹ ಮತ್ತೆ ಉದಯಿಸಿದೆ (Mercury Rise 2022). ಮಕರ ರಾಶಿಯಲ್ಲಿ ಸೂರ್ಯನೊಂದಿಗೆ ಶನಿಯ ಉಪಸ್ಥಿತಿಯಿಂದಾಗಿ, ಬುಧ ಗ್ರಹವು ಅಸ್ತವಾಗಿತ್ತು. ಈಗ ಮತ್ತೆ ಬುಧ ಗ್ರಹದ ಉದಯವಾಗಿದ್ದು 4 ರಾಶಿಯವರಿಗೆ ಭಾರೀ ಲಾಭವಾಗಲಿದೆ. ಬುಧದ ಉದಯವು ಈ ರಾಶಿಯವರಿಗೆ (Zodiac sign) ವ್ಯವಹಾರ, ಸಂವಹನದ ವಿಷಯದಲ್ಲಿ ಬಹಳಷ್ಟು ಪ್ರಯೋಜನಗಳನ್ನು ನೀಡಲಿದೆ. ಈಗ ಅವರ ಸ್ಥಗಿತಗೊಂಡ ಕೆಲಸಗಳು ಮತ್ತೆ ಚುರುಕುಗೊಳ್ಳಲಿದೆ. 

ಈ ರಾಶಿಯವರ ಅದೃಷ್ಟ ಬೆಳಗಲಿದೆ : 
ಮೇಷ ರಾಶಿ -:

ಮೇಷ ರಾಶಿಯವರ (Aries) ಎಲ್ಲಾ ಸ್ಥಗಿತಗೊಂಡ ಕೆಲಸಗಳು ಪ್ರಾರಂಭವಾಗುತ್ತವೆ. ಅವರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಈ ಕಾರಣದಿಂದಾಗಿ, ಎಲ್ಲಾ ಕೆಲಸಗಳಲ್ಲಿಯೂ ಒಂದರ ಹಿಂದೆ ಒಂದರಂತೆ ಯಶಸ್ಸು ಸಿಗಲಿವೆ. ಆದಾಯ ಹೆಚ್ಚಲಿದೆ.  ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ. ನಿಮ್ಮ ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಸಿಗಲಿವೆ. 

ಇದನ್ನೂ ಓದಿ :  Sun Transit Impact: ಶನಿಯ ಮನೆಯಲ್ಲಿ ಸೂರ್ಯನ ಪ್ರವೇಶ, ಈ ರಾಶಿಯ ಜನರ ಮೇಲೆ ಬೀಳಲಿದೆ ಹೆಚ್ಚು ಪ್ರಭಾವ

ವೃಷಭ ರಾಶಿ :
ಬುಧ ಗ್ರಹದ ಉದಯವು (Mercury Rise 2022) ವೃಷಭ ರಾಶಿಯವರಿಗೆ ಬಹಳ ಪ್ರಯೋಜನಕಾರಿಯಾಗಿರಲಿದೆ. ಬುಧ ಗ್ರಹದ ಉದಯವು ವೃತ್ತಿಜೀವನದಲ್ಲಿ ಪ್ರಚಂಡ ಪ್ರಯೋಜನಗಳನ್ನು ನೀಡುತ್ತದೆ. ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ಅದೃಷ್ಟದ ಸಹಾಯದಿಂದ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. 

ಧನು ರಾಶಿ :
ಬುಧ ಗ್ರಹದ ಉದಯವು ಧನು ರಾಶಿಯವರಿಗೆ (Sagitarius) ಹೆಚ್ಚಿನ ಸಂಪತ್ತು ಲಾಭವನ್ನು ತರುತ್ತದೆ. ಈ ರಾಶಿಯವರ ಆದಾಯವೂ ಹೆಚ್ಚಾಗಬಹುದು. ಇದ್ದಕ್ಕಿದ್ದಂತೆ  ಯಾವುದೊ ಮೂಲದಿಂದ  ಹಣ ಸಿಗಬಹುದು. ಹೂಡಿಕೆಯಿಂದ (Investment) ಲಾಭವಾಗಲಿದೆ.  

ಇದನ್ನೂ ಓದಿ:   Weekly Horoscope : ಈ ವಾರ 3 ರಾಶಿಯವರಿಗೆ ಹಣ - ಸಂತೋಷದ ಸುರಿಮಳೆ : ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ!

ಮೀನ ರಾಶಿ :
ಬುಧಗ್ರಹದ ಉದಯವು ಮೀನ ರಾಶಿಯವರಿಗೆ (Pisces) ಅದೃಷ್ಟವನ್ನು ಹೊತ್ತು ತರಲಿದೆ. ಈ ರಾಶಿಯವರ ಆದಾಯ ಹೆಚ್ಚಲಿದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಉದ್ಯಮಿಗಳು ದೊಡ್ಡ ಲಾಭವನ್ನು ಗಳಿಸಲಿದ್ದಾರೆ.  ಒಟ್ಟಾರೆಯಾಗಿ, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Read More