Home> Lifestyle
Advertisement

ಮನೆಯಲ್ಲಿ ಬರುವ ಇಲಿಗಳು ಶುಭ-ಅಶುಭ ಸೂಚನೆ ನೀಡುತ್ತವೆ.. ಹೇಗೆ ಗೊತ್ತೆ?

Rats in the house: ಮನೆಯಲ್ಲಿ ಇಲಿಗಳ ಉಪಸ್ಥಿತಿಯನ್ನು ಯಾವಾಗಲೂ ಸಾಮಾನ್ಯ ಎಂದು ತಪ್ಪಾಗಿ ಭಾವಿಸಬೇಡಿ. ಇದು ಅನೇಕ ಅಶುಭ ಘಟನೆಗಳನ್ನೂ ಸೂಚಿಸುತ್ತದೆ.

ಮನೆಯಲ್ಲಿ ಬರುವ ಇಲಿಗಳು ಶುಭ-ಅಶುಭ ಸೂಚನೆ ನೀಡುತ್ತವೆ.. ಹೇಗೆ ಗೊತ್ತೆ?

ನವದೆಹಲಿ: ಮನೆಯಲ್ಲಿ ಇಲಿಗಳಿರುವುದು (Rats) ಸಹಜ. ಗಣೇಶನ ವಾಹನ ಇಲಿಗಳನ್ನು ಅವನೊಂದಿಗೆ ಪೂಜಿಸಲಾಗುತ್ತದೆ. ಆದರೆ ಈ ಇಲಿಗಳು ಅನೇಕ ಅಶುಭ ಘಟನೆಗಳನ್ನು ಸಹ ಸೂಚಿಸುತ್ತವೆಯಂತೆ. 

ಮನೆಯಲ್ಲಿ ಬಹಳಷ್ಟು ಇಲಿಗಳ ಆಗಮನ, ಇಲಿಗಳ ಸಾವು ಅಥವಾ ಅವುಗಳ ವಿಚಿತ್ರ ನಡವಳಿಕೆಯು ಅನೇಕ ಶುಭ ಮತ್ತು ಅಶುಭ ಘಟನೆಗಳ ಮುನ್ಸೂಚನೆ ನೀಡುತ್ತದೆ ಎಂದು ನಂಬಲಾಗಿದೆ. ಇಲಿಗಳಿಗೆ ಸಂಬಂಧಿಸಿದ ಶಕುನ ಮತ್ತು ಅಪಶಕುನಗಳನ್ನು ತಿಳಿಯೋಣ.

ಇಲಿಗಳಿಗೆ ಸಂಬಂಧಿಸಿದ ಈ ಅಶುಭ ಚಿಹ್ನೆಗಳು:

ಮನೆಯಲ್ಲಿ ಇದ್ದಕ್ಕಿದ್ದಂತೆ ಕಪ್ಪು ಇಲಿಗಳ (Black Rat) ಸಂಖ್ಯೆ ಹೆಚ್ಚಾದರೆ, ಇದು ಕೆಲವು ತೊಂದರೆಗಳ ಸಂಕೇತವಾಗಿದೆ.

ಮನೆಯಲ್ಲಿ 2-4 ಇಲಿಗಳು ಇರುವುದು ಸಾಮಾನ್ಯ, ಆದರೆ ಅವುಗಳ ಸಂಖ್ಯೆ ಹೆಚ್ಚಾದರೆ ಮನೆಯ ಸುಖ-ಸಮೃದ್ಧಿಗೆ ಧಕ್ಕೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅವುಗಳನ್ನು ಪಂಜರದಲ್ಲಿ ಹಿಡಿದು ದೂರ ಬಿಡುವುದು ಸೂಕ್ತವಾಗಿದೆ.

ಇದನ್ನೂ ಓದಿ: Vastu Tips Related To Parijat: ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿದ್ದೀರಾ? ಮನೆಯಲ್ಲಿರಲಿ ಈ ವಿಶೇಷ ಗಿಡ 

ಕಪ್ಪು ಇಲಿಗಳು ರಾತ್ರಿಯಿಡೀ ಮನೆಯಲ್ಲಿ ತಿರುಗಾಡುವುದು ಅಥವಾ ಗಲಾಟೆ ಮಾಡುವುದು ಯಾವುದಾದರೂ ಕಾಯಿಲೆ ಬರುವ ಸೂಚನೆಯಾಗಿದೆ.  

ಮನೆಯಿಂದ ಹೊರಡುವಾಗ ಇಲಿ ಅಡ್ಡ ಬಂದರೆ ಅಥವಾ ಇಲಿ ಕಂಡರೆ ಅಶುಭ. ಇದು ಕೆಲಸದಲ್ಲಿ ತೊಂದರೆಗಳನ್ನು ಸೃಷ್ಟಿಸುತ್ತದೆ.

ಇಲಿ ಬುದ್ಧಿವಂತಿಕೆಯ ದೇವರಾದ ಗಣೇಶನ (Lord Ganesha) ವಾಹನವಾಗಿರಬಹುದು, ಆದರೆ ಇದು ಅಜ್ಞಾನ ಶಕ್ತಿಗಳ ಸಂಕೇತವೆಂದು ಪರಿಗಣಿಸಲಾಗಿದೆ. ಆದುದರಿಂದ ಮನೆಯಲ್ಲಿ ಇಲಿಗಳ ಸಂಖ್ಯೆ ಜಾಸ್ತಿ ಇದ್ದರೆ ಮನೆಯವರ ಬುದ್ಧಿಶಕ್ತಿ ನಾಶವಾಗುತ್ತದೆ ಮತ್ತು ನಕಾರಾತ್ಮಕ ಚಿಂತನೆ ಉಂಟಾಗುತ್ತದೆ. 

ಕೊಳಕು ಇರುವಲ್ಲಿ ಇಲಿಗಳು ಹೆಚ್ಚು. ನಂತರ ಅವು ಸೋಂಕನ್ನು ಹರಡುತ್ತವೆ. ಆದ್ದರಿಂದ, ಇಲಿಗಳು ಕುಟುಂಬದ ಆರೋಗ್ಯಕ್ಕೆ ಒಳ್ಳೆಯದಲ್ಲ.

ಚುಚುಂದರ್ ಇಲಿಗಳು ಅದೃಷ್ಟದ ಸಂಕೇತ:

ಅದೇ ಸಮಯದಲ್ಲಿ, ಮನೆಯಲ್ಲಿ ಚುಚುಂದರ್ ಇಲಿಗಳ (Chuchundra rat) ಆಗಮನವನ್ನು ವಾಸ್ತು ಶಾಸ್ತ್ರದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಚುಚುಂದರ್ ಎಲ್ಲಿ ಇದೆಯೋ ಅಲ್ಲಿ ಲಕ್ಷ್ಮಿಯ ಕೃಪೆ ಯಾವಾಗಲೂ ಇರುತ್ತದೆ ಎಂದು ನಂಬಲಾಗಿದೆ.  

ಇದನ್ನೂ ಓದಿ: Health Tips: ಕರಿಮೆಣಸು ಮತ್ತು ತುಪ್ಪದಿಂದ ಅನೇಕ ಆರೋಗ್ಯಕಾರಿ ಪ್ರಯೋಜನಗಳಿವೆ

(Disclaimer: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More