Home> Lifestyle
Advertisement

ಮಾಧ್ಯಮ, ಫ್ಯಾಷನ್, ಸಿನಿಮಾ ರಂಗಗಳಲ್ಲಿ ಉತ್ತುಂಗಕ್ಕೆ ಏರುತ್ತಾರೆ ಈ ಎರಡು ರಾಶಿಯವರು

ಈ 2 ರಾಶಿಯ ಜನರು ಗ್ಲಾಮರ್ ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಮತ್ತು ಹಣವನ್ನು ಸಂಪಾದಿಸುತ್ತಾರೆ.  ಐಷಾರಾಮಿ, ಆಕರ್ಷಣೆ, ಸಂಪತ್ತು, ವೈಭವ ಮತ್ತು ಐಶ್ವರ್ಯವನ್ನು ನೀಡುವ ಗ್ರಹವಾದ ಶುಕ್ರನ ವಿಶೇಷ ಕೃಪೆ ಈ ರಾಶಿಯವರ ಮೇಲಿರುವುದೇ ಇದಕ್ಕೆ ಕಾರಣ.  
 

ಮಾಧ್ಯಮ, ಫ್ಯಾಷನ್, ಸಿನಿಮಾ ರಂಗಗಳಲ್ಲಿ ಉತ್ತುಂಗಕ್ಕೆ ಏರುತ್ತಾರೆ ಈ ಎರಡು ರಾಶಿಯವರು

ಬೆಂಗಳೂರು : ವೈದಿಕ ಜ್ಯೋತಿಷ್ಯದಲ್ಲಿ, ಎಲ್ಲಾ 12 ರಾಶಿಯ ಜನರ ವ್ಯಕ್ತಿತ್ವ, ಸ್ವಭಾವ, ಭವಿಷ್ಯ, ಅದೃಷ್ಟ ಇತ್ಯಾದಿಗಳ ಬಗ್ಗೆ ಹೇಳಲಾಗಿದೆ. ಇದರೊಂದಿಗೆ, ಪ್ರತಿ ರಾಶಿಯ ಜನರ ಶಕ್ತಿ ಮತ್ತು ನ್ಯೂನತೆಗಳ ಬಗ್ಗೆ ಕೂಡಾ ಹೇಳಲಾಗಿದೆ. ರಾಶಿಚಕ್ರದ ಪ್ರಕಾರ ಯಾವ ವೃತ್ತಿಯು ಸರಿಹೊಂದುತ್ತದೆ. ಯಾವ ವೃತ್ತಿಯಲ್ಲಿ ಮುಂದುವರೆದರೆ ಯಶಸ್ಸು ಸಿಗುತ್ತದೆ ಎನ್ನುವುದನ್ನು ಕೂಡಾ ವಿವರಿಸಲಾಗಿದೆ. ಇಲ್ಲಿ ನಾವು ಹೇಳುತ್ತಿರುವ ಎರಡು ರಾಶಿಯವರು ಮಾಧ್ಯಮ, ಚಲನಚಿತ್ರ, ಫ್ಯಾಷನ್‌ನಂತಹ ಗ್ಲಾಮರ್ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮಾಡಿದರೆ ಉತ್ತಮ ಯಶಸ್ಸು ಪಡೆಯುತ್ತಾರೆ. ಈ 2 ರಾಶಿಯ ಜನರು ಗ್ಲಾಮರ್ ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಮತ್ತು ಹಣವನ್ನು ಸಂಪಾದಿಸುತ್ತಾರೆ. ಐಷಾರಾಮಿ, ಆಕರ್ಷಣೆ, ಸಂಪತ್ತು, ವೈಭವ ಮತ್ತು ಐಶ್ವರ್ಯವನ್ನು ನೀಡುವ ಗ್ರಹವಾದ ಶುಕ್ರನ ವಿಶೇಷ ಕೃಪೆ ಈ ರಾಶಿಯವರ ಮೇಲಿರುವುದೇ ಇದಕ್ಕೆ ಕಾರಣ.  

ಈ ಜನರು ಮಾಧ್ಯಮ, ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಗಳಿಸುತ್ತಾರೆ  :
ವೃಷಭ ರಾಶಿ : ವೃಷಭ ರಾಶಿಯ ಅಧಿಪತಿ ಶುಕ್ರ. ಶುಕ್ರನ ಕೃಪೆಯಿಂದ ಈ ರಾಶಿಯ ಜನರು ಆಕರ್ಷಕವಾಗಿರುತ್ತಾರೆ. ಅವರ ಮಾತು ಮತ್ತು ನಡೆಗಳಲ್ಲಿ ಎದುರಿಗಿರುವವರನ್ನು ಸುಲಭವಾಗಿ ತಮ್ಮತ್ತ ಆಕರ್ಷಿಸುವ ಶಕ್ತಿ ಇರುತ್ತದೆ. ಅವರು ದುಬಾರಿ ಬಟ್ಟೆ ಮತ್ತು ವಸ್ತುಗಳನ್ನು ಇಷ್ಟಪಡುತ್ತಾರೆ. ಈ ರಾಶಿಯವರು ಜೀವನದ ಬಗ್ಗೆ ಸಕಾರಾತ್ಮಕ ಮನೋಭಾವವನ್ನು ಹೊಂದಿರುತ್ತಾರೆ. ಪೂರ್ಣ ಚೈತನ್ಯದಿಂದ ಬದುಕುತ್ತಾರೆ. ವೃಷಭ ರಾಶಿಯವರು ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ. ಜೊತೆಗೆ ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ. ಈ ಜನರು ಕಲಾಭಿಮಾನಿಗಳು. ಮಾಧ್ಯಮ ಅಥವಾ ಫಿಲ್ಮ್ ಲೈನ್‌ಗೆ ಹೋದರೆ, ಸಾಕಷ್ಟು ಹೆಸರು ಮತ್ತು ಹಣವನ್ನು ಗಳಿಸುತ್ತಾರೆ. ವೃಷಭ ರಾಶಿಯವರು ಐಷಾರಾಮಿ ಜೀವನ ನಡೆಸಲು ಇಷ್ಟಪಡುತ್ತಾರೆ.  ಬಟ್ಟೆ, ಆಭರಣಗಳು, ಸೌಂದರ್ಯವರ್ಧಕಗಳ ವ್ಯಾಪಾರ ಮಾಡಿದರೆ ಹೆಚ್ಚಿನ ಲಾಭವಾಗುವುದು. 

ಇದನ್ನೂ ಓದಿ : ಮಂಗಳನ ಮಹಾ ದಾರಿದ್ರ್ಯ ಯೋಗದಿಂದ ಈ ರಾಶಿಯವರ ಜೀವನದಲ್ಲಿ ಉಂಟಾಗಲಿದೆ ಅಲ್ಲೋಲ ಕಲ್ಲೋಲ.!

ತುಲಾ ರಾಶಿ : ತುಲಾ ರಾಶಿಯ ಒಡೆಯನೂ ಶುಕ್ರನೇ. ಈ ಜನರು ತುಂಬಾ ಬುದ್ಧಿವಂತರು, ಸಮತೋಲಿತ ನಡವಳಿಕೆ ಹೊಂದಿರುತ್ತಾರೆ. ಹರ್ಷಚಿತ್ತದಿಂದ ಇದ್ದು, ಉತ್ಸಾಹಭರಿತ ಮತ್ತು  ರೋಮ್ಯಾಂಟಿಕ್ ಆಗಿರುತ್ತಾರೆ. ತಮ್ಮ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ಇರಿಸಿಕೊಳ್ಳಲು ಇಷ್ಟಪಡುತ್ತಾರೆ. ತುಲಾ ರಾಶಿಯವರು ಒಳ್ಳೆಯ ರಾಜತಾಂತ್ರಿಕರೂ ಆಗಿರುತ್ತಾರೆ. ಅವರಿಗೂ ಐಷಾರಾಮಿ ಜೀವನ ನಡೆಸಲು ಇಷ್ಟ. ಮಾತ್ರವಲ್ಲ ರುಚಿಕರ ಊಟ ತಿಂಡಿ ಇಷ್ಟಪಡುತ್ತಾರೆ. ಬೆಲೆಬಾಳುವ ವಸ್ತುಗಳ ಸಂಗ್ರಹ ಇವರಲ್ಲಿರುತ್ತದೆ. ತಮ್ಮ ಕಠಿಣ ಪರಿಶ್ರಮ, ಗುರಿಯನ್ನು ಸಾಧಿಸುವ ಸಂಕಲ್ಪದಿಂದ ಜೀವನದಲ್ಲಿ ಬಹಳ ಯಶಸ್ವಿಯಾಗುತ್ತಾರೆ. ಈ ಜನರು ಮಾಧ್ಯಮ, ಚಲನಚಿತ್ರ, ಫ್ಯಾಷನ್ ಮುಂತಾದ ಕ್ಷೇತ್ರಗಳಿಗೆ ಹೋದರೆ, ಅವರು ಸಾಕಷ್ಟು ಹಣ ಮತ್ತು ಖ್ಯಾತಿಯನ್ನು ಗಳಿಸುತ್ತಾರೆ. ತುಲಾ ರಾಶಿಯವರು ಉತ್ತಮ ಬರಹಗಾರರೂ ಆಗಿರುತ್ತಾರೆ. ರಾಜರಂತೆ ಜೀವನ ನಡೆಸುವ ಬಯಕೆಯನ್ನು ಹೊಂದಿದ್ದು, ಆ ಬಯಕೆ ಈಡೇರಿಸುವಲ್ಲಿ ಯಶಸ್ವಿಯಾಗುತ್ತಾರೆ.  

ಇದನ್ನೂ ಓದಿ :  ದೀಪಾವಳಿಯವರೆಗೂ ಮೌನವಾಗಿ ಪ್ರತಿದಿನ ತುಳಸಿಯ ಈ ವಿಶೇಷ ಪೂಜೆ ಮಾಡಿ: ಸಂಪತ್ತು ಓಡೋಡಿ ಬರುತ್ತೆ

( ಸೂಚನೆ :  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More