Home> Lifestyle
Advertisement

Solar eclipse: ಈ ವೇಳೆ ಸೂರ್ಯಗ್ರಹಣದ ಪರಿಣಾಮ ಗರಿಷ್ಠವಾಗಿರುತ್ತೆ, ನೀವು ಏನು ಮಾಡ್ಬೇಕು ಗೊತ್ತಾ?

ಮಂಗಳವಾರ ಬೆಳಗ್ಗೆ 11.28ಕ್ಕೆ ಸೂರ್ಯಗ್ರಹಣ ಆರಂಭವಾಗಲಿದ್ದು, ಸಂಜೆ 06.33ರವರೆಗೆ ಇರುತ್ತದೆ. ಆದರೆ ಭಾರತದಲ್ಲಿ ಈ ಗ್ರಹಣವು ಸಂಜೆ 4:22ರಿಂದ ಪ್ರಾರಂಭವಾಗಿ 5:26 ರವರೆಗೆ ಇರುತ್ತದೆ.

Solar eclipse: ಈ ವೇಳೆ ಸೂರ್ಯಗ್ರಹಣದ ಪರಿಣಾಮ ಗರಿಷ್ಠವಾಗಿರುತ್ತೆ, ನೀವು ಏನು ಮಾಡ್ಬೇಕು ಗೊತ್ತಾ?

ನವದೆಹಲಿ: ಇಂದು ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸುತ್ತಿದೆ. ಇದು ಭಾಗಶಃ ಸೂರ್ಯಗ್ರಹಣವಾಗಿದೆ. ಈ ಸೂರ್ಯ ಗ್ರಹವು ತುಲಾ ಮತ್ತು ಸ್ವಾತಿ ನಕ್ಷತ್ರದಲ್ಲಿ ಇರುತ್ತದೆ. ಮಂಗಳವಾರ 11.28 ರಿಂದ ಸೂರ್ಯಗ್ರಹಣ ಆರಂಭವಾಗಲಿದ್ದು, ಸಂಜೆ 06.33ರವರೆಗೆ ಇರುತ್ತದೆ. ಆದರೆ ಭಾರತದಲ್ಲಿ ಈ ಗ್ರಹಣವು ಸಂಜೆ 4:22ರಿಂದ ಪ್ರಾರಂಭವಾಗಿ 5:26ರವರೆಗೆ ಗೋಚರಿಸುತ್ತದೆ. 

ಭಾರತದಲ್ಲಿ ಸೂರ್ಯಗ್ರಹಣ ಸಂಭವಿಸಿದಾಗ ಅದರ ಪರಿಣಾಮವು ಗರಿಷ್ಠವಾಗಿರುತ್ತದೆ. ಜ್ಯೋತಿಷಿಗಳ ಪ್ರಕಾರ, ಸೂರ್ಯಗ್ರಹಣವು ಅದರ ಪೂರ್ಣ ಪಕ್ವತೆಯಲ್ಲಿ ಸಂಭವಿಸಿದಾಗ ಅದರ ಪರಿಣಾಮ ಗರಿಷ್ಠವಾಗಿರುತ್ತದೆ. ಈ ಸಮಯದಲ್ಲಿ ಜನರು ಹೆಚ್ಚು ಜಾಗರೂಕರಾಗಿರಬೇಕು ಎಂದು ಸಲಹೆ ನೀಡಲಾಗಿದೆ.

ಇದನ್ನೂ ಓದಿ: Surya Grahana 2022: ಗ್ರಹಣ ಮುಗಿದ ತಕ್ಷಣ ಈ ಕೆಲಸ ಮಾಡಿ... ಇಲ್ದಿದ್ರೆ?

ನೀವು ಏನು ಮಾಡಬೇಕು..?

  1. ಮನೆ ಬಿಟ್ಟು ಹೋಗಬೇಡಿ.
  2. ಬರಿಗಣ್ಣಿನಿಂದ ಸೂರ್ಯನನ್ನು ನೋಡಬೇಡಿ.
  3. ಗರ್ಭಿಣಿಯರು ಏನನ್ನೂ ತಿನ್ನಬಾರದು ಮತ್ತು ಈ ಸಮಯದಲ್ಲಿ ಮಲಗಬಾರದು.
  4. ಗರ್ಭಿಣಿಯರು ಕೈಕಾಲುಗಳನ್ನು ನೇರವಾಗಿರಿಸಿ ಕುಳಿತುಕೊಳ್ಳಬೇಕು. ಮನೆಯಲ್ಲಿ ಸ್ವಲ್ಪ ನಡಿಗೆ ಹೆಚ್ಚು ಸೂಕ್ತವಾಗಿರುತ್ತದೆ.
  5. ಗ್ರಹಣ ಮುಗಿದ ತಕ್ಷಣ ಸ್ನಾನ ಮಾಡಬೇಕು.

ಈ ರಾಶಿಯವರಿಗೆ ಸೂರ್ಯಗ್ರಹಣ ಅಶುಭ

ಈ ಸೂರ್ಯಗ್ರಹಣವು 6 ರಾಶಿಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಬಹುದು. ಮೇಷ, ಮಿಥುನ, ಕನ್ಯಾ, ತುಲಾ, ಕುಂಭ ಮತ್ತು ಮೀನ. ಈ ಜನರು ವೃತ್ತಿ, ಆರೋಗ್ಯ, ವೈವಾಹಿಕ ಜೀವನದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು.

ಇದನ್ನೂ ಓದಿ: Solar eclipse 2022: ಸೂರ್ಯಗ್ರಹಣ ವೇಳೆ ಈ 5 ಕೆಲಸ ಮಾಡಿದ್ರೆ ಸಿಗುತ್ತೆ ಸಾವಿರಾರು ಪಟ್ಟು ಲಾಭ!

ಎಲ್ಲೆಲ್ಲಿ ಯಾವಾಗ ಸೂರ್ಯಗ್ರಹಣ ಗೋಚರಿಸುತ್ತದೆ?

  • ದೆಹಲಿ - 4.29 PM
  • ಮುಂಬೈ - 4.49 PM
  • ಅಲಹಾಬಾದ್ - 4.40 PM
  • ಪಾಟ್ನಾ - ಸಂಜೆ 4.42
  • ವಾರಣಾಸಿ - ಸಂಜೆ 4.41
  • ಅಹಮದಾಬಾದ್ - 4.38 PM
  • ಅಜ್ಮೀರ್ - 4.32 PM
  • ಭೋಪಾಲ್ - 4.42 PM
  • ಉಜ್ಜಯಿನಿ - ಸಂಜೆ 4.41
  • ರಾಂಚಿ - 14.48PM
  • ಭಾಗಲ್ಪುರ್ - 4.44 PM
  • ಜೈಪುರ-4.32 PM
  • ಭೋಪಾಲ್ - 4.42 PM
  • ಗಯಾ -4,44 PM
  • ಡೆಹ್ರಾಡೂನ್ -4.26PM
  • ಲಕ್ನೋ -16.36 PM
  • ಬೆಂಗಳೂರು - 5.12 PM
  • ಕೋಲ್ಕತ್ತಾ - 4.52 PM
  • ಚೆನ್ನೈ - 5.14 PM
  • ಹೈದರಾಬಾದ್ - 4.59 PM
  • ಕನ್ಯಾಕುಮಾರಿ - 5.32 PM
  • ಬೆಂಗಳೂರು - ಸಂಜೆ 5.12ರಿಂದ 5.56ರವರೆಗೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More