Home> Lifestyle
Advertisement

Spirituality: ಮನಸ್ಸಿನ ಏಕಾಗ್ರತೆಯನ್ನು ಬಲಪಡಿಸುತ್ತದೆ ಈ ಮಂತ್ರ

Gayatri Mantra Benefits: ತಾಯಿ ಗಾಯತ್ರಿಯನ್ನು ತ್ರಿದೇವನ ಆರಾದ್ಯ ಎಂದು ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ಗಾಯತ್ರಿ ಮಂತ್ರಕ್ಕೆ ವಿಶೇಷ ಮಹತ್ವವಿದೆ. ಈ ಮಂತ್ರವನ್ನು ನಿಯಮಿತ ರೂಪದಲ್ಲಿ ಪಠಿಸುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಮತ್ತು ಜೀವನದಲ್ಲಿ ಸಾಕಷ್ಟು ಸಂತೋಷ ಹರಿದುಬರುತ್ತೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ. ಇದನ್ನು ಅತ್ಯಂತ ಪ್ರಭಾವಶಾಲಿ ಮಂತ್ರವೆಂದು ಪರಿಗಣಿಸಲಾಗಿದೆ. 
 

Spirituality: ಮನಸ್ಸಿನ ಏಕಾಗ್ರತೆಯನ್ನು ಬಲಪಡಿಸುತ್ತದೆ ಈ ಮಂತ್ರ

Gayatri Mantri Benefits - ತಾಯಿ ಗಾಯತ್ರಿಯನ್ನು ತ್ರಿದೇವನ ಆರಾದ್ಯ ಎಂದು ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ಗಾಯತ್ರಿ ಮಂತ್ರಕ್ಕೆ ವಿಶೇಷ ಮಹತ್ವವಿದೆ. ಈ ಮಂತ್ರವನ್ನು ನಿಯಮಿತ ರೂಪದಲ್ಲಿ ಪಠಿಸುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಮತ್ತು ಜೀವನದಲ್ಲಿ ಸಾಕಷ್ಟು ಸಂತೋಷ ಹರಿದುಬರುತ್ತೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ. ಇದನ್ನು ಅತ್ಯಂತ ಪ್ರಭಾವಶಾಲಿ ಮಂತ್ರವೆಂದು ಪರಿಗಣಿಸಲಾಗಿದೆ.  ಬ್ರಹ್ಮಋಷಿ ವಿಶ್ವಾಮಿತ್ರರು ಗಾಯತ್ರಿ ಮಂತ್ರದ ಮಹತ್ವವನ್ನು ಸಾರಿದರು ಎಂದು ಶಾಸ್ತ್ರಗಳಲ್ಲಿ ಹೇಳಲಾಗುತ್ತದೆ. ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಆಗುವ ಪ್ರಯೋಜನಗಳನ್ನು ಅವರು ವಿವರಿಸಿದರು ಎನ್ನಲಾಗುತ್ತದೆ. ಕೇವಲ ಈ ಮಂತ್ರದ ಉಚ್ಚಾರಣೆಯಿಂದ ವಾತಾವರಣವು ಶುದ್ಧವಾಗುತ್ತದೆ ಎನ್ನಲಾಗುತ್ತದೆ. ಈ ಮಂತ್ರವು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಈ ಮಂತ್ರವನ್ನು ಪಠಿಸುವುದರಿಂದ ಕಲಿಯುವ ಶಕ್ತಿ ಹೆಚ್ಚಾಗುತ್ತದೆ. ಈ ಮಂತ್ರವು ಮನಸ್ಸನ್ನು ಬಲಪಡಿಸುತ್ತದೆ.

ಇದನ್ನೂ ಓದಿ-Guru Gochar Labha: ತನ್ನ ಸ್ವಂತ ರಾಶಿಯಲ್ಲಿ ದೇವಗುರು ಬೃಹಸ್ಪತಿ ಗೋಚರ, ಒಂದು ವರ್ಷದವರೆಗೆ ಈ ಜಾತಕದವರಿಗೆ ಧನವೃಷ್ಟಿಯ ಯೋಗ

ಗಾಯತ್ರಿ ಮಂತ್ರದ ಮೊದಲ ಉಲ್ಲೇಖ ಋಗ್ವೇದದಲ್ಲಿ ಕಂಡುಬರುತ್ತದೆ. ಗಾಯತ್ರಿ ಮಂತ್ರವನ್ನು ಸಾಮಾನ್ಯವಾಗಿ ಓಂ ನಿಂದ ಉಚ್ಚರಿಸಲಾಗುತ್ತದೆ. ಇದರಿಂದ ಏಕಾಗ್ರತೆ ಹೆಚ್ಚುತ್ತದೆ. ಹಿಂದೂ ಧರ್ಮದಲ್ಲಿ ಗಾಯತ್ರಿ ಮಂತ್ರಕ್ಕೆ ವಿಶೇಷ ಸ್ಥಾನ ನೀಡಲಾಗಿದೆ. ಇದನ್ನು ಎಲ್ಲಾ ಆಚರಣೆಗಳಲ್ಲಿ ಜಪಿಸಲಾಗುತ್ತದೆ. ಗಾಯತ್ರಿ ಮಂತ್ರದ ಪಠಣವು ದೇಹದ ವಿವಿಧ ಅಂಗಗಳ ಮೇಲೆ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಅವುಗಳ ಶಕ್ತಿ ಹೆಚ್ಚಾಗುತ್ತದೆ. ದೇಹದ ರೋಗನಿರೋಧಕ ಶಕ್ತಿಯೂ ಇದರಿಂದ ಹೆಚ್ಚುತ್ತದೆ. ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಹೃದಯಕ್ಕೂ ಪ್ರಯೋಜನವಾಗುತ್ತದೆ. ಈ ಮಂತ್ರವನ್ನು ಪಠಿಸುವುದರಿಂದ ಚರ್ಮದ ಹೊಳಪು ಹೆಚ್ಚಾಗುತದೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ-Sharp Nose Tips: ದಪ್ಪ ಮೂಗಿನಿಂದ ನೀವು ತೊಂದರೆಗೊಳಗಾಗಿದ್ದೀರಾ? ಸರ್ಜರಿ ಇಲ್ಲದೆ ಈ ರೀತಿ ಶಾರ್ಪ್ ನೋಸ್ ಪಡೆಯಿರಿ

ಸೂರ್ಯೋದಯಕ್ಕೆ ಮುನ್ನ ಗಾಯತ್ರಿ ಮಂತ್ರವನ್ನು ಪಠಿಸಬೇಕು. ಈ ಮಂತ್ರವನ್ನು ಮಧ್ಯಾಹ್ನವೂ ಜಪಿಸಬಹುದು. ಗಾಯತ್ರಿ ಮಂತ್ರವನ್ನು ಸಂಜೆ ಸೂರ್ಯಾಸ್ತದ ಮೊದಲು ಮತ್ತು ಸ್ವಲ್ಪ ಸೂರ್ಯಾಸ್ತದ ನಂತರ ಪಠಿಸಬೇಕು. ಗಾಯತ್ರಿ ಮಂತ್ರವನ್ನು ನಿಯಮಿತವಾಗಿ ಪಠಿಸುವುದರಿಂದ, ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸಬಹುದು. ಈ ಮಂತ್ರವನ್ನು ಪಠಿಸಲು, ಸ್ನಾನ ಇತ್ಯಾದಿಗಳನ್ನು ಪೂರ್ಣಗೊಳಿಸಿ ನಂತರ, ಶುದ್ಧ ಮತ್ತು ಹತ್ತಿ ಬಟ್ಟೆಗಳನ್ನು ಧರಿಸಿ ಮತ್ತು ಆಸನದಲ್ಲಿ ಕುಳಿತು ಜಪಿಸಬೇಕು. ಜಪಕ್ಕೆ ತುಳಸಿ ಅಥವಾ ಶ್ರೀಗಂಧದ ಮಾಲೆಯನ್ನು ಬಳಸಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More