Home> Lifestyle
Advertisement

Shukra Rashi Parivartan: ಈ ರಾಶಿಯವರಿಗೆ ಆರಂಭವಾಗಲಿದೆ ಒಳ್ಳೆಯ ಸಮಯ

Shukra Rashi Parivartan: ಶುಕ್ರನ ರಾಶಿ ಪರಿವರ್ತನೆಯು ಕೆಲವು ರಾಶಿಯ ಜನರ ಜೀವನದಲ್ಲಿ ಸಕಾರಾತ್ಮಕ ಪರಿಣಾಮಗಳನ್ನು ಉಂಟು ಮಾಡಲಿದೆ. ಅವರ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ.

Shukra Rashi Parivartan: ಈ ರಾಶಿಯವರಿಗೆ ಆರಂಭವಾಗಲಿದೆ ಒಳ್ಳೆಯ ಸಮಯ

Shukra Rashi Parivartan: ಗ್ರಹಗಳ ಬದಲಾವಣೆಗಳು ವಿವಿಧ ರಾಶಿಚಕ್ರ ಚಿಹ್ನೆಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತವೆ. ಐಷಾರಾಮಿ ಜೀವನಕ್ಕೆ ಕಾರಣವಾಗಿರುವ ಶುಕ್ರ ಗ್ರಹ ಶೀಘ್ರದಲ್ಲೇ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಜನವರಿ 29 ರಂದು ಧನು ರಾಶಿಯಲ್ಲಿ ಶುಕ್ರನ ಈ ರಾಶಿ ಬದಲಾವಣೆಯು ನಡೆಯಲಿದೆ. ಶುಕ್ರನ ಚಲನೆಯು ಕೆಲವು ರಾಶಿಯವರ ಜೀವನದಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತದೆ. ಅವರ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ಶುಕ್ರನ ಈ ಬದಲಾವಣೆಯಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂಬುದನ್ನು ತಿಳಿಯೋಣ.

ಮೇಷ ರಾಶಿ: 

ಮೇಷ ರಾಶಿಯವರು ಶುಕ್ರನ ರಾಶಿ ಪರಿವರ್ತನೆಯಿಂದ (Shukra Rashi Parivartan) ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಪೂರ್ವಿಕರ ಸ್ವತ್ತುಗಳಿಂದ ನೀವು ಲಾಭ ಪಡೆಯುತ್ತೀರಿ. ಉದ್ಯಮ ಮತ್ತು ವೃತ್ತಿಯಲ್ಲಿ ಬೆಳವಣಿಗೆ ಇರುತ್ತದೆ. ವ್ಯಾಪಾರ-ವ್ಯವಹಾರದಲ್ಲಿ ಅಡ್ಡಿಯಾಗಿದ್ದ ಕಾರ್ಯಗಳು ಅಂತ್ಯಗೊಳ್ಳಲಿವೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಬೆಂಬಲ ಪಡೆಯುವಿರಿ. ದಾಂಪತ್ಯ ಜೀವನದಲ್ಲಿ ಸುಖವಿದೆ.

ಇದನ್ನೂ ಓದಿ- Shani Transit 2022: ಮುಂದಿನ 33 ದಿನಗಳು ಈ 8 ರಾಶಿಯವರಿಗೆ ತುಂಬಾ ಕಷ್ಟಕರ ಪರಿಸ್ಥಿತಿ ಎದುರಾಗಲಿದೆ..!

ಮಿಥುನ ರಾಶಿ:
ಮದುವೆಯಾಗದೇ ಇರುವವರು ವಿವಾಹವಾಗುವ ಸಾಧ್ಯತೆ ಹೆಚ್ಚು. ದಾಂಪತ್ಯ ಜೀವನದಲ್ಲಿ ಸುಖವಿದೆ. ಜಂಟಿ ಉದ್ಯಮವು ಲಾಭದಾಯಕವಾಗಿರುತ್ತದೆ. ಶುಕ್ರನ ಈ ಬದಲಾವಣೆಯು ಮಿಥುನ ರಾಶಿಯ ಜನರ ಆರೋಗ್ಯವನ್ನು ಸುಧಾರಿಸುತ್ತದೆ. ಆಭರಣ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ಸಾಮಾಜಿಕ ಪ್ರತಿಷ್ಠೆ ಹೆಚ್ಚಲಿದೆ.

ಸಿಂಹ ರಾಶಿ:
ಸಿಂಹ ರಾಶಿಯವರು ಶುಕ್ರನ ರಾಶಿ ಬದಲಾವಣೆಯಿಂದ (Venus Transit) ಅಪಾರ ಲಾಭಗಳನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವ ಅವಕಾಶವನ್ನು ಪಡೆಯುವಿರಿ. ಈ ಅವಧಿಯಲ್ಲಿ ಆರ್ಥಿಕ ಪ್ರಗತಿ ಇರುತ್ತದೆ. ಇದಲ್ಲದೇ ನೀವು ಕಚೇರಿಯಲ್ಲಿ ಬಡ್ತಿಯ ಲಾಭವನ್ನು ಪಡೆಯುತ್ತೀರಿ. ಮಕ್ಕಳಿಂದ ಧನಲಾಭ, ಉದ್ಯಮದಲ್ಲಿ ಆರ್ಥಿಕ ಪ್ರಗತಿ ಕಂಡುಬರಲಿದೆ.

ಇದನ್ನೂ ಓದಿ- Jupiter Transit 2022: ಗುರು ಕೃಪೆಯಿಂದ ಮುಂದಿನ 89 ದಿನಗಳ ಕಾಲ ಈ ರಾಶಿಯ ಜನರು ಸಂಭ್ರಮ ಆಚರಿಸಲಿದ್ದಾರೆ, ನಿಮ್ಮ ರಾಶಿಯೂ ಇದೆಯಾ?

ಕನ್ಯಾ ರಾಶಿ:
ಕನ್ಯಾ ರಾಶಿಯವರಿಗೆ ಈ ಸಮಯದಲ್ಲಿ ಕುಟುಂಬದ ಸದಸ್ಯರಿಂದ ಆರ್ಥಿಕ ಲಾಭ ದೊರೆಯಲಿದೆ. ಪೋಷಕರ ಪ್ರೀತಿ ಮತ್ತು ಆಶೀರ್ವಾದ ಪಡೆಯುತ್ತೀರಿ. ನೀವು ಐಷಾರಾಮಿ ಜೀವನವನ್ನು ಆನಂದಿಸುವಿರಿ. ಸಂಗಾತಿಯೊಂದಿಗಿನ  ಪ್ರಣಯ ಸಂಬಂಧವು ಸಿಹಿಯಾಗಿರುತ್ತದೆ. ಉದ್ಯೋಗದಲ್ಲಿ ಬಲವಾದ ಆರ್ಥಿಕ ಲಾಭ ಇರುತ್ತದೆ. ಕನ್ಯಾ ರಾಶಿಯ ಚಿಹ್ನೆಗಳು ಕೆಲಸದ ಸ್ಥಳದಲ್ಲಿ ವೇತನ ಹೆಚ್ಚಳವನ್ನು ಪಡೆಯುವ ಸಾಧ್ಯತೆ  ಇದೆ. 

ಧನು ರಾಶಿ:
ಶುಕ್ರ ಗ್ರಹದ ರಾಶಿ ಬದಲಾವಣೆಯಿಂದ ಈ ಅವಧಿಯಲ್ಲಿ ಆರೋಗ್ಯ ಉತ್ತಮವಾಗಿರುತ್ತದೆ. ನವವಿವಾಹಿತರ ಜೀವನದಲ್ಲಿ ಪ್ರೀತಿ ಅರಳುತ್ತದೆ. ಹೂಡಿಕೆಗಳು ಆರ್ಥಿಕ ಲಾಭವನ್ನು ತರುತ್ತವೆ. ವೈವಾಹಿಕ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಹಠಾತ್ ಧನಲಾಭವಿದೆ. ವ್ಯಾಪಾರದಲ್ಲಿ ಧನಲಾಭವಿದೆ. ಸಂತೋಷದ ಮಾರ್ಗಗಳು ಹೆಚ್ಚಾಗುತ್ತವೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More