Home> Lifestyle
Advertisement

Shani Gochar: 2023ರಲ್ಲಿ 15 ದಿನಗಳಲ್ಲಿ ಎರಡು ಬಾರಿ ಶನಿಯ ಸ್ಥಾನ ಬದಲಾವಣೆ, ಈ ರಾಶಿಯವರಿಗೆ ಸಖತ್ ಲಾಭ

Saturn Transit 2023 Effects: ವೈದಿಕ ಜ್ಯೋತಿಷ್ಯದ ಪ್ರಕಾರ,  ನವಗ್ರಹಗಳಲ್ಲಿ ಶನಿ ಗ್ರಹಕ್ಕೆ ಹೆಚ್ಚಿನ ಮಹತ್ವವಿದೆ. ಹೊಸ ವರ್ಷ 2023ರಲ್ಲಿ ಶನಿಯ ಸ್ಥಾನದಲ್ಲಿನ ಬದಲಾವಣೆಯು ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರಿಗೆ ಮಂಗಳಕರ ಫಲಿತಾಂಶಗಳನ್ನು ತರಲಿದೆ ಎಂದು ಹೇಳಲಾಗುತ್ತಿದೆ. 2023ರಲ್ಲಿ ಶನಿ ದೇವನ ಕೃಪಾಕಟಾಕ್ಷ ಯಾವ ರಾಶಿಯವರ ಮೇಲೆ ಇರಲಿದೆ ಎಂದು ತಿಳಿಯೋಣ.

Shani Gochar: 2023ರಲ್ಲಿ 15 ದಿನಗಳಲ್ಲಿ ಎರಡು ಬಾರಿ ಶನಿಯ ಸ್ಥಾನ ಬದಲಾವಣೆ, ಈ ರಾಶಿಯವರಿಗೆ ಸಖತ್ ಲಾಭ

Saturn Transit 2023 Effects: ವೈದಿಕ ಜ್ಯೋತಿಷ್ಯದ ಪ್ರಕಾರ,  2023 ರ ಆರಂಭದಲ್ಲಿ, ಗ್ರಹಗಳ ಸ್ಥಾನದಲ್ಲಿ ಪ್ರಮುಖ ಬದಲಾವಣೆಗಳು ಸಂಭವಿಸಲಿವೆ. ಇದರಲ್ಲಿ ಶನಿಯ ಸ್ಥಾನ ಬಹಳ ಮುಖ್ಯವಾಗಲಿದೆ. ಜನವರಿ 17, 2023 ರಂದು, ಶನಿಯು ರಾಶಿಚಕ್ರವನ್ನು ಬದಲಾಯಿಸುವ ಮೂಲಕ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಅದರ ನಂತರ ಶನಿಯು ಫೆಬ್ರವರಿ 3 ರಂದು ಅಸ್ತಮಿಸಲಿದ್ದಾನೆ. 15 ದಿನಗಳಲ್ಲಿ ಎರಡು ಬಾರಿ ಶನಿಯ ಸ್ಥಾನದಲ್ಲಿ ಬದಲಾವಣೆಯು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡಲಿದೆ. ಆದರೆ, ಹದಿನೈದು ದಿನಗಳ ಅಂತರದಲ್ಲಿ ಎರಡು ಬಾರಿ ತನ್ನ ಸಂಚಾರ ಬದಲಾಯಿಸಲಿರುವ ಶನಿಯು ಕೆಲವು ರಾಶಿಯವರಿಗೆ ಬಂಪರ್ ಲಾಭವನ್ನು ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...

2023ರ ಆರಂಭದಲ್ಲಿ ಈ ರಾಶಿಯವರಿಗೆ ಭಾರೀ ಲಾಭ ನೀಡಲಿದ್ದಾನೆ ಶನಿದೇವ:

ವೃಷಭ ರಾಶಿ: 
2023 ರಲ್ಲಿ ಶನಿಯ ರಾಶಿ ಬದಲಾವಣೆ ಮತ್ತು ನಂತರ ಶನಿಯ ಅಸ್ತಮ ಸ್ಥಿತಿಯು ವೃಷಭ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಸಮಯದಲ್ಲಿ ವೃಷಭ ರಾಶಿಯ ಜನರಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ನೀವು ಯಶಸ್ಸಿನ ಎತ್ತರವನ್ನು ಮುಟ್ಟುತ್ತೀರಿ ಎಂದು ಹೇಳಬಹುದು. ಸಮಾಜದಲ್ಲಿ ನಿಮ್ಮ ಪ್ರಭಾವ ಮತ್ತು ಗೌರವ ಹೆಚ್ಚಾಗುತ್ತದೆ. ನಿಮ್ಮ ಆದಾಯದಲ್ಲಿ ಗಮನಾರ್ಹ ಹೆಚ್ಚಳ ಕಂಡುಬರುತ್ತದೆ. ಈ ರಾಶಿಯ ವರ್ತಕರು ಕೂಡ ಸಾಕಷ್ಟು ಲಾಭ ಗಳಿಸುತ್ತಾರೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. 

ಇದನ್ನೂ ಓದಿ- Guru Margi 2022: ಗುರುವಿನ ನೇರ ನಡೆಯಿಂದ 'ಗಜಕೇಸರಿ ಯೋಗ', ಈ 3 ರಾಶಿಯವರಿಗೆ ಭಾರೀ ಅದೃಷ್ಟ

ತುಲಾ ರಾಶಿ: 
ಶನಿ ದೇವನು ಯಾವಾಗಲೂ ತುಲಾ ರಾಶಿಯವರಿಗೆ ದಯೆ ತೋರುತ್ತಾನೆ. 2023ರಲ್ಲಿ ಶನಿಯ ಸಂಕ್ರಮಣ ಮತ್ತು ಶನಿಯ ಅಸ್ತಮ ಸ್ಥಿತಿಯ ಸಮಯವು ತುಲಾ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಈ ಜನರು ಶಿಕ್ಷಣ ಮತ್ತು ವೃತ್ತಿಯಲ್ಲಿ ಬಲವಾದ ಪ್ರಯೋಜನಗಳನ್ನು ಪಡೆಯುತ್ತಾರೆ. ದೊಡ್ಡ ಸಂಸ್ಥೆಯಲ್ಲಿ ಪ್ರವೇಶ ಪಡೆಯಬಹುದು. ಹೊಸ ನೌಕರಿ, ಬಡ್ತಿ, ಇನ್ಕ್ರಿಮೆಂಟ್ ಸಿಗುವ ಸಂಪೂರ್ಣ ಅವಕಾಶಗಳಿವೆ. ವ್ಯಾಪಾರ ವೃದ್ಧಿಯಾಗಲಿದೆ. ಹೊಸ ಮನೆ ಅಥವಾ ಕಾರು ಖರೀದಿಸುವ ಸಾಧ್ಯತೆಗಳಿವೆ. 

ಇದನ್ನೂ ಓದಿ- Sun Transit: 2022ರ ಅಂತ್ಯದವರೆಗೆ ಈ ಜನರಿಗೆ ದಯೆ ತೋರುತ್ತಾನೆ ಸೂರ್ಯ ದೇವ

ಮಕರ ರಾಶಿ: 
2023ರಲ್ಲಿ, ಮಕರ ರಾಶಿಯನ್ನು ತೊರೆದ ನಂತರ, ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿ ನಂತರ ಅಸ್ತಮಿಸುತ್ತಾನೆ. ಈ ಸಮಯದಲ್ಲಿ ಮಕರ ರಾಶಿಯವರಿಗೆ ಶುಭ ಫಲ ಸಿಗಲಿದೆ. ಸ್ಥಗಿತಗೊಂಡಿರುವ ಕಾಮಗಾರಿಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ. ಹಣವು ಪ್ರಯೋಜನಕಾರಿಯಾಗಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಬಲವಿರುತ್ತದೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯಲಿದೆ. ಹೊಸ ಅವಕಾಶಗಳು ಸಿಗಬಹುದು. ವ್ಯಾಪಾರದಲ್ಲಿ ಉತ್ಕರ್ಷವಿರುತ್ತದೆ. ದೊಡ್ಡ ಒಪ್ಪಂದವನ್ನು ಖಚಿತಪಡಿಸಬಹುದು. ಒಟ್ಟಾರೆಯಾಗಿ, ಶನಿಯು ಪ್ರತಿಯೊಂದು ವಿಷಯದಲ್ಲೂ ಈ ರಾಶಿಯವರಿಗೆ ಸಖತ್ ಲಾಭವನ್ನು ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More