Home> Lifestyle
Advertisement

Shani Dev Plant: ಶಮಿ ಗಿಡಕ್ಕೆ ಈ ಒಂದು ವಸ್ತು ಕಟ್ಟಿದ್ರೆ ಶನಿದೇವನ ಆಶೀರ್ವಾದ ನಿಮಗೆ ಸಿಗುತ್ತೆ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶಮಿ ಗಿಡ ಶನಿ ದೇವರಿಗೆ ಹಾಗೂ ಶಿವನಿಗೆ ತುಂಬಾ ಪ್ರಿಯವಾಗಿದೆ. ಶಮಿ ಸಸ್ಯದ ಕೆಲವು ಪರಿಹಾರಗಳು ಶನಿ ದೇವ ಮತ್ತು ರಾಹುವಿನ ಕೋಪದಿಂದ ವ್ಯಕ್ತಿಯನ್ನು ರಕ್ಷಿಸಲು ಸಹಾಯ ಮಾಡುತ್ತದೆ.

Shani Dev Plant: ಶಮಿ ಗಿಡಕ್ಕೆ ಈ ಒಂದು ವಸ್ತು ಕಟ್ಟಿದ್ರೆ ಶನಿದೇವನ ಆಶೀರ್ವಾದ ನಿಮಗೆ ಸಿಗುತ್ತೆ!

ನವದೆಹಲಿ: ಜ್ಯೋತಿಷ್ಯದ ಪ್ರಕಾರ ವ್ಯಕ್ತಿಯ ಜೀವನದ ಮೇಲೆ ಎಲ್ಲಾ ಗ್ರಹಗಳ ಪ್ರಭಾವವು ಶುಭ ಮತ್ತು ಅಶುಭ ರೂಪದಲ್ಲಿ ಕಂಡುಬರುತ್ತದೆ. ಈ ಗ್ರಹಗಳಲ್ಲಿ ಶನಿ ಮತ್ತು ರಾಹು ಕ್ರೂರ ಮತ್ತು ಪಾಪ ಗ್ರಹಗಳಲ್ಲಿ ಒಂದಾಗಿವೆ. ಎರಡೂವರೆ ವರ್ಷಗಳಲ್ಲಿ ಶನಿಯು ತನ್ನ ರಾಶಿ ಬದಲಾಯಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಒಮ್ಮೆಯಾದರೂ ಶನಿ ದಶಾ ಎದುರಿಸಬೇಕಾಗುತ್ತದೆ. ಜ್ಯೋತಿಷ್ಯದಲ್ಲಿ ಶನಿಯನ್ನು ಮೆಚ್ಚಿಸಲು ಹಲವು ಮಾರ್ಗಗಳ ಬಗ್ಗೆ ಹೇಳಲಾಗಿದೆ. ಇವುಗಳಲ್ಲಿ ಶಮೀ ವೃಕ್ಷದ ಪೂಜೆ ಮತ್ತು ಅದಕ್ಕೆ ಸಂಬಂಧಿಸಿದ ಕ್ರಮಗಳು ಒಂದು.

ಶಮಿಯ ಈ ಪರಿಹಾರ ತುಂಬಾ ಅದ್ಭುತವಾಗಿದೆ

ಧರ್ಮಗ್ರಂಥಗಳ ಪ್ರಕಾರ ಶನಿ ದೇವನು ಶಮಿ ಸಸ್ಯಕ್ಕೆ ಸಂಬಂಧಿಸಿದೆ. ನಿತ್ಯವೂ ಶಮಿ ಗಿಡವನ್ನು ಪೂಜಿಸಿದರೆ ಶನಿದೇವನ ಜೊತೆಗೆ ಶಿವನೂ ಪ್ರಸನ್ನನಾಗುತ್ತಾನೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಶಮಿ ಗಿಡ ನೆಟ್ಟರೆ ಸುಖ, ಸಮೃದ್ಧಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ನಕಾರಾತ್ಮಕ ಶಕ್ತಿಯು ಮನೆಯಿಂದ ಹೊರಹಾಕಲ್ಪಡುತ್ತದೆ.

ಇದನ್ನೂ ಓದಿವರ್ಷದ ಮೊದಲ ಸೂರ್ಯ ಗ್ರಹಣದ ಪರಿಣಾಮ: ಈ ರಾಶಿಯವರು ತುಂಬಾ ಎಚ್ಚರಿಕೆಯಿಂದಿರಿ

ಶಮಿಯ ಗಿಡಕ್ಕೆ ಕೆಂಪು ದಾರ ಕಟ್ಟಿ

ವಾಸ್ತು ಶಾಸ್ತ್ರದ ಪ್ರಕಾರ ಜಾತಕದಲ್ಲಿ ಶನಿ ಮತ್ತು ರಾಹುವಿನ ದುಷ್ಪರಿಣಾಮ ಕಡಿಮೆ ಮಾಡಲು ಶಮಿ ಸಸ್ಯಕ್ಕೆ ಸಂಬಂಧಿಸಿದ ಪರಿಹಾರದ ಬಗ್ಗೆ ಉಲ್ಲೇಖಿಸಲಾಗಿದೆ. ಶನಿವಾರ ಅಥವಾ ಸೋಮವಾರದಂದು ಶಮಿಯ ಕೊಂಬೆಯ ಮೇಲೆ ಕೆಂಪು ಬಣ್ಣದ ದಾರ ಕಟ್ಟಬೇಕು. ಈ ಸಮಯದಲ್ಲಿ ಶನಿ ದೇವರಿಂದ ಸಂತೋಷ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿರಿ. ಈ ಪರಿಹಾರ  ಮಾಡುವುದರಿಂದ ಶನಿದೇವನು ಸಂತುಷ್ಟನಾಗುತ್ತಾನೆ. ಸಂತೋಷ ಮತ್ತು ಸಮೃದ್ಧಿಯನ್ನು ಅನುಗ್ರಹಿಸುತ್ತಾನೆ.

ರಾಹುವಿನ ಕೋಪದಿಂದ ರಕ್ಷಣೆ

ಶಮಿ ವೃಕ್ಷಕ್ಕೆ ಕೆಂಪು ಬಣ್ಣದ ದಾರವನ್ನು ಕಟ್ಟುವುದರಿಂದ ವ್ಯಕ್ತಿಯ ಜಾತಕದಲ್ಲಿ ರಾಹುವಿನ ಸ್ಥಾನವು ಬಲಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ ವ್ಯಕ್ತಿಯ ಮೇಲಾಗುವ ಅಡ್ಡ ಪರಿಣಾಮಗಳು ಸಹ ದೂರವಾಗುತ್ತವೆ.  

ಇದನ್ನೂ ಓದಿ: Mercury Transit 2023: ಬುಧ ಸಂಕ್ರಮಣದಿಂದ ಈ ರಾಶಿಯವರಿಗೆ ವೃತ್ತಿ-ವ್ಯಾಪಾರ & ಜೀವನದಲ್ಲಿ ಪ್ರಗತಿ!

ಈ ದಿಕ್ಕಿನಲ್ಲಿ ನೆಡಬೇಕು

ವಾಸ್ತು ಶಾಸ್ತ್ರದ ಪ್ರಕಾರ ನೀವು ಮನೆಯಲ್ಲಿ ಶಮಿ ಗಿಡ ನೆಡಲು ಯೋಚಿಸುತ್ತಿದ್ದರೆ, ಅದನ್ನು ಮನೆಯ ಮುಖ್ಯ ಬಾಗಿಲಿನ ಬಲಭಾಗದಲ್ಲಿ ನೆಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆಯ ಹೊರಗೆ ಜಾಗವಿಲ್ಲದಿದ್ದರೆ ಛಾವಣಿಯ ದಕ್ಷಿಣ ದಿಕ್ಕಿನಲ್ಲಿ ಅದನ್ನು ಸ್ಥಾಪಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಈ ದಿನ ಶಮಿಗಿಡ ನೆಡಬೇಕು

ಶಮಿಯ ಗಿಡವನ್ನು ಶನಿವಾರ ಅಥವಾ ವಿಜಯದಶಮಿಯ ದಿನದಂದು ನೆಟ್ಟರೆ ಶುಭವೆಂದು ವಾಸ್ತುತಜ್ಞರು ಹೇಳುತ್ತಾರೆ. ಈ ದಿನಗಳಲ್ಲಿ ಶಮಿಗಿಡವನ್ನು ನೆಡುವುದರಿಂದ ಶನಿ, ಶಿವನ ಆಶೀರ್ವಾದದೊಂದಿಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Read More