Home> Lifestyle
Advertisement

Shami Plant Tips: ಮನೆಯ ಈ ದಿಕ್ಕಿಗೆ ಶಮಿ ಗಿಡ ನೆಟ್ಟರೆ ಶನಿದೇವ ದಯೆ ತೋರುತ್ತಾನೆ!

ಶಮಿ ಗಿಡದ ವಾಸ್ತು ಸಲಹೆಗಳು: ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಶನಿ ದೇವರೊಂದಿಗೆ ಶಮಿ ಸಸ್ಯದ ಸಂಬಂಧ ಬಗ್ಗೆ ಹೇಳಲಾಗಿದೆ. ಮನೆಯಲ್ಲಿ ಸರಿಯಾದ ಜಾಗದಲ್ಲಿ ಶಮಿಯ ಗಿಡವಿದ್ದರೆ ನಿಮಗೆ ಶನಿದೇವನ ಆಶೀರ್ವಾದ ಸಿಗುತ್ತದೆ.

Shami Plant Tips: ಮನೆಯ ಈ ದಿಕ್ಕಿಗೆ ಶಮಿ ಗಿಡ ನೆಟ್ಟರೆ ಶನಿದೇವ ದಯೆ ತೋರುತ್ತಾನೆ!

ನವದೆಹಲಿ: ಹಿಂದೂ ಧರ್ಮದಲ್ಲಿ ಅನೇಕ ಮರಗಳು ಮತ್ತು ಸಸ್ಯಗಳನ್ನು ಭಕ್ತಿಯಿಂದ ಪೂಜಿಸಬೇಕೆಂದು ಹೇಳಲಾಗಿದೆ. ಈ ಮರ-ಗಿಡಗಳನ್ನು ಮನೆಯಲ್ಲಿ ನೆಡುವುದು ತುಂಬಾ ಶುಭಕರ. ಈ ಸಸ್ಯಗಳು ಮನೆಯಲ್ಲಿ ಸಕಾರಾತ್ಮಕತೆ ತರುತ್ತವೆ, ದೇವ-ದೇವತೆಗಳು ಆಶೀರ್ವಾದ ನೀಡುತ್ತವೆ ಎಂಬ ನಂಬಿಕೆಯಿದೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ತರುತ್ತದೆ. ಶಮಿ ಸಸ್ಯವು ಈ ಮಂಗಳಕರ ಸಸ್ಯಗಳಲ್ಲಿ ಒಂದಾಗಿದೆ. ಹಿಂದೂ ಧರ್ಮದಲ್ಲಿ ಶನಿ ದೇವರೊಂದಿಗೆ ಶಮಿ ಸಸ್ಯದ ಸಂಬಂಧದ ಬಗ್ಗೆ ಹೇಳಲಾಗಿದೆ. ಶನಿವಾರದಂದು ಶಮಿಯ ಗಿಡ ಪೂಜಿಸುವುದರಿಂದ ಶನಿದೇವನ ಕೃಪೆಯಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ. ಜೊತೆಗೆ ಶಿವನ ಆಶೀರ್ವಾದವೂ ದೊರೆಯುತ್ತದೆ. ಮನೆಯಲ್ಲಿ ಶಮಿ ಗಿಡವನ್ನು ನೆಟ್ಟರೆ ಸಿಗುವ ಪ್ರಯೋಜನಗಳ ಬಗ್ಗೆ ತಿಳಿಯಿರಿ.

ಇದನ್ನೂ ಓದಿ: Grah Gochar 2023: ಮುಂದಿನ 3 ದಿನಗಳಲ್ಲಿ ಈ 5 ರಾಶಿಯವರ ಅದೃಷ್ಟ ತೆರೆದುಕೊಳ್ಳಲಿದೆ!

ಶಮಿ ಗಿಡದ ಪ್ರಯೋಜನಗಳು

  • ವಾಸ್ತು ಶಾಸ್ತ್ರದ ಪ್ರಕಾರ ಸರಿಯಾದ ಜಾಗದಲ್ಲಿ ಶಮಿ ಗಿಡ ನೆಡಬೇಕು. ನಿಯಮಗಳ ಪ್ರಕಾರ ಅದನ್ನು ಸರಿಯಾಗಿ ನೋಡಿಕೊಳ್ಳುವುದು ಅವಶ್ಯಕ. 
  • ವಾರದ ಯಾವುದೇ ದಿನ ಮನೆಯಲ್ಲಿ ಶಮಿ ಗಿಡವನ್ನು ನೆಡಬಹುದು. ಆದರೆ ಶನಿವಾರ ಮನೆಯಲ್ಲಿ ಶಮಿ ಗಿಡ ನೆಟ್ಟರೆ ಶುಭಕರ. ಇದರಿಂದ ಶನಿದೇವ ಸಂತಸಗೊಳ್ಳುತ್ತಾನೆ.
  • ಶಮಿ ಗಿಡ ನೆಡುವಾಗ ಸರಿಯಾದ ದಿಕ್ಕು ನೋಡಿಕೊಳ್ಳುವುದು ಸಹ ಬಹಳ ಮುಖ್ಯ. ವಾಸ್ತು ಶಾಸ್ತ್ರದ ಪ್ರಕಾರ ಶಮಿ ಗಿಡವನ್ನು ಮನೆಯ ಪೂರ್ವ ದಿಕ್ಕಿನಲ್ಲಿ ನೆಡುವುದರಿಂದ ಬಹಳಷ್ಟು ಸಂತೋಷ ಮತ್ತು ಸಮೃದ್ಧಿ ತರುತ್ತದೆ. ಇದಲ್ಲದೇ ಶಮಿ ಗಿಡವನ್ನು ದಕ್ಷಿಣ ದಿಕ್ಕಿನಲ್ಲಿ ನೆಡಬಹುದು. ಇದಲ್ಲದೇ ಮನೆಯ ಮೇಲ್ಛಾವಣಿಯ ಮೇಲೆ ನೆಡುವುದು ಸಹ ಮಂಗಳಕರ.
  •  ಶಮಿ ಗಿಡ ನೆಡುವಾಗ ಅದನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಶನಿದೇವನಿಗೆ ಕೋಪ ಬರಬಹುದು. ಮನೆಯಲ್ಲಿ ಶಮಿಯ ಗಿಡವಿದ್ದರೆ ಪ್ರತಿ ಶನಿವಾರ ಪೂಜೆ ಮಾಡಿ ದೀಪವನ್ನು ಬೆಳಗಿಸಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಾಕಷ್ಟು ಪ್ರಗತಿ ಮತ್ತು ಸಂತೋಷವಿರುತ್ತದೆ.
  • ಶಮಿ ಗಿಡದ ಸುತ್ತಲೂ ಕಸ ಅಥವಾ ಕೊಳೆಯನ್ನು ಎಂದಿಗೂ ಬಿಡಬೇಡಿ. ಹೀಗೆ ಮಾಡುವುದರಿಂದ ಶನಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.

ಇದನ್ನೂ ಓದಿ: Vastu Tips: ಕಷ್ಟಪಟ್ಟು ಕೆಲಸ ಮಾಡಿದ್ರೂ ಕೈಯಲ್ಲಿ ಏನೂ ಉಳಿಯುತ್ತಿಲ್ಲವೇ? ಈ ಕೆಲಸ ಮಾಡಿ

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿ ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿ ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
.

Read More