Home> Lifestyle
Advertisement

Relationship Tips: ಮದುವೆಗೂ ಮುಂಚೆ ನಿಮ್ಮ ಸಂಗಾತಿ ಜೊತೆ ಈ ವಿಷಯಗಳನ್ನು ಚರ್ಚಿಸಲೇಬೇಕು!

ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ನಮ್ಮ ಜೀವನದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮದುವೆಗೆ ಮೊದಲು ನಿಮ್ಮ ಸಂಗಾತಿಯೊಂದಿಗೆ ನೀವು ಯಾವ ವಿಷಯಗಳ ಬಗ್ಗೆ ಮಾತನಾಡಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ.

Relationship Tips: ಮದುವೆಗೂ ಮುಂಚೆ ನಿಮ್ಮ ಸಂಗಾತಿ ಜೊತೆ ಈ ವಿಷಯಗಳನ್ನು ಚರ್ಚಿಸಲೇಬೇಕು!

ನವದೆಹಲಿ: ಜೀವನ ಸಂಗಾತಿಯ ಆಯ್ಕೆಯು ನಮ್ಮ ಜೀವನದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಪ್ರೇಮ ವಿವಾಹದಲ್ಲಿಯೂ ಸಹ ಕೆಲವು ಸಮಸ್ಯೆಗಳಿರುತ್ತವೆ. ಆದರೆ ಅರೇಂಜ್ಡ್ ಮ್ಯಾರೇಜ್‌ನಲ್ಲಿ, ಮದುವೆಯ ನಂತರ ಸಂಗಾತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತು ಹೊಂದಿಕೊಳ್ಳುವಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಅರೇಂಜ್ಡ್ ಮ್ಯಾರೇಜ್‌ನಲ್ಲಿ ಮದುವೆಗೆ ಮೊದಲು ಹುಡುಗಿ ಅಥವಾ ಹುಡುಗನನ್ನು ಭೇಟಿಯಾಗಲು ಕೇವಲ ಒಂದು ಅಥವಾ ಎರಡು ಅವಕಾಶವಿರುತ್ತದೆ.

ವಿವಾಹಕ್ಕೂ ಮೊದಲು ನಿಮ್ಮ ಭವಿಷ್ಯದ ಜೀವನ ಸಂಗಾತಿ ಜೊತೆಗೆ ನೀವು ಚರ್ಚಿಸಲೇಬೇಕಾದ ಕೆಲವು ವಿಷಯಗಳಿವೆ. ಏಕೆಂದರೆ ಈ ವಿಚಾರಗಳ ಬಗ್ಗೆ ಸಂಗಾತಿಯೊಂದಿಗೆ ಮಾತನಾಡದೇ ಇದ್ದರೆ ಮದುವೆಯ ನಂತರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮದುವೆಗೂ ಮೊದಲು ನಿಮ್ಮ ಸಂಗಾತಿಯೊಂದಿಗೆ ಯಾವ ವಿಷಯಗಳ ಬಗ್ಗೆ ಮಾತನಾಡಬೇಕೆಂದು ತಿಳಿದುಕೊಳ್ಳಿರಿ.

ಇದನ್ನೂ ಓದಿ: ಶ್ರಾವಣದಲ್ಲಿ ರೂಪುಗೊಳ್ಳಲಿರುವ ಗಜ ಕೇಸರಿ ಯೋಗದಿಂದ ಈ ಐದು ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ

ಸಂಗಾತಿ ಜೊತೆಗೆ ಈ ವಿಷಯಗಳ ಬಗ್ಗೆ ಮಾತನಾಡಿ  

ಕೌಟುಂಬಿಕ ಪದ್ಧತಿಗಳ ಬಗ್ಗೆ: ಪ್ರತಿಯೊಂದು ಕುಟುಂಬವು ತನ್ನದೇ ಆದ ಸಂಪ್ರದಾಯಗಳು ಮತ್ತು ಆಚಾರ-ವಿಚಾರಗಳನ್ನು ಹೊಂದಿರುತ್ತದೆ. ಹೀಗಾಗಿ ಮದುವೆಗೆ ಮೊದಲು ಹುಡುಗಿ ಅಥವಾ ಹುಡುಗ ಪರಸ್ಪರರ ಕುಟುಂಬ ಸಂಪ್ರದಾಯಗಳು, ನಂಬಿಕೆಗಳು ಮತ್ತು ಆಚರಣೆಗಳ ಬಗ್ಗೆ ಮುಕ್ತವಾಗಿ ಮಾತನಾಡಬೇಕು. ವಿಶೇಷವಾಗಿ ಕೆಲಸ ಮಾಡುವ ಹುಡುಗಿಯರು ಇದರ ಬಗ್ಗೆ ತಿಳಿದುಕೊಳ್ಳಬೇಕು. ಕುಟುಂಬದ ನಂಬಿಕೆಗಳು ಮತ್ತು ಸಂಪ್ರದಾಯಗಳನ್ನು ಪಾಲಿಸುವುದರ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಇದರಿಂದ ಮುಂಬರವು ಕೌಟುಂಬಿಕ ಸಮಸ್ಯೆಗಳಿಂದ ಪಾರಾಗಬೇಕು.

ಹಣ ಮತ್ತುವೃತ್ತಿ: ನಿಯೋಜಿತ ವಿವಾಹದ ಮೊದಲು ಹಣಕಾಸಿನ ಸಮಸ್ಯೆಗಳ ಬಗ್ಗೆ ಮಾತನಾಡುವುದು ಸಹ ಬಹಳ ಮುಖ್ಯ. ನೀವು ನಿಮ್ಮ ಭವಿಷ್ಯದ ಸಂಗಾತಿಯೊಂದಿಗೆ ವೃತ್ತಿ ಮತ್ತು ಹಣಕಾಸು ಸಂಬಂಧಿತ ವಿಷಯಗಳು ಮತ್ತು ಭವಿಷ್ಯದ ಕನಸುಗಳ ಬಗ್ಗೆ ಮಾತನಾಡಬೇಕು. ವಿಶೇಷವಾಗಿ ಹುಡುಗಿಯರು ವೃತ್ತಿಜೀವನದ ಬೆಳವಣಿಗೆ ಬಗ್ಗೆ ಹಲವಾರು ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಕೆಲಸದ ವಿಚಾರದಲ್ಲಿ ಅವರು ತಮ್ಮ ಸಂಗಾತಿ ಜೊತೆಗೆ ಪಾಲುದಾರಾಗಲು ಬಯಸುತ್ತಾರೆ. ಈ ಕುರಿತು ಮುಕ್ತವಾಗಿ ಮಾತನಾಡುವುದು ತುಂಬಾ ಮುಖ್ಯವಾಗುತ್ತದೆ.

ಇದನ್ನೂ ಓದಿ: ಹೆತ್ತವರು ಮಕ್ಕಳೆದುರು ಈ ನಾಲ್ಕು ಕೆಲಸಗಳನ್ನು ಮಾಡಬಾರದು .! ಮುಗ್ದ ಮನಸ್ಸಿಗಾಗುವುದು ಆಘಾತ

ಉದ್ಯೋಗ ಮತ್ತು ಸಮಯ: ಈ ವಿಷಯಗಳಿಗೆ ಸಂಬಂಧಿಸಿದಂತೆ ಪತಿ-ಪತ್ನಿಯರ ನಡುವೆ ಅನೇಕ ಬಾರಿ ಉದ್ವಿಗ್ನತೆ ಉಂಟಾಗುತ್ತದೆ. ಕೆಲಸ ಅಥವಾ ಸಮಯ ನೀಡುವುದರ ಸಮಸ್ಯೆಯೇ ಬಹುತೇಕರ ದೊಡ್ಡ ಸಮಸ್ಯೆಯಾಗಿರುತ್ತದೆ. ಕೆಲವು ಉದ್ಯೋಗ ಕ್ಷೇತ್ರಗಳಲ್ಲಿ ಹಗಲು ಮತ್ತು ರಾತ್ರಿ ಪಾಳಿ ಎರಡರಲ್ಲೂ ಕೆಲಸ ಮಾಡಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಈಗ ಹಗಲು ಪಾಳಿಯಲ್ಲಿದ್ದರೂ ಭವಿಷ್ಯದಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಸಾಧ್ಯತೆಯಿದೆ. ಆದ್ದರಿಂದ ಈ ವಿಷಯವನ್ನು ಮದುವೆಯ ಮೊದಲು ಚರ್ಚಿಸಬೇಕು. ಮುಕ್ತವಾಗಿ ಮಾತನಾಡುವ ಮೂಲಕ ನಿಮ್ಮ ನಿಮ್ಮ ಸಂಗಾತಿಯ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಪರಸ್ಪರ ಒಬ್ಬರಿಗೊಬ್ಬರನ್ನು ಅರ್ಥೈಸಿಕೊಂಡು ಮುಂದುವರೆಯಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More