Home> Lifestyle
Advertisement

ಮುಂದಿನ ಒಂದು ವರ್ಷಗಳವರೆಗೆ ಈ ಮೂರು ರಾಶಿಯವರ ಮೇಲೆ ಕೃಪೆ ತೋರಲಿದ್ದಾನೆ ರಾಹು ..!

 ರಾಹು ಅಂದ ಕೂಡಲೇ ಮೊದಲು ಮನಸ್ಸಿನಲ್ಲಿ ಭಯದ ಭಾವವೇ ಮೂಡುತ್ತದೆ. ಆದರೆ ಮೇಷ ರಾಶಿಯಲ್ಲಿರುವ ರಾಹುವು 3 ರಾಶಿಯವರಿಗೆ ಶುಭ ಫಲಗಳನ್ನು ನೀಡುತ್ತಾನೆ. 
 

ಮುಂದಿನ ಒಂದು ವರ್ಷಗಳವರೆಗೆ ಈ ಮೂರು ರಾಶಿಯವರ ಮೇಲೆ ಕೃಪೆ ತೋರಲಿದ್ದಾನೆ ರಾಹು ..!

ಬೆಂಗಳೂರು : ಶನಿಯ ನಂತರ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಎಂದರೆ ರಾಹು. ಒಂದೂವರೆ ವರ್ಷದ ಬಳಿಕ ರಾಹು ರಾಶಿಯನ್ನು ಬದಲಾಯಿಸುತ್ತಾನೆ. ಈ ವರ್ಷ, 12 ಏಪ್ರಿಲ್ 2022 ರಂದು, ರಾಹು ಸಂಕ್ರಮಣದ ನಂತರ ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ. ರಾಹು ಈ ರಾಶಿಯಲ್ಲಿ ಅಕ್ಟೋಬರ್ 30, 2023 ರವರೆಗೆ ಇರಲಿದ್ದಾನೆ. ಛಾಯಾ  ಗ್ರಹಗಳಾದ ರಾಹು-ಕೇತುವಿನ ನ್ನೊಂದು ವಿಶೇಷವೆಂದರೆ ಅವು ಯಾವಾಗಲೂ ಹಿಮ್ಮುಖವಾಗಿ ಚಲಿಸುತ್ತವೆ. ರಾಹು ಅಂದ ಕೂಡಲೇ ಮೊದಲು ಮನಸ್ಸಿನಲ್ಲಿ ಭಯದ ಭಾವವೇ ಮೂಡುತ್ತದೆ. ಆದರೆ ಮೇಷ ರಾಶಿಯಲ್ಲಿರುವ ರಾಹುವು 3 ರಾಶಿಯವರಿಗೆ ಶುಭ ಫಲಗಳನ್ನು ನೀಡುತ್ತಾನೆ. 

ರಾಹು 3 ರಾಶಿಗಳ ಮೇಲೆ ಕೃಪೆ ತೋರಲಿದ್ದಾನೆ ರಾಹು :  
ಮಿಥುನ: ಮಿಥುನ ರಾಶಿಯವರಿಗೆ ರಾಹು ಸಂಕ್ರಮಣವು ತುಂಬಾ ಶುಭವಾಗಿ ಪರಿಣಮಿಸಲಿದೆ. ಅಕ್ಟೋಬರ್ 2023 ರವರೆಗೆ ಈ ರಾಶಿಯವರ ಮೇಲೆ ಹಣದ ಮಳೆಯೇ ಆಗಲಿದೆ. ಅವರು ಅನಿರೀಕ್ಷಿತ ಲಾಭವನ್ನೂ ಪಡೆಯುತ್ತಾರೆ. ಉದ್ಯೋಗ-ವ್ಯವಹಾರದಲ್ಲೂ ಯಶಸ್ಸು ಸಿಗಲಿದೆ. ಈ ಬಾರಿ ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭವಾಗಲಿದೆ. ಹೂಡಿಕೆ ಮಾಡಲು ಇದು ಉತ್ತಮ ಸಮಯ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಲಾಭವಾಗಲಿದೆ. ರಾಜಕೀಯದಲ್ಲಿ ಸಕ್ರಿಯವಾಗಿರುವವರಿಗೆ ಈ ಸಮಯದಲ್ಲಿ ಪ್ರಗತಿ ಸಿಗಲಿದೆ. ದೊಡ್ಡ ಸ್ಥಾನಮಾನ ಕೂಡಾ ಲಭಿಸಲಿದೆ.  

ಇದನ್ನೂ ಓದಿ : Zodiac Sign: ಒಂದೇ ಸಂಬಂಧದಲ್ಲಿ ಮುಂದುವರೆಯಲು ಇಷ್ಟಪಡುವುದಿಲ್ಲ ಈ ರಾಶಿಯ ಜನರು

ಕರ್ಕ ರಾಶಿ: ರಾಹುವಿನ ರಾಶಿ ಬದಲಾವಣೆಯು ಕರ್ಕ ರಾಶಿಯವರಿಗೆ ವರದಾನವಾಗಿರಲಿದೆ. ಅವರು ಉದ್ಯೋಗದಲ್ಲಿ ಲಾಭ ಗಳಿಸಲಿದ್ದಾರೆ. ಉದ್ಯೋಗ ಬದಲಾವಣೆಯ ಸಾಧ್ಯತೆಗಳಿವೆ. ಬಡ್ತಿ-ಇನ್ಕ್ರಿಮೆಂಟ್ ಸಿಗುವ ಎಲ್ಲಾ ಸಾಧ್ಯತೆಗಳಿವೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ, ಅಕ್ಟೋಬರ್ 2023 ರವರೆಗೆ ಉತ್ತಮ ಸಮಯ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ.  

ಮೀನ ರಾಶಿ : ಮೀನ ರಾಶಿಯವರಿಗೆ ಮೇಷ ರಾಶಿಯಲ್ಲಿ ರಾಹುವಿನ ಪ್ರವೇಶವು ಬಹಳಷ್ಟು ಹಣವನ್ನು ತರುತ್ತದೆ. ಇದ್ದಕ್ಕಿದ್ದಂತೆ ಈ ರಾಶಿಯವರಿಗೆ ಯಾವುದೋ ಮೂಲದಿಂದ ಹಣ ಬರುತ್ತದೆ. ಇದರೊಂದಿಗೆ ಸ್ಥಗಿತಗೊಂಡ ಹಣವೂ ದೊರೆಯಲಿದೆ. ಇದರಿಂದ ಆರ್ಥಿಕ ಸ್ಥಿತಿ  ಸುಧಾರಿಸುತ್ತದೆ. ಇದಲ್ಲದೇ ಉದ್ಯೋಗ-ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ರಹಸ್ಯ ಶತ್ರುಗಳ ನಾಶವಾಗಲಿದೆ.  

ಇದನ್ನೂ ಓದಿ : ಜುಲೈ 2 ರಿಂದ ಈ ನಾಲ್ಕು ರಾಶಿಯವರ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ನೀಡಲಿದ್ದಾರೆ ಬುಧ ಮತ್ತು ಆದಿತ್ಯ

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More