Home> Lifestyle
Advertisement

ಈ ನಾಲ್ಕು ರಾಶಿಯವರ ಅದೃಷ್ಟ ಬೆಳೆಗಲಿದ್ದಾನೆ ರಾಹು..!

ಗ್ರಹಗಳು ಮತ್ತು ನಕ್ಷತ್ರಪುಂಜಗಳ ದೃಷ್ಟಿಕೋನದಿಂದ 2022 ರ ವರ್ಷವು ಬಹಳ ಮುಖ್ಯವಾಗಿದೆ. ಶನಿಯ ಹೊರತಾಗಿ, ರಾಹು-ಕೇತು ಸೇರಿದಂತೆ ಅನೇಕ ದೊಡ್ಡ ಗ್ರಹಗಳು ಈ ವರ್ಷ ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸುತ್ತಿವೆ. 

 ಈ ನಾಲ್ಕು ರಾಶಿಯವರ ಅದೃಷ್ಟ ಬೆಳೆಗಲಿದ್ದಾನೆ ರಾಹು..!

ಬೆಂಗಳೂರು : ಜ್ಯೋತಿಷ್ಯದಲ್ಲಿ (Astrology) ಯಾವುದೇ ಗ್ರಹದ ಸಂಕ್ರಮಣವು ಎಲ್ಲಾ 12 ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಜ್ಯೋತಿಷಿಗಳ ಪ್ರಕಾರ,  ಜಾತಕದಲ್ಲಿ ಇರುವ ಗ್ರಹಗಳ ಸ್ಥಾನಕ್ಕಿಂತ ಗ್ರಹಗಳ ಬದಲಾವಣೆಯು ವ್ಯಕ್ತಿಯ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಗ್ರಹಗಳು ಮತ್ತು ನಕ್ಷತ್ರಪುಂಜಗಳ ದೃಷ್ಟಿಕೋನದಿಂದ 2022 ರ ವರ್ಷವು ಬಹಳ ಮುಖ್ಯವಾಗಿದೆ (Planet Transit). ಶನಿಯ ಹೊರತಾಗಿ, ರಾಹು-ಕೇತು ಸೇರಿದಂತೆ ಅನೇಕ ದೊಡ್ಡ ಗ್ರಹಗಳು ಈ ವರ್ಷ ತಮ್ಮ ರಾಶಿಚಕ್ರ ಚಿಹ್ನೆಗಳನ್ನು (Zodiac Sign)ಬದಲಾಯಿಸುತ್ತಿವೆ. ಸುಮಾರು 18 ತಿಂಗಳ ನಂತರ, ಏಪ್ರಿಲ್ 12 ರಂದು, ರಾಹು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ.  

ಮಿಥುನ  :  ರಾಹು ಮಿಥುನ ರಾಶಿಚಕ್ರದ (Gemini) 11ನೇ ಮನೆಯಲ್ಲಿ ಸಾಗುತ್ತಾನೆ. ರಾಹುವಿನ ರಾಶಿ (Rahu Transit) ಬದಲಾವಣೆಯು  ಈ ರಾಶಿಯವರ ಆರ್ಥಿಕ ಸ್ಥಿತಿಯ ಮೇಲೆ ಭಾರೀ ಪರಿಣಾಮ ಬೀರಲಿದೆ. ಉದ್ಯೋಗಸ್ಥರಿಗೆ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ರಾಹು-ಕೇತು ಸಂಚಾರವು ನಿಮಗೆ ಲಾಭದಾಯಕವಾಗಿ ಪರಿಣಮಿಸಲಿದೆ (Rahu Ketu Transit). 

ಇದನ್ನೂ ಓದಿ : Hindu New Year 2022: ಏಪ್ರಿಲ್ 2 ರಿಂದ ಹಿಂದೂ ಹೊಸ ವರ್ಷ ಪ್ರಾರಂಭ, ದ್ವಾದಶ ರಾಶಿಗಳ ಯುಗಾದಿ ಫಲಾಫಲ

ಕರ್ಕ ರಾಶಿ :  ರಾಹು ಕರ್ಕಾಟಕ ರಾಶಿಯ (Cancer) 10 ನೇ ಮನೆಯಲ್ಲಿ ಸಾಗುತ್ತಿದ್ದಾನೆ . 10 ನೇ ಮನೆಯಲ್ಲಿ ರಾಹು ಸಂಚಾರವು ನಿಮ್ಮ ಜೀವನದ ಸೌಕರ್ಯಗಳನ್ನು ಹೆಚ್ಚಿಸುತ್ತದೆ. ಆರ್ಥಿಕ ಭಾಗವು ಬಲವಾಗಿರುತ್ತದೆ. ವ್ಯಾಪಾರಸ್ಥರಿಗೆ ಉತ್ತಮ ಲಾಭ ಮತ್ತು ಪ್ರಗತಿಯ  ಅವಕಾಶಗಳು ಹೆಚ್ಚಿವೆ. ಕೆಲಸ ಮಾಡುವ ಜನರು ಕೆಲಸದ ಸ್ಥಳದಲ್ಲಿ ಗೌರವ  ಪಡೆಯುತ್ತಾರೆ. ರಾಹು-ಕೇತು ಸಂಚಾರವು (Rahu Ketu Transit)ಕರ್ಕಾಟಕ ರಾಶಿಯವರಿಗೆ ಲಾಭದಾಯಕವಾಗಿರಲಿದೆ. 

ಕನ್ಯಾ ರಾಶಿ : ರಾಹು ಕನ್ಯಾ ರಾಶಿಯ (Virgo) ಎಂಟನೇ ಮನೆಯಲ್ಲಿ ಸಂಚಾರ ಮಾಡಲಿದ್ದಾನೆ.  ಈ ಕಾರಣದಿಂದಾಗಿ ಹಠಾತ್ ವಿತ್ತೀಯ ಲಾಭವಾಗುವ ಸಾಧ್ಯತೆಗಳಿವೆ. ಷೇರು ಮಾರುಕಟ್ಟೆ  ಇತ್ಯಾದಿಗಳಿಂದ ಲಾಭವಾಗುವ ಸಾಧ್ಯತೆ ಹೆಚ್ಚಿದೆ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಯೂ ಇದೆ. ವ್ಯಾಪಾರಿಗಳಿಗೆ ಉತ್ತಮ ಲಾಭ ಮತ್ತು ಯಶಸ್ಸನ್ನು ಪಡೆಯುವ ಲಕ್ಷಣಗಳು ಅಧಿಕವಾಗಿರುತ್ತದೆ. 

ಇದನ್ನೂ ಓದಿ : ಸೂರ್ಯನ ಕೃಪೆಯಿಂದ ಏಪ್ರಿಲ್ 13 ರವರೆಗೆ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ

ವೃಶ್ಚಿಕ ರಾಶಿ : ರಾಹು ವೃಶ್ಚಿಕ ರಾಶಿಯ (Scorpio) 6ನೇ ಮನೆಯಲ್ಲಿ ಸಂಚರಿಸುತ್ತಿದ್ದಾನೆ.  ಈ ಸಂಕ್ರಮಣ ಅವಧಿಯಲ್ಲಿ ಲಕ್ಷ್ಮೀಯ (Godess Lakshmi) ವಿಶೇಷ ಅನುಗ್ರಹ ಇವರ ಮೇಲಿರುತ್ತದೆ. ವೃತ್ತಿಜೀವನದ ದೃಷ್ಟಿಯಿಂದ ಉತ್ತಮ ಅವಕಾಶಗಳು ಸಿಗುತ್ತವೆ. ಬಹಳ ದಿನಗಳಿಂದ ಸಿಕ್ಕಿ ಹಾಕಿಕೊಂಡಿರುವ ಹಣ ಕೈ ಸೇರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಒಳ್ಳೆಯ ಸುದ್ದಿ ಪಡೆಯಲಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More