Home> Lifestyle
Advertisement

ಪ್ರಮೋಶನ್, ಹಣ ಎಲ್ಲವೂ ಸಿಗಲಿದೆ, ಈ ರಾಶಿಗಳ ಭಾಗ್ಯದ ಬಾಗಿಲು ತೆರೆಯಲಿದೆ

ಈ ರಾಶಿಚಕ್ರದ ಜನರ ಆರ್ಥಿಕ ಸ್ಥಿತಿಯಲ್ಲಿ ಗಣನೀಯ ಬದಲಾವಣೆಯಾಗಲಿದೆ. ಉದ್ಯೋಗದಲ್ಲಿ ಪ್ರಮುಖ ಬಡ್ತಿ ಕೂಡಾ ಸಿಗಬಹುದು.

ಪ್ರಮೋಶನ್,  ಹಣ ಎಲ್ಲವೂ ಸಿಗಲಿದೆ, ಈ ರಾಶಿಗಳ ಭಾಗ್ಯದ ಬಾಗಿಲು ತೆರೆಯಲಿದೆ

ನವದೆಹಲಿ : ವರ್ಷದ ಪ್ರತಿ ತಿಂಗಳು ವಿಶೇಷವಾಗಿರುತ್ತದೆ.  ಈ ತಿಂಗಳುಗಳಲ್ಲಿ ಬದಲಾಗುತ್ತಿರುವ ಗ್ರಹಗಳ ಸ್ಥಿತಿಗಳು ಕೆಲವು ರಾಶಿಗಳ ಸಮಯವನ್ನು ಬದಲಿಸುತ್ತದೆ. ಇನ್ನು ಕೆಲವು ರಾಶಿಗಳಿಗೆ ಇದು ಕೆಟ್ಟ ಫಲವನ್ನೂ ನೀಡಬಹುದು. ಜ್ಯೋತಿಷ್ಯ(Astrology)  ಲೆಕ್ಕಾಚಾರದ ಪ್ರಕಾರ, ಸೆಪ್ಟೆಂಬರ್ ತಿಂಗಳು ಕೆಲವು ರಾಶಿಚಕ್ರದ (Zodiac sign) ಜನರಿಗೆ ಬಹಳ ವಿಶೇಷವಾಗಿದೆ. ಈ ರಾಶಿಚಕ್ರದ ಜನರ ಆರ್ಥಿಕ ಸ್ಥಿತಿಯಲ್ಲಿ ಗಣನೀಯ ಬದಲಾವಣೆಯಾಗಲಿದೆ. ಉದ್ಯೋಗದಲ್ಲಿ ಪ್ರಮುಖ ಬಡ್ತಿ ಕೂಡಾ ಸಿಗಬಹುದು. ಹಾಗಿದ್ದರೆ ಆ ಅದೃಷ್ಟದ ರಾಶಿ ಯಾವುದು ನೋಡೋಣ. . 

 ಈ ತಿಂಗಳು ಬದಲಾಗುತ್ತದೆ ಈ ರಾಶಿಯವರ ಭವಿಷ್ಯ :  
ಕರ್ಕ: ಈ ರಾಶಿಚಕ್ರದ (Zodiac sign) ಜನರಿಗೆ ಈ ಸಮಯದಲ್ಲಿ ಸಾಕಷ್ಟು ಹಣ ಲಭಿಸುತ್ತದೆ. ಅವರು ಬಹಳ ಸಮಯದಿಂದ ಕಾಯುತ್ತಿದ್ದ ಕೆಲಸ ಪೂರ್ಣಗೊಳ್ಳಲಿದೆ. ಮನೆಯಲ್ಲಿ ಕೆಲವು ಶುಭ ಕಾರ್ಯಗಳೂ ನೆರವೇರಬಹುದು. 

ಇದನ್ನೂ  ಓದಿ : Ganesh Chaturthi 2021: ಚತುರ್ಥಿಯಂದು ಗಣೇಶನಿಗೆ ಪ್ರಿಯವಾದ ಈ ವಸ್ತುಗಳನ್ನು ಅರ್ಪಿಸಿದರೆ ಈಡೇರಲಿದೆ ಮನೋಕಾಮನೆ

ಸಿಂಹ (Leo) : ಈ ರಾಶಿಯ ಜನರು ಬಯಸಿದ ಯಶಸ್ಸನ್ನು ಪಡೆಯುತ್ತಾರೆ. ಆದರೆ ಇದಕ್ಕಾಗಿ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಅರ್ಥಿಕವಾಗಿ ಸಾಕಷ್ಟು ಪ್ರಯೋಜನಕಾರಿಯಾಗಲಿದೆ. ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ. 

ತುಲಾ (Libra) : ಈ ರಾಶಿಯ ಜನರ ವೃತ್ತಿಜೀವನಕ್ಕೆ ಈ ಸಮಯ ಅತ್ಯುತ್ತಮವಾಗಿರುತ್ತದೆ. ಅದು ಉದ್ಯೋಗವಾಗಲಿ ಅಥವಾ ವ್ಯಾಪಾರವಾಗಲಿ, ಎರಡರಲ್ಲೂ ಲಾಭವಿರುತ್ತದೆ. 

ಧನು (sagittarius) : ಈ ರಾಶಿಯ ಜನರು ಎಲ್ಲಾ ಕ್ಷೇತ್ರದಲ್ಲಿ ಪ್ರಗತಿ ಮತ್ತು ಲಾಭಗಳನ್ನು ಪಡೆಯುತ್ತಾರೆ. ಅವರು ಯಾವುದೇ ಹೊಸ ಕೆಲಸ ಅಥವಾ ಪಾಲುದಾರಿಕೆಯನ್ನು ಪ್ರಾರಂಭಿಸಬಹುದು. ತಿಂಗಳ ದ್ವಿತೀಯಾರ್ಧವು ತುಂಬಾ ಕಾರ್ಯನಿರತವಾಗಿರುತ್ತದೆ. 

ಇದನ್ನೂ  ಓದಿ : Lal Kitab Remedies: ಗ್ರಹದೋಷ ಅಥವಾ ಅಸಾಧ್ಯ ರೋಗಗಳೆ ಆಗಿರಲಿ, ಈ ಉಪಾಯ ಅನುಸರಿಸಿದರೆ ಸಂಕಷ್ಟ ಪರಿಹಾರ

ಕುಂಭ (Aquarius) : ಈ ರಾಶಿಯ ಜನರು ಎಲ್ಲಾ ಸವಾಲುಗಳನ್ನು ಜಯಿಸಿ ಯಶಸ್ಸನ್ನು ಸಾಧಿಸುತ್ತಾರೆ. ಆರ್ಥಿಕ ಸ್ಥಿತಿಯೂ ಬಲವಾಗಿರುತ್ತದೆ. ಕೆಲವು ಹೊಸ ಕೆಲಸಗಳನ್ನು ಮಾಡಬಹುದು. ಕಾರ್ಯನಿರತತೆ ಹೆಚ್ಚಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More