Home> Lifestyle
Advertisement

ಮನೆಯ ಈ ದಿಕ್ಕಿನಲ್ಲಿ ಪಾರಿಜಾತ ಗಿಡವಿದ್ದರೆ ಸಾಕ್ಷಾತ್ ಲಕ್ಷ್ಮೀಯೇ ನಿಮ್ಮ ಮನೆಯಲ್ಲಿ ಬಂದು ನೆಲೆಸುತ್ತಾಳೆ!

Parijata Plant Benefits: ಧರ್ಮ ಶಾಸ್ತ್ರಗಳ ಪ್ರಕಾರ ಕೆಲ ಗಿಡ-ಮರಗಳಲ್ಲಿ ಸಾಕ್ಷಾತ್ ಲಕ್ಷ್ಮಿಯೇ ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ. ಅಂತಹುದೇ ಗಿಡಗಳಲ್ಲಿ ಪಾರಿಜಾತದ ಗಿಡವೂ ಕೂಡ ಒಂದು. ಹಾಗಾದರೆ ಬನ್ನಿ ಪಾರಿಜಾತ ಗಿಡದ ವಿಶೇಷತೆ ಹಾಗೂ ಮನೆಯ ಯಾವ ದಿಕ್ಕಿನಲ್ಲಿ ಈ ಗಿಡ ಇರಬೇಕು ತಿಳಿದುಕೊಳ್ಳೋಣ.
 

ಮನೆಯ ಈ ದಿಕ್ಕಿನಲ್ಲಿ ಪಾರಿಜಾತ ಗಿಡವಿದ್ದರೆ ಸಾಕ್ಷಾತ್ ಲಕ್ಷ್ಮೀಯೇ ನಿಮ್ಮ ಮನೆಯಲ್ಲಿ ಬಂದು ನೆಲೆಸುತ್ತಾಳೆ!

Parijata Plant Benefits - ಪ್ರತಿಯೊಂದು ವಸ್ತುವನ್ನು ವಾಸ್ತುವಿನ ಪ್ರಕಾರ ಇರಿಸಲಾದರೆ ಮನೆಯಲ್ಲಿ ಸುಖ ಸಮೃದ್ಧಿಯ ಆಗಮನವಾಗುತ್ತದೆ. ಈ ರೀತಿ ಮಾಡುವುದರಿಂದ ಕೇವಲ ಜೀವನದ ಸಂಕಷ್ಟಗಳು ಮಾತ್ರ ದೂರವಾಗದೆ, ಮನೆಯಲ್ಲಿನ ವಾಸ್ತುದೋಷ, ಪಿತೃದೋಷ ಹಾಗೂ ಗ್ರಹಗಳ ಅಶುಭ ಪರಿಣಾಮಗಳಿಂದಲೂ ಕೂಡ ಮುಕ್ತಿ ಸಿಗುತ್ತದೆ. ಅದೇ ರೀತಿ ಮನೆಯಲ್ಲಿ ಗಿಡಗಳನ್ನು ನೆಡಲು ಕೂಡ ವಾಸ್ತುಶಾಸ್ತ್ರದಲ್ಲಿ ತನ್ನದೇ ಆದ ನಿಯಮಗಳನ್ನು ಹೇಳಲಾಗಿದೆ. ಅಷ್ಟೇ ಅಲ್ಲ ಕೆಲ ಗಿಡ-ಮರಗಳಲ್ಲಿ ಸಾಕ್ಷಾತ್ ದೇವಿ ಲಕ್ಷ್ಮಿಯೇ ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ. ಈ ಗಿಡಮರಗಳನ್ನು ಚೆನ್ನಾಗಿ ನೋಡಿಕೊಂಡರೆ, ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ ಮತ್ತು ಮನೆಯನ್ನು ಧನ-ಧಾನ್ಯದಿಂದ ತುಂಬುತ್ತಾಳೆ. ಈ ಗಿಡವನ್ನು ಪಾರಿಜಾತದ ಗಿಡ ಅಥವಾ ಹರಶಿಂಗಾರದ ಗಿಡ ಎಂದೂ ಕೂಡ ಕರೆಯಲಾಗುತ್ತದೆ. ಈ ಗಿಡದ ವಿಶೇಷತೆ ಹಾಗೂ ಈ ಗಿಡವನ್ನು ನೆಡುವ ಸರಿಯಾದ ದಿಕ್ಕು ಯಾವುದು ತಿಳಿದುಕೊಳ್ಳೋಣ ಬನ್ನಿ,

1. ತಾಯಿ ಲಕ್ಷ್ಮಿಯ ವಾಸ - ಪಾರಿಜಾತದ ಗಿಡ ತಾಯಿ ಲಕ್ಷ್ಮಿಗೆ ತುಂಬಾ ಪ್ರಿಯವಾದುದು ಎನ್ನಲಾಗುತ್ತದೆ. ಈ ಗಿಡದ ಹೂವುಗಳು ಸುತ್ತಮುತ್ತಲು ಸುವಾಸನೆಯ ಕಂಪನ್ನು ಹರಡುತ್ತವೆ ಮತ್ತು ತನ್ನಷ್ಟಕ್ಕೆ ತಾನೇ ಮರದಿಂದ ಉದುರುತ್ತವೆ. ಈ ಅಲೌಕಿಕ ಪುಷ್ಪಗಳು ಕೇವಲ ರಾತ್ರಿಯ ಹೊತ್ತು ಮಾತ್ರ ಅರಳುತ್ತವೆ. ಈ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಶಾಂತಿಯವಾತಾವರಣ ನೆಲೆಸುತ್ತದೆ. 

2. ಒತ್ತಡದಿಂದ ಮುಕ್ತಿ ನೀಡುತ್ತದೆ - ಹರಸಿಂಗಾರ ಅಥವಾ ಪಾರಿಜಾತದ ಹೂವಿನ ಪರಿಮಳದಲ್ಲಿ ಒತ್ತಡ ದೂರಗೊಳಿಸುವ ಶಕ್ತಿ ಇರುತ್ತದೆ. ಜೀವನದಿಂದ ಮಾನಸಿಕ ಸಂಕಷ್ಟಗಳು ದೂರಾಗಿ ಜೀವನದಲ್ಲಿ ಖುಷಿಗಳ ಆಗಮನವಾಗುತ್ತದೆ. ಮನೆಯ ಅಕ್ಕಪಕ್ಕದಲ್ಲಿಯೂ ಕೂಡ ಈ ಗಿಡವಿದ್ದರೆ, ಅದು ಮನಸ್ಸನ್ನು ಶಾಂತಗೊಳಿಸುತ್ತದೆ. 

3. ಮನೆಯ ಈ ದಿಕ್ಕಿನಲ್ಲಿ ಪಾರಿಜಾತದ ಗಿಡವಿರಲಿ - ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ತೊಲಗಿಸಲು ಮತ್ತು ಸಕಾರಾತ್ಮಕ ಶಕ್ತಿಯ ಸಂಚಾರವನ್ನು ಹೆಚ್ಚಿಸಲು ಪಾರಿಜಾತದ ಗಿಡವನ್ನು ಮನೆಯ ಉತ್ತರ ಅಥವಾ ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ನೆಡಬೇಕು. ಇದರಿಂದ ಮನೆಯಲ್ಲಿ ವಾದ-ವಿವಾದಗಳು ಕೊನೆಗೊಳ್ಳುತ್ತವೆ. ಕುಟುಂಬದಲ್ಲಿ ಸದಸ್ಯರ ಪ್ರಗತಿಯಾಗುತ್ತದೆ.

4. ಆರೋಗ್ಯ ಲಾಭ - ಧಾರ್ಮಿಕ ನಂಬಿಕೆಗಳ ಪ್ರಕಾರ ಮನೆಯಲ್ಲಿ ಪಾರಿಜಾತದ ಗಿಡವಿದ್ದರೆ, ಆರೋಗ್ಯ ಲಾಭ ಕೂಡ ಲಭಿಸುತ್ತದೆ ಮತ್ತು ತಾಯಿ ಲಕ್ಷ್ಮಿಯ ಕೃಪೆಯಿಂದ ದೀರ್ಘಾಯು ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. ಧಾರ್ಮಿಕ ಮಹತ್ವದ ಜೊತೆಗೆ ಆಯುರ್ವೇದದ ದೃಷ್ಟಿಯಿಂದಲೂ ಕೂಡ ಪಾರಿಜಾತ ಲಾಭಕಾರಿಯಾಗಿದೆ. ಇದರ ಸೇವನೆಯಿಂದ ಹಲವು ರೋಗಗಳು ನಿವಾರಣೆಯಾಗುತ್ತವೆ.

ಇದನ್ನೂ ಓದಿ- Buddha Purnima 2023: 130 ವರ್ಷಗಳ ಬಳಿಕ ರೂಪುಗೊಳ್ಳಲಿದೆ ಈ ಮಹಾಯೋಗ, ರಾತ್ರೋರಾತ್ರಿ ನಿಮ್ಮ ಮನೆ ಕದ ತಟ್ಟಲಿದ್ದಾಳೆ ತಾಯಿ ಲಕ್ಷ್ಮಿ!

5. ಪುರಾಣಗಳಲ್ಲಿ ಪಾರಿಜಾತ ಗಿಡದ ಮಹತ್ವ - ಧಾರ್ಮಿಕ ಪುರಾಣಗಳ ಪ್ರಕಾರ, ಸಮುದ್ರ ಮಂಥನ ವೇಳೆ ಪಾರಿಜಾತ ಗಿಡದ ಉತ್ಪತ್ತಿಯಾಗಿದೆ ಎನ್ನಲಾಗಿದೆ. ಬಳಿಕ ಇಂದ್ರದೇವ ತನ್ನ ನಂದನವನದಲ್ಲಿ ಈ ಗಿಡವನ್ನು ನೆಡುತ್ತಾನೆ. ನಂತರ ಶ್ರೀ ಕೃಷ್ಣ ಭೂಮಿಗೆ ಈ ಗಿಡವನ್ನು ತರುತ್ತಾನೆ. ನರಕಾಸುರನ ವಧೆಯ ನಂತರ ಇಂದ್ರ ದೇವ ಶ್ರೀಕೃಷ್ಣನಿಗೆ ಈ ಗಿಡದ ಹೂವನ್ನು ಕಾಣಿಕೆಯಾಗಿ ನೀಡುತ್ತಾನೆ. ಆ ಹೂವನ್ನು ಕೃಷ್ಣ ದೇವಿ ರುಕ್ಮಿಣಿಗೆ ನೀಡುತ್ತಾನೆ. ಇದರಿಂದ ಅವಳಿಗೆ ದೀರ್ಘಾಯು ಪ್ರಾಪ್ತಿಯಾಯಿತು. ಇದನ್ನು ಗಮನಿಸಿದ ಸತ್ಯಭಾಮೆ ಶ್ರೀಕೃಷ್ಣನಿಗೆ ತನಗೆ ಇಡೀ ಪಾರಿಜಾತದ ಗಿಡವೇ ಬೇಕು ಎಂಬ ಬೇಡಿಕೆಯನ್ನಿಡುತ್ತಾಳೆ. ಇದೇ ಗಿಡದ ಕಾರಣ ದೇವೇಂದ್ರ ಹಾಗೂ ಶ್ರೀಕೃಷ್ಣನ ನಡುವೆ ಯುದ್ಧ ನಡೆಯುತ್ತದೆ ಮತ್ತು ಸೋಲಿನ ಬಳಿಕ ಇಂದ್ರ ದೇವ ಈ ಗಿಡವನ್ನು ಶ್ರೀಕೃಷ್ಣನಿಗೆ ನೀಡುತ್ತಾನೆ ಹೀಗಾಗಿ ಅದು ಭೂಮಿಗೆ ಬಂತು ಎನ್ನಲಾಗುತ್ತದೆ.-

ಇದನ್ನೂ ಓದಿ-Budh Vakri 2023: 10 ದಿನಗಳ ಬಳಿಕ ಈ ರಾಶಿಯ ಜನರು ಭಾರಿ ಶ್ರೀಮಂತರಾಗಲಿದ್ದಾರೆ, ವಕ್ರಿ ಬುಧನ ಕಾರಣ ತಿಜೋರಿ ಹಣದಿಂದ ತುಂಬಿ ತುಳುಕಲಿದೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Read More