Home> Lifestyle
Advertisement

ಹಸ್ತದಲ್ಲಿ ಈ ಒಂದು ಗುರುತು ಇದ್ದ ವ್ಯಕ್ತಿ ಐಶಾರಾಮಿ ಬದುಕು ಬದುಕುತ್ತಾರೆ .!

ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಕೆಲವು ಚಿಹ್ನೆಗಳನ್ನು ಬಹಳ ಮಂಗಳಕರವೆಂದು ಹೇಳಲಾಗುತ್ತದೆ. ಯಾರ ಹಸ್ತದಲ್ಲಿ ಆ ಚಿನ್ಹೆಗಳಿರುತ್ತವೆಯೋ ಅವರನ್ನು ಅದೃಷ್ಟವಂತ ಎಂದು ಹೇಳಲಾಗುತ್ತದೆ. 
 

ಹಸ್ತದಲ್ಲಿ ಈ ಒಂದು ಗುರುತು ಇದ್ದ ವ್ಯಕ್ತಿ ಐಶಾರಾಮಿ ಬದುಕು ಬದುಕುತ್ತಾರೆ .!

ಬೆಂಗಳೂರು : ಜ್ಯೋತಿಷ್ಯದ ಶಾಖೆಯಾದ ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಭವಿಷ್ಯವನ್ನು ಹಸ್ತ  ರೇಖೆಗಳು, ಗುರುತುಗಳು, ಚಿಹ್ನೆಗಳ ಆಧಾರದ ಮೇಲೆ ಹೇಳಲಾಗುತ್ತದೆ. ಅದೃಷ್ಟ ರೇಖೆ, ಜೀವನ ರೇಖೆ, ಹೃದಯ ರೇಖೆ, ಮದುವೆ ರೇಖೆ, ಹಣದ ರೇಖೆ ಇತ್ಯಾದಿಗಳು, ಒಬ್ಬ ವ್ಯಕ್ತಿಯು ಎಷ್ಟು ಶ್ರೀಮಂತ ಅಥವಾ ಯಶಸ್ವಿಯಾಗುತ್ತಾನೆ ಎಂಬುದನ್ನು ತೋರಿಸುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಕೆಲವು ಚಿಹ್ನೆಗಳನ್ನು ಬಹಳ ಮಂಗಳಕರವೆಂದು ಹೇಳಲಾಗುತ್ತದೆ. ಯಾರ ಹಸ್ತದಲ್ಲಿ ಆ ಚಿನ್ಹೆಗಳಿರುತ್ತವೆಯೋ ಅವರನ್ನು ಅದೃಷ್ಟವಂತ ಎಂದು ಹೇಳಲಾಗುತ್ತದೆ. 

ಅದೃಷ್ಟವಂತನ ಹಸ್ತದಲ್ಲಿರುತ್ತದೆ ಈ ಚಿಹ್ನೆಗಳು :   
ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ, ಅಂಗೈಯಲ್ಲಿ ತ್ರಿಕೋನ, ದ್ವೀಪ, ಮೀನು ಮತ್ತು ಕಲಶದಂತಹ ಚಿಹ್ನೆಗಳಿದ್ದರೆ ಅವುಗಳನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಅಂಗೈಯಲ್ಲಿ ಮೀನಿನ ಗುರುತು ಇದ್ದರೆ, ವ್ಯಕ್ತಿಯು ತುಂಬಾ ಶ್ರೀಮಂತನಾಗುತ್ತಾನೆ ಎಂದರ್ಥ. ಈ ಚಿಹ್ನೆ ಯಾರ ಕೈಯಲ್ಲಿ ಇರುತ್ತದೆಯೋ ಅವರು ಇದ್ದಕ್ಕಿದ್ದಂತೆ ಬಹಳಷ್ಟು ಹಣವನ್ನು ಪಡೆಯುತ್ತಾರೆಯಂತೆ. ಅಲ್ಲದೆ, ಜೀವನದಲ್ಲಿ ಸಾಕಷ್ಟು ಗೌರವ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ : Samudrik Shastra: ಹುಬ್ಬಿನ ಆಕಾರದಿಂದ ನಿಮ್ಮ ಅದೃಷ್ಟ ತಿಳಿಯಿರಿ! ಇದು ಶ್ರೀಮಂತರಾಗುವ ಸಂಕೇತ

ಅಂಗೈಯ ಮಧ್ಯದಲ್ಲಿ ದೇವಸ್ಥಾನ ಅಥವಾ ಸ್ವಸ್ತಿಕ ಗುರುತು ಇರುವುದು ಕೂಡಾ ತುಂಬಾ ಮಂಗಳಕರ. ಕೈಯಲ್ಲಿ ಈ ಚಿಹ್ನೆ ಇದ್ದ ಜನರು ತುಂಬಾ ಅದೃಷ್ಟವಂತರು ಮತ್ತು ಜೀವನದಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತಾರೆ. 

ತಮ್ಮ ಅಂಗೈಯಲ್ಲಿ ರಥ ಅಥವಾ ತ್ರಿಶೂಲದಂತಹ ಗುರುತುಗಳಿರುವವರು,   ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುತ್ತಾರೆ. ತಮ್ಮ ಕಾರ್ಯ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ. ಸಾಕಷ್ಟು ಗೌರವವನ್ನು ಪಡೆಯುತ್ತಾರೆ. ಇವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಯಶಸ್ವಿಯಾಗುತ್ತಾರೆ.

ಇದನ್ನೂ ಓದಿ : Astro Tips: ಈ ದಿನದಂದು ಅಪ್ಪಿತಪ್ಪಿಯೂ ಉಗುರು ಕತ್ತರಿಸಬೇಡಿ!

ಹಿಂದೂ ಧರ್ಮದಲ್ಲಿ ಕಮಲದ ಹೂವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಮಹಾಲಕ್ಷ್ಮಿಗೆ ಕಮಲದ ಹೂವು ತುಂಬಾ ಇಷ್ಟ. ಯಾರ ಅಂಗೈಯಲ್ಲಿ ಕಮಲದ ಹೂವಿನ ಚಿಹ್ನೆ ಇರುತ್ತದೆಯೋ ಅವರು ತಾಯಿ ಲಕ್ಷ್ಮೀಯ ವಿಶೇಷ ಅನುಗ್ರಹವನ್ನು ಹೊಂದುತ್ತಾರೆ. ಜೀವನದಲ್ಲಿ ಬಹಳಷ್ಟು ಸಂಪತ್ತನ್ನು ಪಡೆಯುತ್ತಾರೆ. ಇವರು ವಯಸ್ಸಾದಂತೆ ಸಿರಿವಂತರಾಗುತ್ತಾ ಹೋಗುತ್ತಾರೆ.  

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ 
ಮಾಡಿ.

Read More