Home> Lifestyle
Advertisement

Health Tips: ನಿಮ್ಮ ಹಲ್ಲುಜ್ಜಲು ಸರಿಯಾದ ಟೂತ್ ಬ್ರಷ್ ಆಯ್ಕೆ ಮಾಡಿಕೊಂಡಿದ್ದೀರಾ?

ವೈದ್ಯರ ಪ್ರಕಾರ ನಿಮ್ಮ ಹಲ್ಲುಗಳ ಬಣ್ಣವು ಬಿಳಿಯಾಗಿದ್ದರೆ, ಒಸಡುಗಳು ಗುಲಾಬಿ ಮತ್ತು ಆರೋಗ್ಯಕರವಾಗಿ ಕಾಣುತ್ತಿದ್ದರೆ, ಬಾಯಿಯ ದುರ್ವಾಸನೆ ಮತ್ತು ಬಿಸಿ ಅಥವಾ ತಣ್ಣನೆಯ ತಿಂದಾಗ ಯಾವುದೇ ಜುಮ್ಮೆನ್ನುವ ಅನುಭವ ಇಲ್ಲದಿದ್ದರೆ ನಿಮ್ಮ ಬಾಯಿಯ ಆರೋಗ್ಯವು ಉತ್ತಮವೆಂದು ಪರಿಗಣಿಸಬಹುದು.

Health Tips: ನಿಮ್ಮ ಹಲ್ಲುಜ್ಜಲು ಸರಿಯಾದ ಟೂತ್ ಬ್ರಷ್ ಆಯ್ಕೆ ಮಾಡಿಕೊಂಡಿದ್ದೀರಾ?

ನವದೆಹಲಿ: ಅನೇಕ ರೋಗಗಳನ್ನು ತಪ್ಪಿಸಲು ಹಲ್ಲುಗಳನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಹಲ್ಲುಗಳನ್ನು ಸ್ವಚ್ಛಗೊಳಿಸಲು ನಾವು ಬಳಸುವ ಟೂತ್ ಬ್ರಷ್ ಸ್ವಚ್ಛವಾಗಿರಬೇಕು. ಬಾಯಿಯ ಆನಾರೋಗ್ಯದಿಂದ ಹೃದ್ರೋಗ, ಶ್ವಾಸಕೋಶದ ಕಾಯಿಲೆ ಮತ್ತು ಇತರ ಅನೇಕ ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು ಎಂದು ವೈದ್ಯರು ಹೇಳುತ್ತಾರೆ. ಇದಕ್ಕಾಗಿಯೇ ಬಾಯಿಯ ಸರಿಯಾದ ಆರೈಕೆ ಬಹಳ ಮುಖ್ಯ.

ಉತ್ತಮ ಬಾಯಿಯ ಆರೋಗ್ಯದ ಲಕ್ಷಣಗಳು

ವೈದ್ಯರ ಪ್ರಕಾರ ನಿಮ್ಮ ಹಲ್ಲುಗಳ ಬಣ್ಣವು ಬಿಳಿಯಾಗಿದ್ದರೆ, ಒಸಡುಗಳು ಗುಲಾಬಿ ಮತ್ತು ಆರೋಗ್ಯಕರವಾಗಿ ಕಾಣುತ್ತಿದ್ದರೆ, ಬಾಯಿಯಿಂದ ಯಾವುದೇ ದುರ್ವಾಸನೆ ಬರದಿದ್ದರೆ ಮತ್ತು ಬಿಸಿ ಅಥವಾ ತಣ್ಣನೆಯ ಆಹಾರ ತಿಂದಾಗ ಯಾವುದೇ ಜುಮ್ಮೆನಿಸುವಿಕೆ ಇಲ್ಲದಿದ್ದರೆ ನಿಮ್ಮ ಬಾಯಿಯ ಆರೋಗ್ಯವು ಉತ್ತಮವೆಂದು ಪರಿಗಣಿಸಬಹುದು.

ಇದನ್ನೂ ಓದಿ: ಬೆಳಗಿನ ಜಾವ ಬೆಲ್ಲ ಹಾಗೂ ಕಡಲೆ ಬೀಜವನ್ನು ಸೇವಿಸುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ ..

ಯಾವ ಟೂತ್ ಬ್ರಷ್ ಬಳಸಬೇಕು?

ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಲು ಮೃದುವಾದ ಬ್ರಿಸ್ಟಲ್ ಟೂತ್ ಬ್ರಷ್ ಮತ್ತು ಫ್ಲೋರೈಡ್ ಆಧಾರಿತ ಟೂತ್ಪೇಸ್ಟ್ ಬಳಸಿ. ಅದೇ ರೀತಿ ಪ್ರತಿ 3 ತಿಂಗಳಿಗೊಮ್ಮೆ ಹಲ್ಲುಜ್ಜುವ ಬ್ರಷ್ ಬದಲಾಯಿಸುವುದು ಉತ್ತಮ ಅಭ್ಯಾಸ. ಇದು ಬಾಯಿಯಲ್ಲಿ ಉಂಟಾಗುವ ಅಪಾಯ ತಡೆಯಬಹುದು.

ಟೂತ್‌ಪೇಸ್ಟ್ ಎಷ್ಟು ಬಳಸಬೇಕು?

ಅನೇಕ ಜನರು ಬ್ರಷ್‌ನಲ್ಲಿ ಬಹಳಷ್ಟು ಟೂತ್‌ಪೇಸ್ಟ್ ತೆಗೆದುಕೊಳ್ಳುತ್ತಾರೆ. ಅದು ಬಾಯಿಯನ್ನು ಹೆಚ್ಚು ಸ್ವಚ್ಛಗೊಳಿಸುತ್ತದೆ ಎಂದು ಅವರು ಭಾವಿಸಿರುತ್ತಾರೆ. ಆದರೆ ಇದು ತಪ್ಪು, ಏಕೆಂದರೆ ಹೆಚ್ಚು ಟೂತ್ಪೇಸ್ಟ್ ತೆಗೆದುಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ನೀವು ಕನಿಷ್ಟ ಸ್ವಲ್ಪ ಟೂತ್ಪೇಸ್ಟ್ ಬಳಸಬೇಕು.

ಇದನ್ನೂ ಓದಿ: Health Tips: ಮೊಟ್ಟೆ ಜೊತೆಗೆ ಅಪ್ಪಿತಪ್ಪಿಯೂ ಈ ಆಹಾರ ಸೇವಿಸಬಾರದು

ಮೌಖಿಕ ಆರೋಗ್ಯ ಸಲಹೆ 

  • ಪ್ರತಿ 6-8 ತಿಂಗಳಿಗೊಮ್ಮೆ ದಂತವೈದ್ಯರಿಂದ ತಪಾಸಣೆ ಮಾಡಿಸಿ. ಅತಿಯಾದ ಸಿಹಿ ಆಹಾರ ಸೇವಿಸಬೇಡಿ. ದಿನಕ್ಕೆ 2 ಬಾರಿ ಬ್ರಷ್ ಮತ್ತು ನಾಲಿಗೆಯನ್ನು ಸ್ವಚ್ಛಗೊಳಿಸಲು ಮರೆಯಬೇಡಿ.
  • ಪ್ರತಿ ಊಟದ ನಂತರ ನಿಮ್ಮ ಬಾಯಿಯನ್ನು ತೊಳೆಯಿರಿ. ಯಾವುದೇ ರೂಪದ ತಂಬಾಕು ಬಳಕೆಯಿಂದ ದೂರವಿರಿ. ಒಸಡುಗಳು ಮತ್ತು ಹಲ್ಲುಗಳಿಂದ ಚೂಪಾದ ವಸ್ತುಗಳನ್ನು ದೂರವಿಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More