Home> Lifestyle
Advertisement

Numerology: ಯಾವ ರಾಶಿಯ ಜನರಿಗೆ ಯಾವುದು ಅದೃಷ್ಟ ಸಂಖ್ಯೆ..?

ಅದೃಷ್ಟದ ಸಂಖ್ಯೆಗಗುಣವಾಗಿಯೇ ಪ್ರತಿಯೊಬ್ಬರ ಆಸೆ, ಆಕಾಂಕ್ಷೆ, ನಡೆ-ನುಡಿ, ಸ್ವಭಾವ, ಉದ್ಯೋಗ ಮತ್ತು ಕೌಟುಂಬಿಕ ಜೀವನವು ನಿರ್ಧಾರವಾಗುತ್ತದೆ.

Numerology: ಯಾವ ರಾಶಿಯ ಜನರಿಗೆ ಯಾವುದು ಅದೃಷ್ಟ ಸಂಖ್ಯೆ..?

ನವದೆಹಲಿ: ಪ್ರತಿಯೊಂದು ರಾಶಿಯವರು ಅದೃಷ್ಟದ ಸಂಖ್ಯೆ(Lucky Number)ಯನ್ನು ಹೊಂದಿರುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಂದು ಸಂಖ್ಯೆಯೂ ತನ್ನದೇಯಾದ ವಿಶೇಷತೆಯನ್ನು ಹೊಂದಿರುತ್ತದೆ. ಇದಕ್ಕನುಗುಣವಾಗಿಯೇ ಪ್ರತಿಯೊಬ್ಬರ ಆಸೆ, ಆಕಾಂಕ್ಷೆ, ನಡೆ-ನುಡಿ, ಸ್ವಭಾವ, ಉದ್ಯೋಗ ಮತ್ತು ಕೌಟುಂಬಿಕ ಜೀವನವು ನಿರ್ಧಾರವಾಗುತ್ತದೆ. ಯಾವ ರಾಶಿಯವರಿಗೆ ಯಾವುದು ಅದೃಷ್ಟ ಸಂಖ್ಯೆ(Numerology) ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಮೇಷ ರಾಶಿ: ಕುಜ ಮೇಷ ರಾಶಿಯ ಅಧಿಪತಿ. ಈ ರಾಶಿಯ ಜನರು ಸಾಹಸಮಯಿಗಳು, ಚೈತನ್ಯಶೀಲರಾಗಿರುತ್ತಾರೆ. ಇವರ ಅದೃಷ್ಟದ ಸಂಖ್ಯೆ 6, 18, 41, 77 ಮತ್ತು 83 ಆಗಿರುತ್ತದೆ. ಈ ಸಂಖ್ಯೆಗಳು ಇವರಿಗೆ ಮಂಗಳಕರವಾಗಿವೆ.

ವೃಷಭ ರಾಶಿ: ಈ ರಾಶಿಯವರು ಉತ್ಸಾಹಿಗಳು, ಪ್ರಣಯಿಗಳು, ಖಚಿತ ನಿರ್ಣಯಗಳನ್ನು ಸುಲಭವಾಗಿ ತೆಗೆದುಕೊಳ್ಳಬಲ್ಲವರಾಗಿರುತ್ತಾರೆ. 5, 35, 50, 57 ಮತ್ತು 82 ಇವರ ಅದೃಷ್ಟದ ಸಂಖ್ಯೆಯಾಗಿವೆ. ಈ ಸಂಖ್ಯೆಗಳು ಇವರ ಭವಿಷ್ಯಕ್ಕೆ ದಾರಿ(Lucky Number Astrology)ಯನ್ನು ತೋರಿಸುತ್ತವೆ ಎಂದು ನಂಬಲಾಗಿದೆ.

ಮಿಥುನ ರಾಶಿ: ಈ ರಾಶಿಯವರು ಉತ್ಸಾಹಿಗಳು. ಅಧ್ಯಾತ್ಮ ವಿಕಸನಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಬುಧ ಇವರ ಅಧಿಪತಿ. ಇವರ ಅದೃಷ್ಟದ ಸಂಖ್ಯೆ 1, 10, 18, 35 ಮತ್ತು 86 ಆಗಿವೆ.

ಕಟಕ ರಾಶಿ: ಈ ರಾಶಿಯವರು ಸೂಕ್ಷ್ಮ ಮನಸ್ಥಿತಿಯುಳ್ಳವರು. ಬದುಕಿನ ಸೂಕ್ಷ್ಮತೆಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಅದ್ಭುತ ಕಲ್ಪನಾಶಕ್ತಿವುಳ್ಳವರು. ಸೂರ್ಯ ಇವರ ಅಧಿಪತಿ. ಇವರ ಅದೃಷ್ಟ ಸಂಖ್ಯೆ 1, 21, 24, 58 ಮತ್ತು 66 ಆಗಿವೆ.

ಇದನ್ನೂ ಓದಿ: Bamboo Vastu Tips: ಮನೆ ಅಥವಾ ಕಚೇರಿಯಲ್ಲಿ ಬಿದಿರಿನ ಗಿಡ ಇರಿಸಲು ವಾಸ್ತು ಸಲಹೆಗಳು

ಸಿಂಹ ರಾಶಿ: ಈ ರಾಶಿಯ ಜನರು ನಿಷ್ಠಾವಂತರು, ಪ್ರಾಮಾಣಿಕರು ಹಾಗೂ ಚೈತನ್ಯಶೀಲರಾಗಿರುತ್ತಾರೆ. ಸೂರ್ಯ ಇವರ ಅಧಿಪತಿ. 6, 24, 39, 59 ಮತ್ತು 83 ಇವರ ಅದೃಷ್ಟದ ಸಂಖ್ಯೆಯಾಗಿರುತ್ತದೆ.

ಧನು ರಾಶಿ: ಈ ರಾಶಿಯವರು ಸಾಹಸವಂತರು, ದೃಢ ನಿರ್ಧಾರ ತೆಗೆದುಕೊಳ್ಳುವ ಗುಣ ಹೊಂದಿರುತ್ತಾರೆ. ಇವರ ಅದೃಷ್ಟದ ಸಂಖ್ಯೆ(Best Lucky Numbers) 6, 16, 23, 60 ಮತ್ತು 81 ಆಗಿವೆ.

ಕನ್ಯಾ ರಾಶಿ: ಈ ರಾಶಿಯವರು ಬುಧನ ಪ್ರಭಾವಕ್ಕೆ ಒಳಗಾಗಿರುತ್ತಾರೆ. ಇದಲ್ಲದೆ ಇವರು ಸ್ನೇಹಮಯಿಗಳು, ಭಾವನಾತ್ಮಕ ಜೀವಿಗಳು ಮತ್ತು ಎಲ್ಲರೊಡನೆ ಬೆರೆಯುವ ಸ್ವಭಾವದವರಾಗಿರುತ್ತಾರೆ. ಇವರ ಅದೃಷ್ಟದ ಸಂಖ್ಯೆ 16, 29, 79, 80 ಮತ್ತು 90 ಆಗಿದೆ.

ತುಲಾ ರಾಶಿ: ಈ ರಾಶಿಯವರು ವಿಶಿಷ್ಟ ವ್ಯಕ್ತಿತ್ವ ಗುಣ ಹೊಂದಿರುತ್ತಾರೆ. ಇವರು ಸಹಜವಾಗಿ ಎಲ್ಲರೊಡನೆ ಬೆರೆಯುತ್ತಾರೆ. ಆಕರ್ಷಕ ಗುಣ  ಹೊಂದಿರುವ ಇವರ ಅದೃಷ್ಟದ ಸಂಖ್ಯೆ 7, 20, 55, 77 ಮತ್ತು 86 ಆಗಿರುತ್ತದೆ.

ಇದನ್ನೂ ಓದಿ: ಈ ಕೆಲಸ ಮಾಡಿದರೆ ತಕ್ಷಣವೇ ಪ್ರಾಪ್ತಿಯಾಗುತ್ತದೆ ಸಿರಿತನ

ವೃಶ್ಚಿಕ ರಾಶಿ: ಈ ರಾಶಿಯವರು ಮಂಗಳ ಮತ್ತು ಪ್ಲೂಟೋ ಪ್ರಭಾವಕ್ಕೆ ಒಳಗಾಗಿರುತ್ತಾರೆ. ವೃಶ್ಚಿಕ ರಾಶಿಯವರ ನಡೆ ತುಂಬಾ ರಹಸ್ಯವಾಗಿರುತ್ತದೆ. ಹೀಗಾಗಿ ಇವರ ನಡೆಯನ್ನು ಪತ್ತೆ ಹಚ್ಚುವುದು ತುಂಬಾ ಕಷ್ಟ. ಸದಾ ಸ್ವತಂತ್ರವಾಗಿ ಬದುಕಬೇಕೆಂದು ಬಯಸುವ ಇವರ ಅದೃಷ್ಟದ ಸಂಖ್ಯೆ 27, 29, 45, 53 ಮತ್ತು 89 ಆಗಿವೆ.

ಮಕರ ರಾಶಿ: ಈ ರಾಶಿಯವರ ಅಧಿಪತಿ ಶನಿ. ಅಂದುಕೊಂಡ ಗುರಿಯನ್ನು ಸಾಧಿಸುವ ಛಲ ಹೊಂದಿರುತ್ತಾರೆ. ಕಠೋರವಾದಿಗಳಂತೆ ಕಾಣುವ ಇವರು ಕರುಣಾಶಾಲಿಗಳೂ ಆಗಿರುತ್ತಾರೆ. ಇವರ ಅದೃಷ್ಟದ ಸಂಖ್ಯೆ 3, 21, 66, 83 ಮತ್ತು 84 ಆಗಿದೆ.

ಕುಂಭ ರಾಶಿ: ಈ ರಾಶಿಯವರು ಸಹನಶೀಲರು, ಹೆಚ್ಚು ತಾಳ್ಮೆಯ ಗುಣವನ್ನು ಹೊಂದಿರುತ್ತಾರೆ. ಸ್ನೇಹಮಯಿಗಳೂ ಆಗಿರುವ ಇವರ ಅದೃಷ್ಟದ ಸಂಖ್ಯೆ 17, 40, 46, 61 ಮತ್ತು 76 ಆಗಿರುತ್ತದೆ.

ಮೀನ ರಾಶಿ: ಈ ರಾಶಿಯ ಜನರು ನೆಪ್ಚೂನ್‌ ಗ್ರಹದ ಪ್ರಭಾವಕ್ಕೆ ಒಳಗಾಗಿರುತ್ತಾರೆ. ಸೂಕ್ಷ್ಮ ನಿಗಾವುಳ್ಳವರು, ಮೃದು ಭಾಷಿಗಳು ಆಗಿರುವ ಇವರ ಅದೃಷ್ಟದ ಸಂಖ್ಯೆ(Lucky Number) 8, 10, 27, 56 ಮತ್ತು 69 ಆಗಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More