Home> Lifestyle
Advertisement

Name Astrology: ಅತ್ಯಂತ ಕಿರಿ ವಯಸ್ಸಿನಲ್ಲಿಯೇ ಸಿರಿವಂತರಾಗುತ್ತಾರೆ ಈ ಅಕ್ಷರದ ಹೆಸರಿನವರು

ಕೆಲ ಅಕ್ಷರಗಳಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ಜನರು ಸಣ್ಣ ವಯಸ್ಸಿನಲ್ಲಿಯೇ ಅಪಾರ ಸಂಪತ್ತನ್ನು ಹೊಂದುವ ಮೂಲಕ ಐಷಾರಾಮಿ ಜೀವನ ನಡೆಸುತ್ತಾರೆ.

Name Astrology: ಅತ್ಯಂತ ಕಿರಿ ವಯಸ್ಸಿನಲ್ಲಿಯೇ ಸಿರಿವಂತರಾಗುತ್ತಾರೆ ಈ ಅಕ್ಷರದ ಹೆಸರಿನವರು

ನವದೆಹಲಿ: ಜ್ಯೋತಿಷ್ಯದ ಪ್ರಕಾರ ರಾಶಿಚಕ್ರದ ಚಿಹ್ನೆಗಳ ಸಹಾಯದಿಂದ  ವ್ಯಕ್ತಿಯ ಭವಿಷ್ಯವನ್ನು ಹೇಳಲಾಗುತ್ತದೆ. ಅದೇ ರೀತಿ ಹೆಸರಿನ ಮೊದಲ ಅಕ್ಷರ ಸಹ ವ್ಯಕ್ತಿಯ ಭವಿಷ್ಯದ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತದೆ. ಹೆಸರು ವ್ಯಕ್ತಿಯ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಕೆಲ ಅಕ್ಷರಗಳಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ಜನರು ಸಣ್ಣ ವಯಸ್ಸಿನಲ್ಲಿಯೇ ಅಪಾರ ಸಂಪತ್ತನ್ನು ಹೊಂದುವ ಮೂಲಕ ಐಷಾರಾಮಿ ಜೀವನ ನಡೆಸುತ್ತಾರೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.  

B ಅಕ್ಷರ

‘B’ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಜನರು ತುಂಬಾ ಶ್ರಮಜೀವಿಗಳು ಮತ್ತು ಅದೃಷ್ಟವಂತರು. ಬಹಳ ಬುದ್ಧಿವಂತರಾದ ಇವರು ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟು ಯಶಸ್ಸು ಪಡೆಯುತ್ತಾರೆ. ಇಂತಹ ಜನರು ಉದ್ಯೋಗ ಮತ್ತು ವ್ಯವಹಾರದ ವಿಷಯದಲ್ಲಿ ತುಂಬಾ ಅದೃಷ್ಟವಂತರಾಗಿರುತ್ತಾರೆ.

ಇದನ್ನೂ ಓದಿ: Alcohol Addiction: ಮದ್ಯಪಾನ ಚಟದಿಂದ ಮುಕ್ತಿ ಪಡೆಯಬೇಕೆ? ಇಂದಿನಿಂದಲೇ ಈ ಕೆಲಸ ಆರಂಭಿಸಿ

D ಅಕ್ಷರ  

ಈ ಹೆಸರಿನ ಜನರ ಜೊತೆ ಪ್ರತಿಕ್ಷಣವೂ ಅದೃಷ್ಟವಿರುತ್ತದೆ. ಇವರು ಯಾವುದೇ ಕೆಲಸದಲ್ಲಿಯೂ ಸಂಪೂರ್ಣ ಶ್ರಮ ವಹಿಸುತ್ತಾರೆ. ಇವರು ಕಠಿಣ ಪರಿಶ್ರಮದಿಂದಲೇ  ಜೀವನದಲ್ಲಿ ಎಲ್ಲವನ್ನೂ ಪಡೆಯುತ್ತಾರೆ. ತಮ್ಮ ತೀಕ್ಷ್ಣ ಬುದ್ಧಿಶಕ್ತಿಯ ಸಹಾಯದಿಂದ ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟು ಸಾಧನೆ ಸಹ ಇವರು ಮಾಡುತ್ತಾರೆ.

H ಅಕ್ಷರ

ಈ ಅಕ್ಷರದಿಂದ ಆರಂಭವಾಗುವ ಹೆಸರು ಇದ್ದರೆ ಬಹಳ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಇವರು ಕೈ ಹಾಕಿದ ಎಲ್ಲಾ ಕೆಲಸದಲ್ಲಿಯೂ ಯಶಸ್ಸು ಸಿಗುತ್ತದೆ. ಜೀವನದಲ್ಲಿ ಏನು ಮಾಡಬೇಕು ಎಂಬುದನ್ನು ಇವರು ಚಿಕ್ಕ ವಯಸ್ಸಿನಲ್ಲೇ ನಿರ್ಧರಿಸಿ ಅದರಲ್ಲಿ ಯಶಸ್ಸನ್ನೂ ಸಹ ಪಡೆಯುತ್ತಾರೆ.

ಇದನ್ನೂ ಓದಿ: ಕೇವಲ ಟೆನ್ಶನ್ ಮಾತ್ರ ಅಲ್ಲ ಈ ಕಾರಣಗಳಿಂದ ಕೂಡಾ ತಲೆ ಕೂದಲು ಬೆಳ್ಳಗಾಗುತ್ತದೆ

L ಅಕ್ಷರ

ಈ ಅಕ್ಷರದಿಂದ ಆರಂಭವಾಗುವ ಹೆಸರಿನವರು ತುಂಬಾ ಕಠಿಣ ಪರಿಶ್ರಮಪಡುತ್ತಾರೆ. ಇವರು ಬಹಳ ಬುದ್ಧಿವಂತರು. ಇವರಿಗೆ ಅದೃಷ್ಟದ ಸಂಪೂರ್ಣ ಬೆಂಬಲವೂ ಸಿಗುತ್ತದೆ. ಅದೇ ರೀತಿ ಇವರು ತಮ್ಮ ಜೀವನದುದ್ದಕ್ಕೂ ಸಕಲ ಸೌಕರ್ಯಗಳನ್ನು ಪಡೆಯುತ್ತಾರೆ  ಇವರು ಚಿಕ್ಕ ವಯಸ್ಸಿನಲ್ಲೇ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More