Home> Lifestyle
Advertisement

ನಿಮ್ಮ ನಿತ್ಯಪೂಜೆಯಲ್ಲಿ ಈ ಐದು ತಪ್ಪುಗಳಾಗುತ್ತಿರಬಹುದು..?

ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಪೂಜೆ ಪುನಸ್ಕಾರಕ್ಕೆ ವಿಶೇಷ ಮಹತ್ವ ಇದೆ. ಕೆಲವರು ಮನೆಯಲ್ಲೇ ಒಂದು ಮಂದಿರ  ಮಾಡಿಕೊಂಡು ಅಲ್ಲಿಯೇ ಕುಳಿತು ಶಾಂತಿಯಿಂದ ಭಗವಂತನ ನಾಮಸ್ಮರಣೆ ಮಾಡುತ್ತಾರೆ. 

ನಿಮ್ಮ ನಿತ್ಯಪೂಜೆಯಲ್ಲಿ ಈ ಐದು ತಪ್ಪುಗಳಾಗುತ್ತಿರಬಹುದು..?

ಬೆಂಗಳೂರು : ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಪೂಜೆ ಪುನಸ್ಕಾರಕ್ಕೆ ವಿಶೇಷ ಮಹತ್ವ ಇದೆ. ಕೆಲವರು ಮನೆಯಲ್ಲೇ ಒಂದು ಮಂದಿರ (pooja room) ಮಾಡಿಕೊಂಡು ಅಲ್ಲಿಯೇ ಕುಳಿತು ಶಾಂತಿಯಿಂದ ಭಗವಂತನ ನಾಮಸ್ಮರಣೆ ಮಾಡುತ್ತಾರೆ.  ಈ ಪೂಜೆ ಮಾಡಿಯೂ ನಿಮ್ಮ ಮನಸ್ಸಿನ ಅಶಾಂತಿ ಹಾಗೇ ಉಳಿದು ಬಿಟ್ಟಿದ್ದರೆ, ಪೂಜೆಯ ಫಲ ನಿಮಗೆ ಸಿಗುತ್ತಿಲ್ಲ ಎಂದನಿಸುತ್ತಿದ್ದರೆ ಖಂಡಿತಾ ನಿಮ್ಮ ಪೂಜೆಯಲ್ಲಿ ಏನೋ ತಪ್ಪಾಗಿದೆ (Mistakes) ಅಂತಲೇ ಅರ್ಥ. ನಿತ್ಯ ಪೂಜೆ (Daily pooja) ಮಾಡುವುದು ಎಷ್ಟು  ಮುಖ್ಯವೋ ಅದೇ ರೀತಿ ಪೂಜೆ ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಕೂಡಾ ಅಷ್ಟೇ ಮುಖ್ಯ.

ಪೂಜೆ ಪುನಸ್ಕಾರ ಮಾಡುವಾಗ ಈ ಐದು ವಿಷಯಗಳಲ್ಲಿ ಎಚ್ಚರ ವಹಿಸಿ. 

1. ಮನೆಯ ಮಂದಿರದ (pooja room) ಸ್ಥಳ ಯಾವತ್ತಿಗೂ ಈಶಾನ್ಯದಲ್ಲಿರಬೇಕು. ಈ ದಿಕ್ಕು ದೇವರ ಮಂದಿರಕ್ಕೆ ಅತ್ಯಂತ ಹೆಚ್ಚು ಪ್ರಶಸ್ತ ಸ್ಥಳ ಎಂದು ಹೇಳಲಾಗುತ್ತದೆ. ಆದರೆ, ನಿಮ್ಮ ಮಂದಿರ ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿದ್ದರೆ ನಿಮಗೆ ಪೂಜಾ ಫಲ ಪ್ರಾಪ್ತವಾಗುವುದಿಲ್ಲ ಎನ್ನುತ್ತಾರೆ ಪಂಡಿತರು.

ಇದನ್ನೂ ಓದಿ : PitraDosha : ಪಿತೃಗಳ ರಕ್ಷೆ ಯಾಕೆ ಬೇಕು..? ಪಿತೃದೋಷ ನಿವಾರಣೆ ಹೇಗೆ..?

2. ಪೂಜೆ ಮಾಡುವಾಗ ಯಾವತ್ತಿಗೂ ದೇವ ದೇವತೆಯರ (god) ಮೂರ್ತಿಗೆ ಬೆನ್ನು ಹಾಕಿ ಕುಳಿತುಕೊಳ್ಳಬೇಡಿ.

3. ಖಾಲಿ ನೆಲದ ಮೇಲೆ ಕುಳಿತು ಪೂಜೆ (pooja) ಮಾಡಬೇಡಿ. ಪೂಜೆ ಮಾಡುವಾಗ ಕನಿಷ್ಠ ಒಂದು ಮಣೆಯ ಮೇಲೆ ಕುಳಿತು ಕೊಳ್ಳಿ. ಮಣೆ ಸಿಗದೇ ಹೋದರೆ, ಕನಿಷ್ಠ ಒಂದು ಚಾಪೆಯನ್ನಾದರೂ (mat) ಕುಳಿತುಕೊಳ್ಳಲು ಬಳಸಬಹುದು. ಖಾಲಿ ನೆಲದ ಮೇಲೆ ಕುಳಿತು ಪೂಜೆ ಮಾಡಿದರೆ ದಾರಿದ್ರ್ಯ ವಕ್ಕರಿಸುತ್ತದೆಯೆಂದು ತಿಳಿದವರು ಹೇಳುತ್ತಾರೆ.

4. ಮನೆಯಲ್ಲಿ ಮಂದಿರವಿದ್ದರೆ, ಅದರಲ್ಲಿ ಬೆಳಗ್ಗೆ ಮತ್ತು ಸಂಜೆ ಖಂಡಿತವಾಗಿ ದೀಪ ಬೆಳಗಿ. ಒಂದು ತುಪ್ಪದ ದೀಪ ಇನ್ನೊಂದು ಸಾಮಾನ್ಯ ಎಣ್ಣೆ ದೀಪ ಆಗಿರಲಿ. 

ಇದನ್ನೂ ಓದಿ : Mercury Planet And Skin Problems: ಬುಧ ಅಶುಭನಾದರೆ ತ್ವಚೆಗೆ ಸಂಬಂಧಿಸಿದ ವ್ಯಾಧಿಗಳು ಬರುತ್ತವೆ

5. ಭಗವಾನ್ ವಿಷ್ಣು, ಶಿವ (lord shiva), ಗಣೇಶ, ಸೂರ್ಯ ಮತ್ತು ದುರ್ಗೆ - ಇವರನ್ನು ಪಂಚ ದೇವ ದೇವತೆಯರು ಎಂದು ಕರೆಯಲಾಗುತ್ತದೆ. ನಿತ್ಯ ಪೂಜೆಯ ವೇಳೆ ಈ ಐವರು ದೇವಾನುದೇವತೆಗಳ  ಸ್ತುತಿ ಮಾಡಿದರೆ ಸುಖ ಸಮೃದ್ದಿ ಪ್ರಾಪ್ತಿಯಾಗುತ್ತದೆಯೆಂದು ತಿಳಿದವರು ಹೇಳುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More