Home> Lifestyle
Advertisement

Mars Transit In Leo - ಮಂಗಳನ ಕೃಪೆಯಿಂದ ಸೆಪ್ಟೆಂಬರ್ 6ರವರೆಗೆ ಈ ರಾಶಿ ಜಾತಕದವರ ಭಾಗ್ಯ ಬದಲಾಗಲಿದೆ, ವ್ಯಾಪಾರದಲ್ಲಿಯೂ ಲಾಭ

Mars Transit In Leo - ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳನನ್ನು (Mars Transit 2021) ಶಕ್ತಿ, ಸಹೋದರ, ಭೂಮಿ, ಪರಾಕ್ರಮ, ಧೈರ್ಯ, ಶೌರ್ಯ, ಕ್ರಿಯಾಶೀಲತೆ ಮತ್ತು ಚೈತನ್ಯದ ಗ್ರಹವೆಂದು ಪರಿಗಣಿಸಲಾಗಿದೆ. ಮಂಗಳನನ್ನು ಎಲ್ಲಾ ಗ್ರಹಗಳ ಕಮಾಂಡರ್ ಎಂದು ಕರೆಯಲಾಗುತ್ತದೆ. 

Mars Transit In Leo - ಮಂಗಳನ ಕೃಪೆಯಿಂದ ಸೆಪ್ಟೆಂಬರ್ 6ರವರೆಗೆ ಈ ರಾಶಿ ಜಾತಕದವರ ಭಾಗ್ಯ ಬದಲಾಗಲಿದೆ, ವ್ಯಾಪಾರದಲ್ಲಿಯೂ ಲಾಭ

Mars Transit In Leo - ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳನನ್ನು (Mars Transit 2021) ಶಕ್ತಿ, ಸಹೋದರ, ಭೂಮಿ, ಪರಾಕ್ರಮ, ಧೈರ್ಯ, ಶೌರ್ಯ, ಕ್ರಿಯಾಶೀಲತೆ ಮತ್ತು ಚೈತನ್ಯದ ಗ್ರಹವೆಂದು ಪರಿಗಣಿಸಲಾಗಿದೆ. ಮಂಗಳನನ್ನು ಎಲ್ಲಾ ಗ್ರಹಗಳ ಕಮಾಂಡರ್ ಎಂದು ಕರೆಯಲಾಗುತ್ತದೆ. ಮಂಗಳನ (Mangal Gochar 2021) ಮಂಗಳಕರ ಪರಿಣಾಮದೊಂದಿಗೆ, ಒಬ್ಬ ವ್ಯಕ್ತಿಯು ಜೀವನದಲ್ಲಿ ಎಲ್ಲಾ ರೀತಿಯ ಸಂತೋಷವನ್ನು ಅನುಭವಿಸುತ್ತಾನೆ. ಪ್ರಸ್ತುತ ಮಂಗಳ ಸಿಂಹ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಸೆಪ್ಟೆಂಬರ್ 6 ರವರೆಗೆ ಮಂಗಳ ಸಿಂಹ ರಾಶಿಯಲ್ಲಿಯೇ ಮುಂದುವರೆಯಲಿದ್ದಾನೆ. ಸಿಂಹ ರಾಶಿಯಲ್ಲಿ ಮಂಗಳ (Mangal Rashi Parivartan 2021) ಇರುವುದರಿಂದ ಕೆಲವು ರಾಶಿಗಳಿಗೆ ಶುಭ ಫಲ ಸಿಗಲಿದೆ. ಮಂಗಳನ ಕೃಪೆಯಿಂದ ಯಾವ ರಾಶಿ (Zodiac Sign) ಜಾತಕದವರ ಭಾಗ್ಯ ಬದಲಾಗಲಿದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.

1. ವೃಷಭ ರಾಶಿ - ನೌಕರಿ ಹಾಗೂ ವ್ಯಾಪಾರದಲ್ಲಿ ಪ್ರಗತಿ, ಧನಲಾಭದ ಸಂಕೇತ, ವ್ಯವಹಾರಕ್ಕಾಗಿ ಈ ಸಮಯ ಉತ್ತಮವಾಗಿದೆ. ಈ ಅವಧಿಯಲ್ಲಿ ಹೂಡಿಕೆ ಮಾಡಲು ತುಂಬಾ ಉತ್ತಮ ಕಾಲವಿದೆ. ನೌಕರಿ ಹಾಗೂ ವ್ಯಾಪಾರದಲ್ಲಿ ಪ್ರಗತಿಯ ಲಕ್ಷಣಗಳು ಗೋಚರಿಸುತ್ತಿವೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಸುಧಾರಣೆಯಾಗಲಿದೆ.

2. ಮಿಥುನ ರಾಶಿ - ಕೆಲಸ ಕಾರ್ಯಗಳಲ್ಲಿ ಸಫಲತೆ, ಭಾಗ್ಯದ ಸಾಥ್ ಸಿಗಲಿದೆ. ನೌಕರಿ ಹಾಗೂ ವ್ಯಾಪಾರಕ್ಕೆ ಸಮಯ ಶುಭಕರವಾಗಿದೆ. ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಮೆಚ್ಚುಗೆ ವ್ಯಕ್ತವಾಗಲಿದೆ. ಕುಟುಂಬ ಸದಸ್ಯರ ಜೊತೆಗೆ ಕಾಲ ಕಳೆಯುವ ಅವಕಾಶ ಸಿಗಲಿದೆ. ದಾಂಪತ್ಯ ಜೀವನದಲ್ಲಿ ಸುಖದ ಅನುಭವ ಉಂಟಾಗಲಿದೆ.

ಇದನ್ನೂ ಓದಿ-Onion Peel Benefits: ಈರುಳ್ಳಿ ಸಿಪ್ಪೆಯ ಈ ಉಪಯೋಗಗಳ ಬಗ್ಗೆ ತಿಳಿದರೆ ನೀವು ಎಂದಿಗೂ ಅದನ್ನು ಎಸೆಯುವುದಿಲ್ಲ

3. ವೃಶ್ಚಿಕ ರಾಶಿ - ನೌಕರಿ ಹಾಗೂ ವ್ಯಾಪಾರಕ್ಕಾಗಿ ಸಮಯ ಶುಭವಾಗಿದೆ. ಗೌರವ ಹೆಚ್ಚಾಗಲಿದೆ, ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ದಾಂಪತ್ಯ ಜೀವನ ಸುಖದಿಂದ ತುಂಬಿರಲಿದೆ. ಕುಟುಂಬದ ಸದಸ್ಯರ ಜೊತೆಗೆ ಕಾಲ ಕಳೆಯುವ ಅವಕಾಶ ಸಿಗಲಿದೆ.

4. ಕುಂಭ ರಾಶಿ - ವ್ಯಾಪಾರಕ್ಕಾಗಿ ಈ ಸಮಯ ವರದಾನಕ್ಕಿಂತ ಕಮ್ಮಿ ಏನಿಲ್ಲ.  ಧನಲಾಭದ ಯೋಗ. ಈ ಅವಧಿಯಲ್ಲಿ ನಿಮಗೆ ಕುಟುಂಬ ಸದಸ್ಯರ ಸಾಥ್ ಸಿಗಲಿದೆ. ಕೆಲಸ ಕಾರ್ಯಗಳಲ್ಲಿ ಸಫಲತೆ ಸಿಗಲಿದೆ.

ಇದನ್ನೂ ಓದಿ-ಮಲಗುವ ವೇಳೆ ತಪ್ಪಿ ಕೂಡಾ ತಲೆಯ ಬಳಿ ಈ ವಸ್ತುಗಳನ್ನು ಇಟ್ಟುಕೊಳ್ಳುವುದು ಸಮಸ್ಯೆಗಳಿಗೆ ಆಮಂತ್ರಣ ನೀಡಿದಂತೆ

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಮಾಹಿತಿ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ಕ್ಷೇತ್ರಕ್ಕೆ ಸಂಬಂಧಿಸಿದ ತಜ್ನರ ಸಲಹೆ ಪಡೆಯಲು ಮರೆಯಬೇಡಿ)

ಇದನ್ನೂ ಓದಿ-Benefits Of Lemon: ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಒಂದೇ ಒಂದು ನಿಂಬೆಯನ್ನು ಈ ರೀತಿ ಬಳಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More