Home> Lifestyle
Advertisement

Lunar Eclipse 2022: 15 ದಿನಗಳ ನಂತರ ಮತ್ತೆ ಗೋಚರಿಸಲಿದೆ ಗ್ರಹಣ, ಯಾವ ರೀತಿ ಹೇಗೆ ಪರಿಣಾಮ ಬೀರಲಿದೆ ?

Lunar Eclipse 2022 Date and Time in India: ಈಗ ಚಂದ್ರಗ್ರಹಣ ಸಂಭವಿಸಲು ಕೇವಲ 15 ದಿನಗಳು ಮಾತ್ರ ಉಳಿದಿವೆ. ಇದು ಸಂಪೂರ್ಣ ಚಂದ್ರಗ್ರಹಣವಾಗಿದ್ದು, ಜನಜೀವನದ ಮೇಲೆ ಪರಿಣಾಮ ಬೀರಲಿದೆ. ಇದು ವರ್ಷದ ಮೊದಲ ಚಂದ್ರಗ್ರಹಣವಾಗಲಿದೆ. 

Lunar Eclipse 2022: 15 ದಿನಗಳ ನಂತರ ಮತ್ತೆ ಗೋಚರಿಸಲಿದೆ ಗ್ರಹಣ,    ಯಾವ ರೀತಿ ಹೇಗೆ ಪರಿಣಾಮ ಬೀರಲಿದೆ ?

ಬೆಂಗಳೂರು :  Lunar Eclipse 2022 Date and Time in India : ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 30 ರಂದು ಗೋಚರಿಸಿದೆ. ಇದಾದ ನಂತರ  ಮೇ 16 2022 ರಂದು, ಚಂದ್ರಗ್ರಹಣವು  ಸಂಭವಿಸಲಿದೆ. ಈ ವರ್ಷ ಒಟ್ಟು 4 ಗ್ರಹಣಗಳು  ಗೋಚರಿಸಲಿವೆ. ಅವುಗಳಲ್ಲಿ 2 ಸೂರ್ಯಗ್ರಹಣಗಳು ಮತ್ತು 2 ಚಂದ್ರ ಗ್ರಹಣಗಳು. ಎರಡು ಸೂ ರ್ಯಗ್ರಹಣ ಗಳ ಪೈಕಿ, ಒಂದು ಈಗಾಗಲೇ ಸಂಭವಿಸಿದೆ. ಇದು ಭಾಗಶಃ ಸೂರ್ಯಗ್ರಹಣವಾಗಿತ್ತು. ಆದರೆ ಮೇ 16ರಂದು ಸಂಭವಿಸುವ ಚಂದ್ರಗ್ರಹಣ ಸಂಪೂರ್ಣ ಚಂದ್ರಗ್ರಹಣವಾಗಲಿದೆ. ಈ ಚಂದ್ರಗ್ರಹಣವು ಕೆಲವು ರಾಶಿಚಕ್ರದ ಜನರ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.  

ಚಂದ್ರಗ್ರಹಣದ ಸೂತಕ ಅವಧಿ :

ಇತ್ತೀಚಿನ ಸೂರ್ಯಗ್ರಹಣದ ಸೂತಕ ಅವಧಿಯು ಭಾರತದಲ್ಲಿ ಗೋಚರಿಸದ ಕಾರಣ ಅದನ್ನು ಪರಿಗಣಿಸಲಾಗಿರಲಿಲ್ಲ. ಅದೇ ರೀತಿ, ಮುಂಬರುವ ಸಂಪೂರ್ಣ ಚಂದ್ರಗ್ರಹಣದ ಸೂತಕ ಅವಧಿಯು ಸಹ ಮಾನ್ಯವಾಗಿರುವುದಿಲ್ಲ, ಏಕೆಂದರೆ, ಈ ಚಂದ್ರಗ್ರಹಣ ಕೂಡಾ ಭಾರತದಲ್ಲಿ ಗೋಚರಿಸುವುದಿಲ್ಲ. 

ಇದನ್ನೂ ಓದಿ :  Mangal Shani Yuti: ಮುಂದಿನ 15 ದಿನಗಳವರೆಗೆ ಬಹಳ ಎಚ್ಚರದಿಂದ ಇರಬೇಕು ಈ ಮೂರು ರಾಶಿಯವರು, ಕಾಡಲಿದ್ದಾರೆ ಶನಿ ಮತ್ತು ಮಂಗಳ

ಚಂದ್ರ ಗ್ರಹಣ ಸಮಯ  : 
ಮೇ 16ರಂದು ಬೆಳಗ್ಗೆ 7 ಗಂಟೆಗೆ ಚಂದ್ರಗ್ರಹಣ ಆರಂಭವಾಗಲಿದ್ದು, ಮಧ್ಯಾಹ್ನ 12ರವರೆಗೆ ಇರಲಿದೆ. ಈ ಗ್ರಹಣವು ವೃಷಭ ರಾಶಿಯಲ್ಲಿ ಗೋಚರಿಸಲಿದೆ. ಆದರೆ, ಇದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಗ್ರಹಣದ ನಂತರ, ಸ್ನಾನ ಮತ್ತು ದಾನವನ್ನು ಮಾಡಬೇಕು. ಇದರಿಂದ ಗ್ರಹಣದ ನಕಾರಾತ್ಮಕ ಪರಿಣಾಮಗಳನ್ನು ತಪ್ಪಿಸಬಹುದು. ಈ ಗ್ರಹಣವು ನೈಋತ್ಯ ಯುರೋಪ್, ನೈಋತ್ಯ ಏಷ್ಯಾ, ಆಫ್ರಿಕಾ, ಉತ್ತರ ಅಮೆರಿಕದ ಬಹುತೇಕ ಭಾಗಗಳು, ದಕ್ಷಿಣ ಅಮೆರಿಕ, ಪೆಸಿಫಿಕ್ ಮಹಾಸಾಗರ, ಹಿಂದೂ ಮಹಾಸಾಗರ, ಅಟ್ಲಾಂಟಿಕ್ ಮತ್ತು ಅಂಟಾರ್ಟಿಕಾದಲ್ಲಿ ಗೋಚರಿಸುತ್ತದೆ. 

ನವೆಂಬರ್‌ನಲ್ಲಿ ಮುಂದಿನ ಚಂದ್ರಗ್ರಹಣ :  
ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವು 8 ನವೆಂಬರ್ 2022 ರಂದು ನಡೆಯಲಿದೆ. ಈ ಗ್ರಹಣ ಸಂಜೆ 05:28 ರಿಂದ 07:26 ರವರೆಗೆ ಇರುತ್ತದೆ. ಈ ಗ್ರಹಣವು ಭಾರತದ ಕೆಲವು ಭಾಗಗಳಲ್ಲಿ ಗೋಚರಿಸುತ್ತದೆ. ಹಿಂದೂ ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಗ್ರಹಣದ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಗ್ರಹಣದ ಸಮಯದಲ್ಲಿ ತಿನ್ನುವುದು ಮತ್ತು ಕುಡಿಯುವುದು, ದೇವಾಲಯದ ಬಾಗಿಲುಗಳನ್ನು ತೆರೆದಿರುವುದು, ಗರ್ಭಿಣಿಯರು ಚೂಪಾದ ವಸ್ತುಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ.  

ಇದನ್ನೂ ಓದಿ : ಅಕ್ಷಯ ತೃತೀಯದಲ್ಲಿ 3 ರಾಜಯೋಗಗಳು! ಈ ಶುಭ ಮುಹೂರ್ತದಲ್ಲಿ ಶಾಪಿಂಗ್ ಮಾಡಿದರೆ ಅಪಾರ ಐಶ್ವರ್ಯ ಪ್ರಾಪ್ತಿ

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More