Home> Lifestyle
Advertisement

Jupiter Transit 2022: ನವೆಂಬರ್ 24 ರಿಂದ ದೇವ ಗುರು ಬೃಹಸ್ಪತಿಯ ನೇರ ನಡೆ ಆರಂಭ, ಈ ರಾಶಿಯ ಜನರ ಮೇಲೆ ಪ್ರಭಾವ

Guru Margi 2022: ಯಾರ ಜಾತಕದಲ್ಲಿ ಗುರುವಿನ ಸ್ಥಾನವು ಪ್ರಬಲವಾಗಿರುತ್ತದೆಯೋ, ಅವರು ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಮತ್ತೊಂದೆಡೆ, ಗುರುವಿನ ದುರ್ಬಲ ಸ್ಥಾನಮಾನ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು.
 

Jupiter Transit 2022: ನವೆಂಬರ್ 24 ರಿಂದ ದೇವ ಗುರು ಬೃಹಸ್ಪತಿಯ ನೇರ ನಡೆ ಆರಂಭ, ಈ ರಾಶಿಯ ಜನರ ಮೇಲೆ ಪ್ರಭಾವ

Guru Margi 2022: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹವು ತನ್ನ ನಡೆ ಬದಲಾಯಿಸಿದಾಗ, ಅದು ಪ್ರತಿಯೊಂದು ರಾಶಿಗಳ ಜನರ ಜೀವನದ ಮೇಲೆ ಒಳ್ಳೆಯ ಅಥವಾ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಪ್ರತಿ ಗ್ರಹವು ಒಂದು ನಿರ್ಧಿಷ್ಟ ಕಾಲಾವಧಿಯ ನಂತರ ತನ್ನ ನಡೆಯನ್ನು ಬದಲಾಯಿಸುತ್ತದೆ ಮತ್ತು ಇದನ್ನು ಗ್ರಹಗಳ ಪರಿಚಲನೆ ಎನ್ನಲಾಗುತ್ತದೆ, ಇದನ್ನು ರಾಶಿ ಪರಿವರ್ತನೆ ಅಥವಾ ನಡೆ ಪರಿವರ್ತನೆ ಎಂದೂ ಕೂಡ ಕರೆಯಲಾಗುತ್ತದೆ.  ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನವೆಂಬರ್ 24 ಬಹಳ ವಿಶೇಷವಾದ ದಿನವೆಂದು ಸಾಬೀತಾಗಲಿದೆ. ಏಕೆಂದರೆ ಈ ದಿನ ದೇವ ಗುರು ಬೃಹಸ್ಪತಿಯು ತನ್ನ ನಡೆಯನ್ನು ಬದಲಾಯಿಸಲಿದ್ದಾನೆ. ಜಾತಕದಲ್ಲಿ ಗುರು ಪ್ರಬಳವಾಗಿದ್ದರೆ ಅದೃಷ್ಟವು ಯಾವಾಗಲೂ ಹೊಳೆಯುತ್ತದೆ ಎಂದು ಹೇಳಲಾಗುತ್ತದೆ. ಆದರೆ ಗುರುವಿನ ಸ್ಥಾನವು ದುರ್ಬಲವಾಗಿರುವ ಜಾತಕವು ವೈಫಲ್ಯಗಳನ್ನು ಎದುರಿಸಬೇಕಾಗುತ್ತದೆ.

ಈ ರಾಶಿಯವರಿಗೆ ಗುರುವಿನ ನಡೆ ಬದಲಾವಣೆಯಿಂದ ಲಾಭ ಸಿಗಲಿದೆ

ಈ ಬಾರಿ ನವೆಂಬರ್ 24 ರಂದು ಮೀನ ರಾಶಿಯಲ್ಲಿ ಗುರು ಪ್ರತ್ಯಕ್ಷವಾಗಲಿದ್ದು, ಈ ಕಾರಣದಿಂದಾಗಿ ಗುರುಗ್ರಹದ ಸಂಚಾರ ನೇರವಾಗಿರುತ್ತದೆ. ಗುರು ಮಾರ್ಗಿಯಿಂದ ಯಾವ 6 ರಾಶಿಯವರ ಅದೃಷ್ಟ ಬದಲಾಗಲಿದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ,

ಮೇಷ ರಾಶಿ
ನವೆಂಬರ್ 24 ರಂದು ಗುರುವಿನ ಮೀನರಾಶಿಯಲ್ಲಿನ  ಸಂಚಾರ ಮೇಷ ರಾಶಿಯವರಿಗೆ ಶುಭ ಪರಿಣಾಮಗಳನ್ನು ಹೊತ್ತು ತರಲಿದೆ. ಮೇಷ ರಾಶಿಯ ಜನರು ತಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ ಮತ್ತು ಉದ್ಯೋಗ ಕ್ಷೇತ್ರದಲ್ಲಿಯೂ ಪ್ರಗತಿಯನ್ನು ಸಾಧಿಸುತ್ತಾರೆ. ಇದಲ್ಲದೆ, ಹಣಕಾಸಿನ ಲಾಭದ ಸಾಧ್ಯತೆಗಳಿವೆ ಮತ್ತು ವ್ಯಾಪಾರದಲ್ಲಿ ಲಾಭವಿದೆ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಗುರು ಮಾರ್ಗಿ ಶುಭ ಸಂಕೇತಗಳನ್ನು ನೀಡುತ್ತಿದೆ. ನೀವು ಎಲ್ಲಾದರೂ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ನವೆಂಬರ್ 24 ರ ನಂತರ ನಿಮ್ಮ ಉತ್ತಮ ಸಮಯ ಆರಂಭವಾಗಲಿದೆ. ಇದಲ್ಲದೇ ಮದುವೆಯ ನಿರೀಕ್ಷೆಯಲ್ಲಿರುವವರಿಗೆ  ಕಂಕಣಬಲ ಕೂಡಿ ಬರುವ ಸಾಧ್ಯತೆ ಇದೆ. ಇದಲ್ಲದೆ, ಮಗುವನ್ನು ನಿರೀಕ್ಷಿಸುತ್ತಿರುವ ದಂಪತಿಗಳಿಗೂ ಕೂಡ ಒಳ್ಳೆಯ ಸುದ್ದಿ ಸಿಗಬಹುದು. 

ಕನ್ಯಾ ರಾಶಿ
ಗುರುವು ಸರಿಯಾದ ಮಾರ್ಗದಲ್ಲಿದ್ದಾಗ ಕನ್ಯಾ ರಾಶಿಯ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರಲಿವೆ. ನೀವು ವ್ಯಾಪಾರ ಮಾಡುತ್ತಿದ್ದರೆ ನಿಮಗೆ ಲಾಭ ಸಿಗಲಿದೆ ಮತ್ತು ನಿಮ್ಮ ಆರ್ಥಿಕ ಸ್ಥಿತಿಯೂ ಬಲವಾಗಲಿದೆ. ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ ಮತ್ತು ಕೆಲಸದಲ್ಲಿ ಯಶಸ್ಸು ಸಿಗಲಿದೆ. ಯಾರೊಂದಿಗಾದರೂ ಪಾರ್ಟ್ನರ್ ಶಿಪ್ ಮಾಡುವ ಮೂಲಕ ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರು ಸಹ ಗುರು ಮಾರ್ಗಿಯಿಂದ ಲಾಭ ಪಡೆಯಲಿದ್ದಾರೆ ಮತ್ತು ಅವರ ಅದೃಷ್ಟ ಬದಲಾಗಲಿದೆ. ಹೀಗಾಗಿ ಇವರು ಯಾವ ಕೆಲಸದಲ್ಲಿ ಕೈ ಹಾಕಿದರೂ ಯಶಸ್ಸು ಸಿಗುತ್ತದೆ. ಉದ್ಯೋಗಸ್ಥರು ಹೊಸ ಜವಾಬ್ದಾರಿಗಳನ್ನು ಪಡೆಯಬಹುದು. ಉದ್ಯಮವನ್ನು ಪ್ರಾರಂಭಿಸುವ ಆಲೋಚನೆಯಲ್ಲಿರುವವರಿಗೂ ಇದು ಉತ್ತಮ ಸಮಯ.

ಇದನ್ನೂ ಓದಿ-Rahu Gochar: 2023ರಲ್ಲಿ ಈ ರಾಶಿಯವರಿಗೆ ದಯೆ ತೋರಲಿದ್ದಾನೆ ರಾಹು

ಕುಂಭ ರಾಶಿ
ಗುರು ಮಾರ್ಗಿ ವ್ಯಾಪಾರಸ್ಥರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಲಿದೆ ಮತ್ತು ಅವರು ಬಹಳಷ್ಟು ಪ್ರಯೋಜನಗಳನ್ನು ಪಡೆಯುವ ಸಾಧ್ಯತೆ ಇದೆ. ಉದ್ಯೋಗ ಬದಲಾಯಿಸಲು ಯೋಚಿಸುತ್ತಿರುವ ಜನರಿಗೆ ಹೊಸ ಉದ್ಯೋಗದ ಆಫರ್ ಗಳು ಬರಲಿವೆ. ಇದರೊಂದಿಗೆ, ಮನೆಯಲ್ಲಿ ಯಾವುದೇ ಶುಭ ಅಥವಾ ಮಂಗಳ ಕಾರ್ಯವನ್ನು ಆಯೋಜಿಸಬಹುದು. ಕುಟುಂಬದಲ್ಲಿ ಪ್ರೀತಿ ಹೆಚ್ಚಾಗಲಿದೆ ಮತ್ತು ಪರಸ್ಪರ ಭಿನ್ನಾಭಿಪ್ರಾಯಗಳು ಕೊನೆಗೊಳ್ಳಲಿವೆ.

ಇದನ್ನೂ ಓದಿ-Chanakya Niti: ಈ ಸಣ್ಣ ತಪ್ಪಿನಿಂದಾಗಿ ನೀವು ಎಷ್ಟೇ ಕಷ್ಟಪಟ್ಟರೂ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ

ಮೀನ ರಾಶಿ
ದೇವಗುರು ಬೃಹಸ್ಪತಿಯ ನೇರ ನಡೆ ಮೀನ ರಾಶಿಯ ಜನರ ಮೇಲೆ ಶುಭ ಪರಿಣಾಮವನ್ನು ಬೀರಲಿದೆ. ಈ ರಾಶಿಯವರಿಗೆ ಧನಲಾಭ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಇದಲ್ಲದೆ, ಮಗುವನ್ನು ಹೊಂದುವ ಅವಕಾಶಗಳು ಸಹ ಸೃಷ್ಟಿಯಾಗುತ್ತಿವೆ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More