Home> Lifestyle
Advertisement

ನಿಮ್ಮ ಮನೆಯಲ್ಲಿಯೂ ಈ ರೀತಿಯ ಮನಿಪ್ಲಾಂಟ್‌ ಇದೆಯಾ? ಈ ವಿಷಯಗಳ ಬಗ್ಗೆ ಇರಲಿ ಎಚ್ಚರ..! ಇಲ್ಲವಾದರೆ ನಷ್ಟ ಖಂಡಿತಾ

ಮನಿ ಪ್ಲಾಂಟ್ ಅನ್ನು ಯಾವಾಗಲೂ ಆಗ್ನೇಯ ದಿಕ್ಕಿನಲ್ಲಿ ನೆಡಬೇಕು. ಈ ದಿಕ್ಕಿನಲ್ಲಿ ಮನಿ ಪ್ಲಾಂಟ್ ನೆಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ಹೆಚ್ಚಿಸುತ್ತದೆ. 

ನಿಮ್ಮ ಮನೆಯಲ್ಲಿಯೂ ಈ ರೀತಿಯ ಮನಿಪ್ಲಾಂಟ್‌ ಇದೆಯಾ? ಈ ವಿಷಯಗಳ ಬಗ್ಗೆ ಇರಲಿ ಎಚ್ಚರ..! ಇಲ್ಲವಾದರೆ ನಷ್ಟ ಖಂಡಿತಾ

ನವದೆಹಲಿ : ಅನೇಕ ಜನರು ಮನೆಯಲ್ಲಿ ಮನಿ ಪ್ಲಾಂಟ್ (Money Plant) ನೆಡುತ್ತಾರೆ. ಅದು ಮನೆಯ ಸೌಂದರ್ಯವನ್ನೂ ಹೆಚ್ಚಿಸುತ್ತದೆ ಜೊತೆಗೆ ಮನೆಯ ಅದೃಷ್ಟವನ್ನೂ ಬದಲಿಸುತ್ತದೆ ಎನ್ನಲಾಗಿದೆ. ಆದರೆ ಅನೇಕ ಜನರಿಗೆ ಮನಿ ಪ್ಲಾಂಟ್‌ ಅನ್ನು ಮನಯಲ್ಲಿ ಯಾವ ರೀತಿ ಹಾಕಬೇಕು ಎನ್ನುವುದೇ ತಿಳಿದಿರುವುದಿಲ್ಲ. ಇದರಿಂದಾಗಿ  ಅನೇಕ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಯಾವ ರೀತಿಯ ಮನಿ ಪ್ಲಾಂಟ್ ಅನ್ನು ಮನೆಯಲ್ಲಿ ನೆಡಬೇಕು (Direction for money plant) ಅಥವಾ ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದರ ಮಾಹಿತಿಯೇ ಹಲವರಿಗೆ ಇರುವುದಿಲ್ಲ. ಅಲ್ಲದೆ, ಯಾವ ರೀತಿಯ ಮನಿ ಪ್ಲಾಂಟ್ ಅನ್ನು ಮನೆಯಲ್ಲಿ ನೆಡಬೇಕು ಎಂಬುದರ ಬಗ್ಗೆಯೂ ತಿಳಿದಿರುವುದಿಲ್ಲ. ಹಾಗಿದ್ದರೆ ಯಾವ ರೀತಿಯ ಮನಿ ಪ್ಲಾಂಟ್ ನೆಡಬೇಕು ಅಥವಾ ಯಾವ ರೀತಿಯ ಮನಿ ಪ್ಲಾಂಟ್‌ ನೆಟ್ಟರೆ ಲಾಭವಾಗಲಿದೆ (benefit of money plant) ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. 

ಮನೆಯ ಈ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇರಿಸಿ :

ಮನಿ ಪ್ಲಾಂಟ್ (Money palnt) ಅನ್ನು ಯಾವಾಗಲೂ ಆಗ್ನೇಯ ದಿಕ್ಕಿನಲ್ಲಿ ನೆಡಬೇಕು. ಈ ದಿಕ್ಕಿನಲ್ಲಿ ಮನಿ ಪ್ಲಾಂಟ್ ನೆಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ಹೆಚ್ಚಿಸುತ್ತದೆ. 

ಇದನ್ನೂ ಓದಿ : ಮನೆಯಲ್ಲಿ ತುಳಸಿ ಇದ್ದರೆ ಸಾಲದು, ತುಳಸಿ ಗಿಡಕ್ಕೆ ಸಂಬಂಧಿಸಿದಂತೆ ಈ ತಪ್ಪುಗಳಾಗದಂತೆ ನೋಡಿಕೊಳ್ಳಿ

ಈ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇಡಬೇಡಿ :
ಮನಿ ಪ್ಲಾಂಟ್ ಅನ್ನು ಯಾವತ್ತೂ ಈಶಾನ್ಯ ದಿಕ್ಕಿನಲ್ಲಿ (Money plant direction) ಇಡಬಾರದು. ಈ ದಿಕ್ಕಿನಲ್ಲಿ ಮನಿ ಪ್ಲಾಂಟ್‌ ನೆಟ್ಟರೆ, ಸಾಕಷ್ಟು ಹಣವನ್ನು ಕಳೆದುಕೊಳ್ಳಬೇಕಾಗಬಹುದು. ಈ ದಿಕ್ಕು ಗುರುವಿಗೆ ಸಂಬಂಧಿಸಿದ್ದು ಎನ್ನಲಾಗಿದೆ. ಇನ್ನು ಮನಿ ಪ್ಲಾಂಟ್ ರಾಕ್ಷಸರ ಗುರು ಶುಕ್ರನಿಗೆ (Venus) ಸೇರಿದ್ದಾಗಿದೆ. ಇಬ್ಬರೂ ಪರಸ್ಪರ ಶತ್ರುಗಳು. ಹಾಗಾಗಿ, ಈ ದಿಕ್ಕಿನಲ್ಲಿ ಮನಿ ಪ್ಲಾಂಟ್‌ ಅನ್ನು ನೆಡುವುದು ಮನೆಯಲ್ಲಿ ಋಣಾತ್ಮಕತ ಶಕ್ತಿಯನ್ನು ಹೆಚ್ಚಿಸುತ್ತದೆ. 

ಇಂತಹ ಸ್ಥಳದಲ್ಲಿ ಮನಿ ಪ್ಲಾಂಟ್ ಇಡಬೇಡಿ:
ಮನಿ ಪ್ಲಾಂಟ್ ಅನ್ನು ಎಂದಿಗೂ ಹೊರಗೆ (where to keep money palnt) ಇಡಬಾರದು. ಅಂದರೆ ಎಲ್ಲರಿಗೂ ಕಾಣುವಂತೆ ಮನಿ  ಪ್ಲಾಂಟ್‌ ಇಡಬಾರದು. ಮನಿ ಪ್ಲಾಂಟ್‌ ಅನ್ನು ಯಾವತ್ತೂ  ಯಾರಿಗೂ ಕಾಣದಂತೆ ಜನರಿಂದ ಮರೆಮಾಡಬೇಕು. ಅನೇಕ ಜನರ ಕೆಟ್ಟ ದೃಷ್ಟಿಯಿಂದಾಗಿ, ಮನಿ ಪ್ಲಾಂಟ್ ಒಣಗಿ ಹೋಗುತ್ತದೆ ಎನ್ನಲಾಗಿದೆ. 

ಇದನ್ನೂ ಓದಿ : Astrology: ಈ 4 ರಾಶಿಚಕ್ರದ ಜನರು ಜನ್ಮತಃ ಅದೃಷ್ಟವಂತರು, ಇವರು ಇತರರಿಗೆ ಸಹಾಯ ಮಾಡುವಲ್ಲಿಯೂ ಹಿಂದೆ ಸರಿಯುವುದಿಲ್ಲ

ಮನಿ ಪ್ಲಾಂಟ್‌ನ ಎಲೆಗಳನ್ನು ಈ ರೀತಿ ಇರಿಸಿ :
ಮನಿ ಪ್ಲಾಂಟ್ ಒಣಗುತ್ತಿದ್ದರೆ ಅದನ್ನು ತಕ್ಷಣವೇ ತೆಗೆಯಬೇಕು. ಇನ್ನು ಈ ಗಿಡದ ಎಲೆಗಳು ನೆಲಕ್ಕೆ ತಾಗದಂತೆ ನೋಡಿಕೊಳ್ಳಬೇಕು. ಈ ಗಿಡದ ಬಳ್ಳಿ ಯಾವತ್ತೂ ಮೇಲೇರುತ್ತಾ ಹೋಗಬೇಕು. ಇದನ್ನು ನೆಲಕ್ಕೆ ತಾಗಲು ಬಿಡಬಾರದು. ಇದರ ಎಲೆ, ಬಳ್ಳಿ ನೆಲಕ್ಕೆ ತಾಗಿದರೆ ಹಣಕಾಸಿನ ನಷ್ಟವನ್ನು ಉಂಟುಮಾಡುತ್ತದೆ.

(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಸಲಹೆಗಳನ್ನು ಅನುಸರಿಸುವ ಮೊದಲು, ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರನ್ನು ಸಂಪರ್ಕಿಸಿ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More