Home> Lifestyle
Advertisement

ಹೊಸ ವರ್ಷದಲ್ಲಿ ಈ ರಾಶಿಯವರ ಅದೃಷ್ಟ ತೆರೆಯಲಿದೆ, ಸಿಗಲಿದೆ ಪದೋನ್ನತಿ

 2022 ರ ರಾಶಿ ಭವಿಷ್ಯದ ಬಗ್ಗೆ ಹೇಳುವುದಾದರೆ, ಈ ವರ್ಷ ವೃಷಭ ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ.

ಹೊಸ  ವರ್ಷದಲ್ಲಿ ಈ ರಾಶಿಯವರ ಅದೃಷ್ಟ ತೆರೆಯಲಿದೆ, ಸಿಗಲಿದೆ ಪದೋನ್ನತಿ

ನವದೆಹಲಿ : ಗ್ರಹಗಳ ಚಲನೆ ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ. ಜ್ಯೋತಿಷ್ಯವು (Astrology) ಗ್ರಹಗಳ ಚಲನೆಗೆ ಅನುಗುಣವಾಗಿ ಎಲ್ಲಾ 12 ರಾಶಿಚಕ್ರ (Zodiac sign) ಚಿಹ್ನೆಗಳ ಭವಿಷ್ಯವನ್ನು ನೀಡುತ್ತದೆ. 2022 ರ ರಾಶಿ ಭವಿಷ್ಯದ ಬಗ್ಗೆ ಹೇಳುವುದಾದರೆ, ಈ ವರ್ಷ ವೃಷಭ ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. 2022 ರ ವರ್ಷವು ವೃಷಭ ರಾಶಿಯ ಜನರ ಜೀವನದ ವಿವಿಧ ಅಂಶಗಳನ್ನು ಹೇಗೆ ಪರಿಣಾಮ ಬೀರಲಿದೆ.  

ವೃಷಭ ರಾಶಿ ಭವಿಷ್ಯ 2022 (Taurus Horoscope 2022) :
ವೃತ್ತಿ  : 

2022 ವೃಷಭ ರಾಶಿಯವರಿಗೆ  (Taurus Horoscope 2022) ವಿಶೇಷ ಉಡುಗೊರೆಗಳನ್ನು ತರುತ್ತಿದೆ. ಒಂಬತ್ತನೇ ಮನೆಯಲ್ಲಿ ಶನಿಯು (Shani dev) ಅದೃಷ್ಟದ ಬಾಗಿಲು ತೆರೆಯುತ್ತಿದ್ದರೆ, ಹತ್ತನೇ ಮನೆಯಲ್ಲಿ ಗುರುವು ಲಾಭ ಮತ್ತು ಪ್ರತಿಷ್ಠೆ ಪ್ರಗತಿಗೆ ದಾರಿ ತೆರೆಯುತ್ತದೆ. ಈ ವರ್ಷ ವ್ಯಾಪಾರ ಮತ್ತು ಉದ್ಯೋಗ ಎರಡರಲ್ಲೂ ಉತ್ತಮ ಯೋಗವಿದೆ. ಹನ್ನೆರಡನೇ ಮನೆಯಲ್ಲಿ ರಾಹು ಖರ್ಚುಮಾಡಿಸುತ್ತಾನೆ. ಜೊತೆಯಲ್ಲಿ ಲಾಭದ ಮಾರ್ಗಗಗಳು ಕೂಡಾ ತೆರೆಯಲಿದೆ. ಆರನೇ ಮನೆಯಲ್ಲಿ ಕೇತು ಗುಪ್ತ ಶತ್ರುಗಳನ್ನು ಹೆಚ್ಚಿಸುತ್ತಾನೆ. ಆ ಶತ್ರುಗಳು ನಿಮ್ಮಗಿಷ್ಟವಾದ ವಸ್ತುಗಳನ್ನು ನಿಮ್ಮಿಂದ ದೂರ ಮಾಡಬಹುದು. ನಿಮ್ಮ ಸಾಂಪ್ರದಾಯಿಕ ಚಿಂತನೆಯಿಂದ ಹೊರಬರಲು ಸಾಧ್ಯವಾದರೆ, ಗುರು-ಶನಿ-ರಾಹು ಈ ತ್ರಿಮೂರ್ತಿಗಳು ಈ ವರ್ಷ ನಿಮ್ಮನ್ನು ಆರ್ಥಿಕವಾಗಿ ಉನ್ನತಿಯ ಶಿಖರಕ್ಕೆ ಏರಿಸುತ್ತವೆ. 

ಇದನ್ನೂ ಓದಿ: Grah Dosh: ಪ್ರತಿ ಗ್ರಹದ ಅಶುಭ ಪರಿಣಾಮವನ್ನು ನಿವಾರಿಸುತ್ತೆ ಈ ಶಕ್ತಿಯುತ ಪರಿಹಾರ

ಕೌಟುಂಬಿಕ ಜೀವನ :
ನೀವು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಜನಿಸಿದರೆ, ಜೀವನ ಸಂಗಾತಿಯ ಕಾರಣದಿಂದಾಗಿ ಆಸ್ಪತ್ರೆಗೆ ಭೇಟಿ ನೀಡಬೇಕಾಗಬಹುದು. ಪೋಷಕರೊಂದಿಗೆ ಜಗಳವಾಡುವುದನ್ನು ತಪ್ಪಿಸಿ ಮತ್ತು ವಿವಾದವನ್ನು ಶಾಂತಿಯುತವಾಗಿ ಪರಿಹರಿಸಲು ಪ್ರಯತ್ನಿಸಿ. ದೈಹಿಕ ದೌರ್ಬಲ್ಯ ಮತ್ತು ಹೆದರಿಕೆಯಿಂದ ಜೀವನ ಸಂಗಾತಿಯಿಂದ ಅಂತರ ಕಾಯ್ದುಕೊಳ್ಳಬಹುದು. 

ವಿದ್ಯಾರ್ಥಿ ಜೀವನ :
ಈ ವರ್ಷ ಹನ್ನೆರಡನೇ ಮನೆಯಲ್ಲಿ ರಾಹು ಮತ್ತು ಶತ್ರು ಮನೆಯಲ್ಲಿ ಕೇತು (Ketu) ಸ್ಪರ್ಧೆಯಲ್ಲಿ ವಿಜಯದ ಸಾಧ್ಯತೆಯನ್ನು ಕಡಿಮೆ ಮಾಡುತ್ತಿದೆ. ಎಲ್ಲವನ್ನೂ ತಿಳಿದುಕೊಂಡಿದ್ದರೂ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ, ಇದು ಕಿರಿಕಿರಿಯನ್ನು ಹೆಚ್ಚಿಸುತ್ತದೆ. ನಿಮ್ಮ ಜಾತಕದಲ್ಲಿ ಶನಿಯು ಶುಭ ಸ್ಥಾನದಲಿದ್ದು, ಅದೃಷ್ಟ ರೇಖೆ ಉತ್ತಮವಾಗಿದ್ದರೆ ಹೆಚ್ಚಿನ ಪ್ರಯತ್ನದಿಂದ ಯಶಸ್ಸು ಸಾಧ್ಯ. ಆದರೆ ವಿದೇಶದಲ್ಲಿ ಉದ್ಯೋಗ ಪಡೆಯಲು ಅಥವಾ ಉನ್ನತ ಶಿಕ್ಷಣಕ್ಕಾಗಿ ನೀಡುವ ಪರೀಕ್ಷೆ-ಸಂದರ್ಶನದಲ್ಲಿ ಯಶಸ್ಸು ಖಚಿತವಾಗಿ ಸಿಗಲಿದೆ. 

ಇದನ್ನೂ ಓದಿ : Budh Gochar: 2022ರ ಮೊದಲು ಬುಧ ರಾಶಿ ಪರಿವರ್ತನೆ, ಈ 5 ರಾಶಿಯವರು ಜಾಗರೂಕರಾಗಿರಿ

ಆರೋಗ್ಯ : 
ವರ್ಷದ ಮೊದಲ ಹಂತದಲ್ಲಿ, ತೂಕ ಹೆಚ್ಚಾಗುವುದು, ಮೈಗ್ರೇನ್, ಕಣ್ಣಿನ ಕಾಯಿಲೆಗಳು ಮೊದಲಾದ ಕಾಯಿಲೆಗಳಿಂದ ನೀವು ತೊಂದರೆಗೊಳಗಾಗಬಹುದು. ಪೋಷಕರ ಆರೋಗ್ಯ ಸಮಸ್ಯೆಗಳು (health problems) ಒತ್ತಡಕ್ಕೆ ಕಾರಣವಾಗಬಹುದು. ಈ ವರ್ಷ ನಿಮ್ಮ ಆರೋಗ್ಯ ಸಮಸ್ಯೆಗಳಿಗೆ ರಾಹು-ಕೇತು ಕಾರಣವಾಗಿವೆ. ಆದ್ದರಿಂದ, ಕೆಲವು ಸರಳ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ, ಮೇ ತಿಂಗಳಿನಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು.

ಪರಿಹಾರ :
ಹೆಚ್ಚು ನೀರು (water) ಕುಡಿರಿ. ಪ್ರತಿದಿನ ಕೆಲವು ಹವನ ವಸ್ತುಗಳನ್ನು ಸುಟ್ಟು ಮನೆಯಲ್ಲಿ ಧೂಪವನ್ನು ಹಾಕಿ. 'ಓಂ ಕೃತ್ತಿಕಾ ಸುಹವಮಸ್ತು, ತನ್ಮೇ ಮನಃ ಶಿವ ಸಂಕಲ್ಪಮಸ್ತು.' ಮಂತ್ರವನ್ನು ನಿಯಮಿತವಾಗಿ 28 ಬಾರಿ ಜಪಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More