Home> Lifestyle
Advertisement

Palmistry: ಯಾರ ಹಸ್ತದಲ್ಲಿ ಈ ಚಿಹ್ನೆ ಇರುತ್ತದೆಯೋ ಅವರು 40 ವರ್ಷ ದಾಟುತ್ತಿದ್ದಂತೆಯೇ ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ

ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ, ಅಂಗೈಯಲ್ಲಿ 'H' ಚಿಹ್ನೆಯನ್ನು ಹೊಂದುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಗುರುತು ಹಸ್ತದ 3 ಪ್ರಮುಖ ರೇಖೆಗಳಿಂದ ರಚಿಸಲ್ಪಟ್ಟಿದೆ. 
 

 Palmistry: ಯಾರ ಹಸ್ತದಲ್ಲಿ ಈ ಚಿಹ್ನೆ ಇರುತ್ತದೆಯೋ ಅವರು 40 ವರ್ಷ ದಾಟುತ್ತಿದ್ದಂತೆಯೇ ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ

ಬೆಂಗಳೂರು : ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿ ಕೆಲವು ರೀತಿಯ ಮಂಗಳಕರ ಗುರುತುಗಳನ್ನು ಹೊಂದಿರುವ ಜನರು, ತಮ್ಮ ಜೀವನದಲ್ಲಿ ಬಹಳಷ್ಟು ಯಶಸ್ಸು, ಗೌರವ,  ಸಂಪತ್ತನ್ನು ಪಡೆಯುತ್ತಾರೆ. ಈ ಗುರುತುಗಳು ಹಸ್ತ ರೇಖೆಗಳಿಗಿಂತ ಹೆಚ್ಚು ಶಕ್ತಿಯುತವಾಗಿರುತ್ತವೆ ಎಂದು ಹೇಳಲಾಗುತ್ತದೆ. ಕೆಲವು ಚಿಹ್ನೆಗಳು ವ್ಯಕ್ತಿಯ ಭವಿಷ್ಯವನ್ನು ಬದಲಾಯಿಸಬಹುದು. ಇನ್ನು ಕೆಲವು ಗುರುತುಗಳು ತುಂಬಾ ಅಶುಭಕರವಾಗಿದ್ದು, ಅವುಗಳನ್ನು ಅಂಗೈಯಲ್ಲಿ ಹೊಂದಿದ್ದರೆ ವ್ಯಕ್ತಿಯ ಜೀವನದಲ್ಲಿ ಬಹಳ ಕಷ್ಟವನ್ನು ಎದುರಿಸಬೇಕಾಗುತ್ತದೆ. 

40 ವರ್ಷದ ನಂತರ ಹೊಳೆಯುತ್ತದೆ  ಅದೃಷ್ಟ :
ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ, ಅಂಗೈಯಲ್ಲಿ 'H' ಚಿಹ್ನೆಯನ್ನು ಹೊಂದುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಗುರುತು ಹಸ್ತದ 3 ಪ್ರಮುಖ ರೇಖೆಗಳಿಂದ ರಚಿಸಲ್ಪಟ್ಟಿದೆ. ಈ ಸಾಲುಗಳು ಹೃದಯ ರೇಖೆ, ಅದೃಷ್ಟ ರೇಖೆ ಮತ್ತು ಮಸ್ತಿಷ್ಕ ರೇಖೆ. ಈ ಗುರುತು ಹಸ್ತದ ಮಧ್ಯದಲ್ಲಿ  ಇರುತ್ತದೆ. ಹಸ್ತದಲ್ಲಿ 'H' ಆಕಾರವನ್ನು ಹೊಂದಿರುವ ಜನರು 40 ವರ್ಷಗಳ ನಂತರ ತಮ್ಮ ಜೀವನದಲ್ಲಿ ಅಪಾರ ಪ್ರಗತಿ, ಹಣ ಮತ್ತು ಸಂತೋಷವನ್ನು ಪಡೆಯುತ್ತಾರೆ. ಕೈಯಲ್ಲಿ ಈ ಗುರುತು ಇರುವ ಜನರು ಎಷ್ಟೇ ಬಡ ಕುಟುಂಬಗಳಲ್ಲಿ ಜನಿಸಿದರೂ ಅಥವಾ ಜೀವನದ ಆರಂಭಿಕ ವರ್ಷಗಳಲ್ಲಿ ಎಷ್ಟೇ ಕಷ್ಟಪಡಬೇಕಾದರೂ 40 ವರ್ಷ ದಾಟುತ್ತಿದ್ದಂತೆಯೇ ಅವರ ಜೀವನವು ಸಂಪೂರ್ಣವಾಗಿ ಬದಲಾಗುತ್ತದೆ.

ಇದನ್ನೂ ಓದಿ : ಶನಿ ಸಾಡೇ ಸಾತಿ, ಧೈಯ್ಯಾದಿಂದ ಬಳಲುತ್ತಿರುವವರು ಮೇ 30 ರಂದು ಈ ಕೆಲಸ ಮಾಡಿದರೆ ಸಿಗಲಿದೆ ಎಲ್ಲಾ ಕಷ್ಟಗಳಿಂದ ಮುಕ್ತಿ

ಬಹಳಷ್ಟು ಆಸ್ತಿಯ ಒಡೆಯನಾಗುತ್ತಾರೆ : 
ಈ ಜನರು 40 ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನದಲ್ಲಿ ವೇಗವಾಗಿ ಪ್ರಗತಿ ಹೊಂದುತ್ತಾರೆ. ಅವರೇ ಊಹಿಸಿರದ ಮಟ್ಟಕ್ಕೆ ಬೆಳೆದು ನಿಲ್ಲುತ್ತಾರೆ. ಅಪಾರ ಸಂಪತ್ತನ್ನು ಪಡೆಯುತ್ತಾರೆ. ಪ್ರಪಂಚದ ಎಲ್ಲಾ ಸೌಕರ್ಯಗಳನ್ನು ಅನುಭವಿಸುತ್ತಾರೆ.  ಇವರು ತಮ್ಮ ಜೀವನದಲ್ಲಿ ಮಾಡಿದ ಎಲ್ಲಾ ಹೋರಾಟ ಮತ್ತು ಕಠಿಣ ಪರಿಶ್ರಮದ ಫಲವನ್ನು 40 ವರ್ಷದ ನಂತರ ಪಡೆಯುತ್ತಾರೆ.  40 ವರ್ಷದ ನಂತರದ ಇವರ ಜೀವನ  ಐಷಾರಾಮದಿಂದ ಕೂಡಿರುತ್ತದೆ.  

ಇದನ್ನೂ ಓದಿ : June 2022 Planetary Changes: ಜೂನ್‌ನಲ್ಲಿ 5 ಗ್ರಹಗಳ ರಾಶಿ ಪರಿವರ್ತನೆ, ಈ ರಾಶಿಯವರಿಗೆ ಪ್ರಗತಿ

 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More