Home> Lifestyle
Advertisement

ನಿಮ್ಮ ಕೈಯಲ್ಲೂ ಈ ರೇಖೆಗಳಿದ್ದರೆ ಅದೃಷ್ಟವೂ ಅದೃಷ್ಟ..!

ಹಸ್ತರೇಖಾ ಶಾಸ್ತ್ರದ ಪ್ರಕಾರ, ಕೈಯಲ್ಲಿರುವ ರೇಖೆಗಳ ಜೊತೆಗೆ, ಅದರಲ್ಲಿರುವ ಗುರುತುಗಳು, ಅಂಗೈಗಳ ವಿನ್ಯಾಸ, ಅದರ ಬಣ್ಣ, ಮೃದುತ್ವ ಮುಂತಾದ ವಿಷಯಗಳು ಸಹ ಬಹಳ ಮುಖ್ಯ.

ನಿಮ್ಮ ಕೈಯಲ್ಲೂ ಈ ರೇಖೆಗಳಿದ್ದರೆ ಅದೃಷ್ಟವೂ ಅದೃಷ್ಟ..!

ನವದೆಹಲಿ : ಹಸ್ತರೇಖಾ ಶಾಸ್ತ್ರದ (Palmistry) ಪ್ರಕಾರ, ಕೈಯಲ್ಲಿರುವ ರೇಖೆಗಳ ಜೊತೆಗೆ, ಅದರಲ್ಲಿರುವ ಗುರುತುಗಳು, ಅಂಗೈಗಳ ವಿನ್ಯಾಸ, ಅದರ ಬಣ್ಣ, ಮೃದುತ್ವ ಮುಂತಾದ ವಿಷಯಗಳು ಸಹ ಬಹಳ ಮುಖ್ಯ. ಇದು ಮಾತ್ರವಲ್ಲ, ಈ ವಿಷಯಗಳು ಭವಿಷ್ಯದಲ್ಲಿ ಆಗುವ ಧನಲಾಭದ ಬಗ್ಗೆಯೂ ತಿಳಿಸುತ್ತದೆ. ಇದರೊಂದಿಗೆ, ವ್ಯಕ್ತಿಯ ಆರ್ಥಿಕ ಸ್ಥಿತಿಯಲ್ಲಿ ಆಗುತ್ತಿರುವ ಒಳ್ಳೆಯ ಮತ್ತು ಕೆಟ್ಟ ಬದಲಾವಣೆಗಳ ಬಗ್ಗೆಯೂ ತಿಳಿಸುತ್ತದೆ.  ಇಂದು, ಜೀವನದಲ್ಲಿ (Life) ಹಠಾತ್ ಧನ ಲಾಭವಾಗುವಂಥಹ ಮೂರು ಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ.. 

ಮಸ್ತಿಷ್ಕ ರೇಖೆ  : 

ವ್ಯಕ್ತಿಯ ಅಂಗೈಯಲ್ಲಿರುವ ಜೀವನ ರೇಖೆಯು (life line)ಸರಿಯಾದ ಸ್ಥಳದಲ್ಲಿದ್ದು, ಮಸ್ತಿಷ್ಕ ರೇಖೆ  2 ಭಾಗಗಳಾಗಿ ವಿಂಗಡಣೆಯಾಗಿದ್ದು, ಅಂಗೈಯಲ್ಲಿ ತ್ರಿಕೋನದಂತೆ ರೂಪುಗೊಂಡಿದ್ದರೆ ಅಂತಹ ವ್ಯಕ್ತಿಗೆ ಧನ (Money) ಲಾಭವಾಗುತ್ತಿರುತ್ತದೆ. ಇಂಥಹ ರೇಖೆ ಕೈಯಲ್ಲಿದ್ದರೆ ಅವರಿಗೆ ಅನಿರೀಕ್ಷಿತವಾಗಿ ಪದೇಪದೇ ಧನಲಾಭವಾಗುತ್ತಿರುತ್ತದೆ. 

ಇದನ್ನೂ ಓದಿ : Financial Problem Solution : ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆಯೇ? ಹಾಗಿದ್ರೆ ಇಲ್ಲಿದೆ ಪರಿಹಾರ..!

ಈ ರೇಖೆಗಳು ಕೂಡಾ ಅದೃಷ್ಟ : 
ಭಾಗ್ಯರೇಖೆ ಅಂಗೈಯ ಕೊನೆಯ ಭಾಗ ಅಂದರೆ ಮಣಿಗಂಟಿನಿಂದ ಪ್ರಾರಂಭವಾಗಿದ್ದು, ಶನಿ ಪರ್ವತದವರೆಗೆ ತಲುಪಿರಬೇಕು. ಜೊತೆಗೆ ಭಾಗ್ಯ ರೇಖೆಯ ಮಧ್ಯೆ ಯಾವುದೇ ರೀತಿಯ ಅಶುಭ ಗುರುತುಗಳಿರಬಾರದು.  ಹೀಗಿದ್ದರೆ, ವ್ಯಕ್ತಿ ವ್ಯವಹಾರದಲ್ಲಿ (Business) ಯಶಸ್ಸು ಕಾಣುತ್ತಾನೆ. ವ್ಯವಹಾರದಲ್ಲಿ ಯಶಸ್ಸಯ ಎಂದರೆ ಧನಾಗಮನ.. 

ಹಾಗೆಯೇ  ವ್ಯಕ್ತಿಯ ಅಂಗೈ ಅಗಲವಾಗಿದ್ದರೆ, ಬೆರಳುಗಳು ಮೃದುವಾಗಿದ್ದರೆ, ಆ ವ್ಯಕ್ತಿಯು ಶ್ರೀಮಂತನೆಂದು ಸೂಚಿಸುತ್ತದೆ. ಶನಿ ಪರ್ವತ ಅಂದರೆ ಮಧ್ಯ ಬೆರಳಿನ (Middle finger) ಬಳಿ 2 ಅಥವಾ ಹೆಚ್ಚಿನ ಲಂಬ ರೇಖೆಗಳಿದ್ದರೆ, ವ್ಯಕ್ತಿಯು ಸಂಪತ್ತಿನ ಜೊತೆಗೆ ಸಂತೋಷವನ್ನು ಪಡೆಯುತ್ತಾನೆ. ಅದೇ ವೇಳೆ ಮಧ್ಯ ಬೆರಳು ಉಬ್ಬಿದ್ದು,  ಜೀವನ ರೇಖೆ ವಕ್ರವಾಗಿದ್ದರೆ, ಈ ಯೋಗ ಕೂಡ ಬಹಳ ಶುಭವಾಗಿರುತ್ತದೆ. ಇದು ವ್ಯಕ್ತಿಯ ಜೀವನದಲ್ಲಿ ಎಲ್ಲಾ ರೀತಿಯ ಸಂತೋಷವನ್ನು ನೀಡುತ್ತದೆ.

ಇದನ್ನೂ ಓದಿ : Vastu Shastra: ಮನೆಯಲ್ಲಿರುವ ಈ ವಸ್ತುಗಳಿಂದ ಸಮೃದ್ಧಿಯ ಬದಲು ಹಾನಿಯಾಗಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More