Home> Lifestyle
Advertisement

Chanakya Niti: ಲಕ್ಷ್ಮಿದೇವಿಯ ಆಶೀರ್ವಾದ ಬೇಕಾದರೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿರಿ

Chanakya Niti: ತಾಯಿ ಲಕ್ಷ್ಮಿದೇವಿಯ ಅನುಗ್ರಹದಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಹೀಗಾಗಿ ಬಹುತೇಕ ಜನರು ಸಂಪತ್ತಿನ ದೇವತೆಯನ್ನು ಮೆಚ್ಚಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಚಾಣಕ್ಯ ನೀತಿಯಲ್ಲಿ ಹೇಳಿರುವ ಕೆಲವು ವಿಷಯಗಳನ್ನು ಅಳವಡಿಸಿಕೊಂಡರೆ ನೀವು ಯಾವಾಗಲೂ ಸಂತೋಷವಾಗಿರುತ್ತೀರಿ.

Chanakya Niti: ಲಕ್ಷ್ಮಿದೇವಿಯ ಆಶೀರ್ವಾದ ಬೇಕಾದರೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿರಿ

ನವದೆಹಲಿ: ಆಚಾರ್ಯ ಚಾಣಕ್ಯ ಒಬ್ಬ ಶ್ರೇಷ್ಠ ಅರ್ಥಶಾಸ್ತ್ರಜ್ಞ, ರಾಜತಾಂತ್ರಿಕ ಮತ್ತು ಮಾರ್ಗದರ್ಶಿ. ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಿರುವ ವಿಷಯಗಳು ಇಂದಿಗೂ ಪ್ರಸ್ತುತವಾಗಿವೆ. ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ಪಡೆಯುವ ಪರಿಣಾಮಕಾರಿ ಮಾರ್ಗಗಳನ್ನು ಚಾಣಕ್ಯ ನೀತಿಯಲ್ಲಿ ವಿವರಿಸಲಾಗಿದೆ. ಈ ವಿಷಯಗಳನ್ನು ಅಳವಡಿಸಿಕೊಂಡರೆ ಯಾವುದೇ ವ್ಯಕ್ತಿಯು ಶ್ರೀಮಂತನಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಇಷ್ಟು ಮಾತ್ರವಲ್ಲದೆ ಆತನ ಬಳಿ ಸದಾ ಹಣವಿರುತ್ತದೆ. ಆತನ ಜೀವನದಲ್ಲಿ ಸಂತೋಷ, ಪ್ರಗತಿ, ಸ್ಥಾನ, ಹಣ ಎಲ್ಲವೂ ಸಿಗುತ್ತದೆ. ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾದ ಲಕ್ಷ್ಮಿದೇವಿಯನ್ನು ಮೆಚ್ಚಿಸುವ ಮಾರ್ಗಗಳ ಬಗ್ಗೆ ತಿಳಿಯಿರಿ.  

ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ಪಡೆಯುವ ಮಾರ್ಗಗಳು  

ಚಾಣಕ್ಯನ ನೀತಿಯ ಪ್ರಕಾರ ನೀವು ತಾಯಿ ಲಕ್ಷ್ಮಿದೇವಿಯ ಅನುಗ್ರಹ ಪಡೆಯಬೇಕಾದರೆ ಯಾವಾಗಲೂ ಆಹಾರ ಗೌರವಿಸಿ. ಆಹಾರದ ಮಾತೆ ಅನ್ನಪೂರ್ಣೆ ತಾಯಿ ಲಕ್ಷ್ಮಿಯ ರೂಪ. ಆಹಾರವನ್ನು ವ್ಯರ್ಥ ಮಾಡುವುದು ಅಥವಾ ಅವಮಾನಿಸುವುದು ತಾಯಿ ಅನ್ನಪೂರ್ಣೆಯ ಕೋಪವನ್ನು ಹೆಚ್ಚುತ್ತದೆ. ತಾಯಿ ಲಕ್ಷ್ಮಿದೇವಿ ಅಂತಹ ಮನೆಯಲ್ಲಿ ವಾಸಿಸುವುದಿಲ್ಲ. ಆದರೆ ಆಹಾರ ಗೌರವಿಸುವ ಮನೆಯಲ್ಲಿ ಹಣ ಮತ್ತು ಧಾನ್ಯಗಳ ಕೊರತೆ ಎಂದಿಗೂ ಇರುವುದಿಲ್ಲ.

ಇದನ್ನೂ ಓದಿ: ಚಂದ್ರ ಗ್ರಹಣ ಹೊತ್ತು ತರುವುದು ಈ ರಾಶಿಯವರಿಗೆ ಅದೃಷ್ಟ! ಒಳ್ಳೆಯ ದಿನಗಳು ಅಂದಿನಿಂದಲೇ ಆರಂಭ

- ತಾಯಿ ಲಕ್ಷ್ಮಿದೇವಿಗೆ ಸ್ವಚ್ಛತೆ ಎಂದರೆ ತುಂಬಾ ಇಷ್ಟ. ಸದಾ ಸ್ವಚ್ಛತೆ ಇರುವ ಮನೆಗಳಲ್ಲಿ ತಾಯಿ ಲಕ್ಷ್ಮಿದೇವಿ ನೆಲೆಸುತ್ತಾಳಂತೆ.   

- ಜನರು ಯಾವಾಗಲೂ ಪ್ರೀತಿಯಿಂದ ಒಟ್ಟಿಗೆ ವಾಸಿಸುವ, ಹಿರಿಯರನ್ನು ಗೌರವಿಸುವ ಮತ್ತು ಗಂಡ-ಹೆಂಡತಿ ಪರಸ್ಪರ ಗೌರವಿಸುವ ಮನೆಗಳಲ್ಲಿ ತಾಯಿ ಲಕ್ಷ್ಮಿದೇವಿ ಯಾವಾಗಲೂ ನೆಲೆಸುತ್ತಾಳಂತೆ.

- ಯಾರು ತಮ್ಮ ಆದಾಯದ ಒಂದು ಭಾಗವನ್ನು ದಾನ ಮಾಡುತ್ತಾರೋ ಅವರಿಗೆ ಎಂದಿಗೂ ಹಣದ ಕೊರತೆ ಇರುವುದಿಲ್ಲ. ಹೀಗಗಿಯೇ ಯಾವಾಗಲೂ ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡಬೇಕು.

- ಹಣವನ್ನು ಕೆಟ್ಟ ಅಭ್ಯಾಸಗಳಿಗೆ, ತಪ್ಪು ಕೆಲಸಗಳಿಗೆ ಮತ್ತು ಅನಗತ್ಯವಾಗಿ ಖರ್ಚು ಮಾಡುವವರ ಮೇಲೆ ಲಕ್ಷ್ಮಿದೇವಿ ಕೋಪಿಸಿಕೊಳ್ಳುತ್ತಾಳೆ. ಹೀಗಾಗಿ ಹಣವನ್ನು ಯಾವುದೇ ಕಾರಣಕ್ಕೂ ವ್ಯರ್ಥ ಮಾಡಬಾರದು. ಹಣವನ್ನು ಗೌರವಿಸುವವರ ಮನೆಯಲ್ಲಿ ಲಕ್ಷ್ಮಿದೇವಿ ಸದಾ ಇರುತ್ತಾಳೆಂದು ನಂಬಲಾಗಿದೆ.  

ಇದನ್ನೂ ಓದಿ: Akshaya Tritiya 2023: ಆರು ಶುಭ ಮಹಾಯೋಗಗಳ ನಿರ್ಮಾಣ, ಮಹತ್ವ ಆರು ನೂರು ಪಟ್ಟು ಹೆಚ್ಚು, ಇಲ್ಲಿದೆ ಕಂಪ್ಲೇಟ್ ಮಾಹಿತಿ!

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More